ಮೈಸೂರು: ಹುಣಸೂರು ಬೈ ಎಲೆಕ್ಷನ್‍ನಲ್ಲಿ ಜಾತಿ ಸಮೀಕರಣ ಹೆಚ್ಚಾಗಿ ನಡೆಯುತ್ತಿದೆ. ಒಂದರ್ಥದಲ್ಲಿ ಇಲ್ಲಿ ಕುರುಬ ವರ್ಸಸ್ ಕುರುಬ ಫೈಟ್ ಜೋರಾಗಿದೆ. ಕುರುಬ ಸಮುದಾಯಕ್ಕೆ ತಮ್ಮದೇ ಸಮುದಾಯದ ಎಚ್. ವಿಶ್ವನಾಥ್ ಅವರನ್ನು ಬೆಂಬಲಿಸಬೇಕೋ ಅಥವಾ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕೋ ಎಂಬ ಗೊಂದಲದಲ್ಲಿದೆ. ಈ ನಡುವೆ ಹುಣಸೂರಲ್ಲಿ ಈಗ ಒಕ್ಕಲಿಗರ ಮತದ ಮೇಲೆ ಕಣ್ಣು ಬಿದ್ದಿದೆ ಎನ್ನಲಾಗಿದೆ.

ಹುಣಸೂರಿನಲ್ಲಿನ ಒಕ್ಕಲಿಗ ಮತದಾರರಿಗೆ ತಾವು ಯಾರ ವಿರುದ್ಧ ನಿಂತುಕೊಳ್ಳಬೇಕು ಎಂಬ ಗೊಂದಲದಲ್ಲಿದ್ದಾರೆ. ಯಾರ ಪರ ನಿಂತರೆ ಯಾರಿಗೆ ನಷ್ಟವಾಗುತ್ತೆ ಎಂಬ ಲೆಕ್ಕಚಾರದಲ್ಲಿ ಮುಳುಗಿದ್ದಾರೆ. ಹುಣಸೂರು ಕ್ಷೇತ್ರದಲ್ಲಿ ಒಕ್ಕಲಿಗ, ಅರೆ ಒಕ್ಕಲಿಗ ಮತಗಳು ಎಲ್ಲಾ ಸಮುದಾಯಕ್ಕಿಂತ ಹೆಚ್ಚಿವೆ. 45 ಸಾವಿರ ಒಕ್ಕಲಿಗ ಮತದಾರರು ಇದ್ದಾರೆ. ಅಲ್ಲಿಗೆ ಚುನಾವಣೆಯಲ್ಲಿ ಈ ಮತಗಳು ಬಹುಮುಖ್ಯ ಪಾತ್ರ ನಿರ್ವಹಿಸುತ್ತವೆ. ಹೀಗಾಗಿ ಒಕ್ಕಲಿಗರ ಮತ ಸೆಳೆಯಲು ಅಭ್ಯರ್ಥಿಗಳು ಪೈಪೋಟಿಗೆ ಇಳಿದಿದ್ದಾರೆ. ಇದರಿಂದ ಮಾಜಿ ಸಚಿವ ಜಿ.ಟಿ. ದೇವೇಗೌಡ ಮತ್ತು ಅವರ ಪುತ್ರನಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಎಲ್ಲಿದ್ದಾರೋ ಗೊತ್ತಾಗುತ್ತಿಲ್ಲ, ಅವರು ಬೇಗ ಹೊರಗೆ ಬರಲಿ: ಎಚ್. ವಿಶ್ವನಾಥ್

ಕೆಲವರು ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಪರ ನಿಂತರೆ, ಕೆಲವರು ಕಾಂಗ್ರೆಸ್ ಅಭ್ಯರ್ಥಿ ಪರವಾಗಿದ್ದಾರೆ. ಮತ್ತೆ ಕೆಲವರು ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬೆಂಗಾವಲಾಗಿ ನಿಂತಿದ್ದಾರೆ. ಜೆಡಿಎಸ್ ಸಂಪ್ರದಾಯಿಕ ಮತ ಜೆಡಿಎಸ್‍ಗೆ ಬಂದರೆ ಕಾಂಗ್ರೆಸ್‍ಗಿಂತಾ ಬಿಜೆಪಿಗೆ ನಷ್ಟ ಹೆಚ್ಚಿದೆ. ಹೀಗಾಗಿ ಬಿಜೆಪಿ ಒಕ್ಕಲಿಗ ಮತಗಳ ಒಲಿಸಿಕೊಳ್ಳಲು ಶತಪ್ರಯತ್ನ ಮಾಡ್ತಿದೆ. ಕಾಂಗ್ರೆಸ್ ಮಾತ್ರ ಒಕ್ಕಲಿಗ ಮತಗಳು ನಮಗೆ ಬರಲಿ ಇಲ್ಲದೆ ಇದ್ದರೆ ಜೆಡಿಎಸ್‍ಗೆ ಹೋಗಲಿ, ಬಿಜೆಪಿಗೆ ಮಾತ್ರ ಹೋಗಬಾರದು ಅಂತಾ ರಣತಂತ್ರ ಹೆಣೆಯುತ್ತಿದೆ.

Leave a Reply