ಪತ್ನಿ ಕೊಲೆ ಮಾಡಿ ಅಂತ್ಯಕ್ರಿಯೆ – ಕೊನೆ ಕ್ಷಣದಲ್ಲಿ ಎಂಟ್ರಿ ಕೊಟ್ಟ ಪೊಲೀಸರು, ಅರೆಸ್ಟ್ ಆದ ಗಂಡ

ಚಿಕ್ಕಬಳ್ಳಾಪುರ: ಪತ್ನಿಯ ಶೀಲ ಶಂಕಿಸಿ ಕುಡಿದ ಅಮಲಿನಲ್ಲಿ ಕೊಲೆ ಮಾಡಿ, ಆಕೆಯ ಅಂತ್ಯಕ್ರಿಯೆ ಮಾಡಲು ಮುಂದಾದ ಗಂಡನನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.

ನೇರಳಘಟ್ಟ ಗ್ರಾಮದ ಲಕ್ಷ್ಮಯ್ಯ ಬಂಧಿತ ಪತಿ.

ಪತ್ನಿ ರಾಧಮ್ಮನನ್ನು, ಲಕ್ಷ್ಮಯ್ಯ ಕುಡಿದ ಅಮಲಿನಲ್ಲಿ ಮನೆಯ ಗೋಡೆಗೆ ಗುದ್ದಿ ಕೊಲೆ ಮಾಡಿದ್ದ. ತದನಂತರ ಸಂಬಂಧಕರಿಗೆ ಕರೆ ಮಾಡಿ ಆಕಸ್ಮಿಕ ಕೆಳಗೆ ಬಿದ್ದು ಸತ್ತು ಹೋದಳು ಎಂದು ಕಥೆ ಕಟ್ಟಿ ಅಂತ್ಯಕ್ರಿಯೆ ಮಾಡಲು ಸಕಲ ತಯಾರಿ ನಡೆಸಿದ್ದ. ಇದನ್ನೂ ಓದಿ: ಹೇಮಾವತಿ ಎಡದಂಡೆ ನಾಲೆಗಳಿಗಿಲ್ಲ ನೀರು – ಕೆ.ಆರ್ ಪೇಟೆ, ನಾಗಮಂಗಲ ರೈತರು ಕಂಗಾಲು

ಗ್ರಾಮಸ್ಥರ ಮಾಹಿತಿ ಮೇರೆಗೆ ಕೊನೆ ಕ್ಷಣದಲ್ಲಿ ಪೊಲೀಸರು ಎಂಟ್ರಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಗಂಡನೇ ಆಕೆಯನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿ ಲಕ್ಷ್ಮಯ್ಯನನ್ನ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: 43 ಕೋಟಿ ಕೊಟ್ರೆ ಅಮೆರಿಕದ ʻಗೋಲ್ಡ್‌ ಕಾರ್ಡ್‌ʼ – ಪೌರತ್ವ ಪಡೆಯಲು ಶ್ರೀಮಂತ ವಲಸಿಗರಿಗೆ ಟ್ರಂಪ್‌ ಆಫರ್‌

ಲಕ್ಷ್ಮಯ್ಯ, ಪತ್ನಿಗೂ ಮದ್ಯಸೇವನೆಯ ಅಭ್ಯಾಸವನ್ನು ಕಲಿಸಿದ್ದನು. ಮಗನ ಅನಾರೋಗ್ಯ ಕಾರಣದಿಂದ ಮನನೊಂದಿದ್ದ ರಾಧಮ್ಮ ಕುಡಿತದ ಅಭ್ಯಾಸ ಮಾಡಿಕೊಂಡಿದ್ದಳು. ಕುಡಿದ ಅಮಲಿನಲ್ಲಿ ಅನೈತಿಕ ಸಂಬಂಧದ ಬಗ್ಗೆ ನಡೆದ ಜಗಳದಲ್ಲಿ ರಾಧಮ್ಮ ಕೊಲೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಚಾಂಪಿಯನ್ಸ್‌ ಟ್ರೋಫಿ ಭದ್ರತಾ ಕಾರ್ಯ ನಿರ್ವಹಿಸಲು ನಿರಾಕರಣೆ – ಪಾಕ್‌ನ 100ಕ್ಕೂ ಹೆಚ್ಚು ಪೊಲೀಸರು ವಜಾ