ಶಾಕಿಂಗ್: ತಾಯಿಯನ್ನೇ ಕೊಂದು ಹೃದಯ ತೆಗೆದು ಚಟ್ನಿಯೊಂದಿಗೆ ತಿಂದ!

ಮುಂಬೈ: ತಿನ್ನಲು ಊಟ ಸಿಗದ ಕಾರಣ 27 ವರ್ಷದ ವ್ಯಕ್ತಿಯೊಬ್ಬ ತನ್ನ ತಾಯಿಯನ್ನೇ ಕೊಂದು ಆಕೆಯ ಹೃದಯವನ್ನು ತಿಂದಿದ್ದಾನೆ ಎಂಬ ಆಘಾತಕಾರಿ ಸುದ್ದಿಯೊಂದು ವರದಿಯಾಗಿದೆ.

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮೃತ ತಾಯಿಯನ್ನು 65 ವರ್ಷದ ಯೆಲಾವಾ ಎಂದು ಗುರುತಿಸಲಾಗಿದೆ. ಆರೋಪಿ ಸುನಿಲ್ ನನ್ನು ಶಾಹುಪುರಿ ಪೊಲೀಸರು ಬಂಧಿಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುನಿಲ್ ತನ್ನ ತಾಯಿಯನ್ನು ಇರಿದು ಕೊಂದು ಆಕೆಯ ಹೃದಯವನ್ನ ಚಟ್ನಿ ಹಾಗೂ ಮೆಣಸಿನಪುಡಿಯೊಂದಿಗೆ ನೆಂಚಿಕೊಂಡು ತಿಂದಿದ್ದಾನೆ. ಕೆಲವು ಗಂಟೆಗಳ ಬಳಿಕ ಆತ ಮನೆಯಿಂದ ಹೊರಬಂದಿದ್ದು, ಆತನ ಕೈಗಳು ರಕ್ತಸಿಕ್ತವಾಗಿತ್ತು ಎಂದು ವರದಿಯಾಗಿದೆ.

ಘಟನೆ ಬಗ್ಗೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರೋ ಶಹಾಪುರಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಮೋರೆ, ಸುನಿಲ್ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕಾರ್ಮಿಕ. ಈತನಿಗೆ ಮದುವೆಯಾಗಿ ಮೂವರು ಮಕ್ಕಳಿದ್ದಾರೆ. ಹೆಂಡತಿ ತನ್ನ ಮಕ್ಕಳೊಂದಿಗೆ ಮುಂಬೈನ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಾರೆ ಅಂತ ಹೇಳಿದ್ರು.

ಘಟನೆ ನಡೆದ ದಿನ ಸುನಿಲ್ ಕಂಠಪೂರ್ತಿ ಕುಡಿದಿದ್ದ. ಮೊದಲು ಪಕ್ಕದ ಮನೆಗೆ ಹೋಗಿ ಊಟ ಕೇಳಿದ್ದ. ಆದ್ರೆ ಅವರು ಏನೂ ಕೊಡದೇ ಇದ್ದಾಗ ತನ್ನ ಮನೆಗೆ ಹೋಗಿದ್ದಾನೆ. ಮನೆಗೆ ಹೋದ ನಂತರ ತಾಯಿಯೊಂದಿಗೆ ಜಗಳವಾಡಿದ್ದಾನೆ. ಜಗಳ ತಾರಕಕ್ಕೇರಿ ಕೋಪದಲ್ಲಿ ಆಕೆಯನ್ನ ಇರಿದು ಕೊಂದಿದ್ದಾನೆ. ನಂತರ ಆಕೆಯ ಹೃದಯವನ್ನು ತೆಗೆದು ಪ್ಲೇಟ್‍ನಲ್ಲಿ ಇಟ್ಟಿದ್ದಾನೆ. ಮನೆಯಲ್ಲಿ ಚಟ್ನಿ ಹಾಗೂ ಪೆಪ್ಪರ್ ಸ್ಪ್ರೇ ಪತ್ತೆಯಾಗಿದೆ. ಅದನ್ನು ಆತ ಹೃದಯದ ಮೇಲೆ ಉದುರಿಸಿದ್ದ. ಹೃದಯದ ಸ್ವಲ್ಪ ಭಾಗವನ್ನು ಆತ ತಂದಿರಬಹುದು ಎಂಬ ಶಂಕೆಯಿದೆ. ಸದ್ಯ ಆತನನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅವರು ತಿಳಿಸಿದ್ರು.

Comments

Leave a Reply

Your email address will not be published. Required fields are marked *