ಹೆಂಡತಿಯ ಐಷಾರಾಮಿ ಆಸೆ ಈಡೇರಿಸಲು ಕಳ್ಳತನಕ್ಕಿಳಿದ ಗಂಡನ ಬಂಧನ

ಬೆಂಗಳೂರು: ಹೆಂಡತಿಯ ಐಷಾರಾಮಿ ಬಯಕೆ ಪೂರೈಸಲು ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್ ಮೂಲದ ವಿನೋದ್ ಕುಮಾರ್ ಕೆಲಸ ಹರಿಸಿ ಕೋಲ್ಕತ್ತಾಕ್ಕೆ ಹೋಗಿ ಕ್ಯಾಬ್ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಇದೇ ವೇಳೆ ಬಾಂಗ್ಲಾ ಮೂಲದ ಸೋನು ಅವರ ಪರಿಚಯವಾಗಿ, ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿ ಬೆಂಗಳೂರಿಗೆ ಶಿಫ್ಟ್ ಆಗಿದ್ದರು. ಮದುವೆಯಾದ ಆರಂಭದಲ್ಲಿ ಬಿಂದಾಸ್ ಆಗಿದ್ದ ಈ ಜೋಡಿ ಲೈಫ್ ನಂತರದ ದಿನಗಳಲ್ಲಿ ಕಷ್ಟಕರವಾಗಿತ್ತು. ಇದನ್ನೂ ಓದಿ: ಮಸೀದಿ, ಮಂದಿರಗಳು ನಿಯಮ ಉಲ್ಲಂಘನೆ ಮಾಡಿದ್ರೆ ಕಠಿಣ ಕ್ರಮದ ಎಚ್ಚರಿಕೆ: ಪ್ರವೀಣ್ ಸೂದ್

ಪತಿ ವಿನೋದ್ ತರುತ್ತಿದ್ದ ಅಲ್ಪ, ಸ್ವಲ್ಪ ಹಣದಿಂದ ಜೀವನ ನಡೆಸಲು ಕಷ್ಟಕರವಾಗಿತ್ತು. ಇದರಿಂದ ಬೇಸರಗೊಂಡ ಸೋನು, ವಿನೋದ್‍ಗೆ ನೀನು ತರುವ ಬಿಡಿಗಾಸು ಯಾವುದಕ್ಕೂ ಸಾಲುತ್ತಿಲ್ಲ ಎಂದು ಚುಚ್ಚಿ, ಚುಚ್ಚಿ ಮಾತನಾಡಲು ಆರಂಭಿಸಿದಳು. ಇದರಿಂದ ಕೋಪಗೊಂಡ ವಿನೋದ್ ಡ್ರೈವಿಂಗ್ ಜೊತೆಗೆ ಮನೆಗಳ್ಳತನ ಮಾಡಲಿ ಶುರುಮಾಡಿದ. ಬೆಳಗಿನ ಸಮಯದಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಾ ಮನೆಗಳನ್ನು ಗುರುತಿಸಿ ರಾತ್ರಿ ನಂಬರ್ ಪ್ಲೇಟ್ ಇಲ್ಲದ ಬೈಕ್‍ನಲ್ಲಿ ಮನೆಗಳಿಗೆ ನುಗ್ಗಿ ಕೈಗೆ ಸಿಕ್ಕಿದ್ದನ್ನು ದೋಚಿ ಪರಾರಿಯಾಗುತ್ತಿದ್ದನು. ಇದನ್ನೂ ಓದಿ: ಕಾಂಗ್ರೆಸ್‌ಗೆ ಅಡ್ರೆಸ್ ಎಲ್ಲಿದೆ, ಅದರ ನಾಯಕರು ಯಾರು?: ಯಡಿಯೂರಪ್ಪ ವ್ಯಂಗ್ಯ

ಕಳ್ಳತನ ಮಾಡುವ ವೇಳೆ ವಿನೋದ್ ಮೊಬೈಲ್‍ವೊಂದನ್ನು ಕದ್ದಿದ್ದ. ಅಲ್ಲದೇ ಇದೇ ಮೊಬೈಲ್‍ನನ್ನೇ ಬಳಸುತ್ತಿದ್ದ ಮತ್ತು ಸಿಸಿಟಿವಿ ದೃಶ್ಯ ಆಧಾರಿಸಿ ಸಂಜಯನಗರ ಪೊಲೀಸರು ಇದೀಗ ವಿನೋದ್‍ನನ್ನು ಸಾಕ್ಷಿ ಸಮೇತ ಬಂಧಿಸಿದ್ದಾರೆ. ಸಂಜಯನಗರ ಒಂದೇ ಠಾಣಾ ವ್ಯಾಪ್ತಿಯಲ್ಲಿ ಬರೋಬ್ಬರಿ ಏಳು ಮನೆಗಳಲ್ಲಿ ವಿನೋದ್ ಕಳ್ಳತನ ಮಾಡಿರುವುದು ಪತ್ತೆಯಾಗಿದ್ದು ತನಿಖೆ ಮುಂದುವರೆಸಲಾಗಿದೆ.

Comments

Leave a Reply

Your email address will not be published. Required fields are marked *