ಪತಿಯಿಂದಲೇ ಪತ್ನಿಯ ಕತ್ತು ಸೀಳಿ ಭೀಕರ ಹತ್ಯೆ

ಬೆಂಗಳೂರು: ಮೊಬೈಲ್ ಸಂಭಾಷಣೆ ವಿಚಾರವಾಗಿ ಜಗಳವಾಡಿ, ಶೀಲ ಶಂಕಿಸಿ ಪತಿಯೇ ಪತ್ನಿಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ.

ರೂಪ(34) ಮೃತ ದುರ್ದೈವಿ. ಬುಧವಾರ ಸಂಜೆ 5 ಗಂಟೆ ವೇಳೆಗೆ ಘಟನೆ ನಡೆದಿದ್ದು, ಆರೋಪಿ ಕಾಂತರಾಜ್ ವೃತ್ತಿಯಲ್ಲಿ ಫೈನಾನ್ಶಿಯರ್ ಹಾಗೂ ರಿಯಲ್ ಎಸ್ಟೇಟ್ ಬ್ರೋಕರ್ ಕೆಲಸ ಮಾಡುತ್ತಿದ್ದ. ಘಟನೆ ಬಳಿಕ ಕಾಂತರಾಜ್ ಮನೆಗೆ ಬೀಗ ಹಾಕಿ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಬೀದರ್‌ನಲ್ಲಿ ಖಾಸಗಿ ಅಂಬುಲೆನ್ಸ್‌ಗಳದ್ದೇ ಕಾರ್‌ಬಾರ್ – ಬ್ರಿಮ್ಸ್ ಆಸ್ಪತ್ರೆ ಎದುರೇ ಖಾಸಗಿ ಸುಲಿಗೆ

ಘಟನೆ ವಿವರ:
ಬುಧವಾರ ಸಂಜೆ 4.30 ರಲ್ಲಿ ಪತಿ ಕಾಂತರಾಜ್ ಪತ್ನಿ ರೂಪಾಳ ಮೊಬೈಲ್ ಪರಿಶೀಲಿಸಿದಾಗ ಆಕೆ ಬೇರೆ ವ್ಯಕ್ತಿಯೊಂದಿಗೆ ಮಾತನಾಡಿರುವುದು ಕಂಡುಬಂದಿದೆ. ಈ ವಿಚಾರವಾಗಿ ಗಂಡ ಹೆಂಡತಿ ನಡುವೆ ಜಗಳವಾಗಿದೆ. ಇದೇ ವೇಳೆ ಆಕ್ರೋಶಗೊಂಡ ದೇವರಾಜ್ ಮನೆಯಲ್ಲಿದ್ದ ಚಾಕುವಿನಿಂದ ಪತ್ನಿಯ ಕತ್ತು ಸೀಳಿ ಹತ್ಯೆ ಮಾಡಿ ಮನೆಯ ಬಾಗಿಲನ್ನು ಲಾಕ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ. ಟ್ಯೂಷನ್‍ಗೆ ಹೋಗಿದ್ದ ಮಗ ಮನೆಗೆ ವಾಪಸ್ಸಾದಾಗ ಘಟನೆ ಬೆಳಕಿಗೆ ಬಂದಿದ್ದು, ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಕಾಂತರಾಜ್ ಈ ಹಿಂದೆ 2005 ರಲ್ಲಿ ಜಾಗದ ವಿಚಾರವಾಗಿ ಲಾಯತ್ ಕುಟುಂಬದ ಮೂವರನ್ನು ಹತ್ಯೆ ಮಾಡಿ ಜೈಲು ಸೇರಿದ್ದ. ಬಳಿಕ 2011 ಜೈಲಿನಿಂದ ಹೊರಬಂದಿದ್ದ ಬಳಿಕ ರೂಪಳನ್ನು ಮದುವೆಯಾಗಿದ್ದ. ಸದ್ಯ ದಂಪತಿಗೆ 9 ವರ್ಷದ ಮಗನಿದ್ದಾನೆ ಘಟನೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು ಕಾಂತರಾಜ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಭಿಕ್ಷೆ ಬೇಡುವಾಗ ತಿಂಡಿ ಆಸೆ ತೋರಿಸಿ 14ರ ಬಾಲಕಿ ಮೇಲೆ ಅತ್ಯಾಚಾರ

Comments

Leave a Reply

Your email address will not be published. Required fields are marked *