ಮಡಿಕೇರಿ ರಾಜಾಸೀಟ್‍ನಲ್ಲಿ ಗುಬ್ಬಚ್ಚಿಗಳ ಕಲರವ!

ಮಡಿಕೇರಿ: ಆಧುನಿಕತೆ ಬೆಳೆದ ಹಾಗೆಲ್ಲಾ ಪರಿಸರದ ಮೇಲೆ ತುಂಬಾ ಹಾನಿಯುಂಟಾಗುತ್ತಿದೆ. ಮಾನವ ತನ್ನ ಸ್ವಹಿತಾಸಕ್ತಿಗಾಗಿ ಜೀವ ಸಂಕುಲವನ್ನು ವಿನಾಶದ ಅಂಚಿಗೆ ಕೊಂಡೊಯ್ಯುತ್ತಿದ್ದಾನೆ. ತನ್ನ ಹಿತಾಸಕ್ತಿಗಾಗಿ ಎಲ್ಲೆಡೆ ಮೊಬೈಲ್ ಟವರ್‍ಗಳನ್ನು ನಿರ್ಮಾಣ ಮಾಡುತ್ತಿರುವುದರಿಂದ ಗುಬ್ಬಚ್ಚಿ ಸಂತತಿಯು ಕ್ಷೀಣಿಸುತ್ತಿದೆ.

ಕೊಡಗುಜಿಲ್ಲೆ ಬೆಟ್ಟಗುಡ್ಡಗಳ ಪ್ರದೇಶ. ಆದ್ರೆ ಇಲ್ಲಿ ಗುಬ್ಬಚ್ಚಿಗಳನ್ನು ಕೆಲವು ಕಡೆ ಮಾತ್ರ ನಾವು ಕಾಣಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಗಲ್ಲಿಗಲ್ಲಿಗೊಂದು ಮೊಬೈಲ್ ಟವರ್‍ಗಳು ತಲೆ ಎತ್ತಿ ನಿಂತಿವೆ. ಇವುಗಳ ರೇಡಿಯೇಷನ್‍ನ ತೊಂದರೆಯಂದಾಗಿ ಪಕ್ಷಿ ಸಂಕುಲ ಕ್ಷೀಣಿಸುತ್ತಿದೆ. ಪಕ್ಷಿ ಸಂಕುಲದಲ್ಲಿ ಪ್ರಮುಖವಾಗಿ ಗುಬ್ಬಚ್ಚಿಯ ಸಂತತಿ ಕ್ಷೀಣಿಸುತ್ತಿದ್ದು ಇವು ವಿನಾಶದ ಅಂಚಿನಲ್ಲಿದೆ. ದರೆ ಮಡಿಕೇರಿಯ ಪ್ರವಾಸಿಗರ ಹಾಟ್ ಸ್ಪಾಟ್ ಆದ ಪ್ರಸಿದ್ಧ ಇತಿಹಾಸವುಳ್ಳ ರಾಜಾಸೀಟ್‍ನಲ್ಲಿ ಗುಬ್ಬಚ್ಚಿಗಳ ಕಲರವವನ್ನು ಕಾಣಬಹುದು.

ರಾಜಾಸೀಟ್ ನೋಡಿ ಎಂಜಾಯ್ ಮಾಡಲು ಹೇಗೆ ಪ್ರೇಮಿಗಳು ಬರುತ್ತಾರೋ ಹಾಗೆಯೇ ಗುಬ್ಬಚ್ಚಿಗಳನ್ನು ಇಲ್ಲಿಗೆ ಆಗಮಿಸುತ್ತಿವೆ. ಇವುಗಳ ಚಿಲಿಪಿಲಿ ಕಲರವ ಕಿವಿಗೆ ತಂಪೆರೆಯುತ್ತದೆ. ಪ್ರವಾಸಿಗರು ತಾವು ತಿಂದು ಬಿಟ್ಟ ಆಹಾರ ಪದಾರ್ಥಗಳನ್ನು ತಿಂದು ಅಲ್ಲಿಲ್ಲಿ ಗುಂಡಿಗಳಲ್ಲಿನ ನೀರು ಕುಡಿದು ಸ್ವಚ್ಚಂದವಾಗಿ ಹಾರಾಟಮಾಡುತ್ತವೆ.

ಮಡಿಕೇರಿಯ ಪ್ರೆಸ್ ಕ್ಲಬ್‍ನ ಕೆಳ ಮಹಡಿಯಲ್ಲಿ ಈ ಗುಬ್ಬಚ್ಚಿಗಳಿಗಾಗಿ ಗೂಡು ನಿರ್ಮಿಸಿ ಇಲ್ಲಿ ಕಾಳುಗಳನ್ನು ಹಾಕುತ್ತಿದ್ದಾರೆ. ಇನ್ನು ಕಾಡನ್ನು ನಾಶಮಾಡಿ ಮರಗಿಡಗಳನ್ನು ಕಡಿಯುವುದ್ರಿಂದಲೂ ಸಹ ಈ ಗುಬ್ಬಚ್ಚಿಗಳ ಸಂತತಿ ಕಡಿಮೆಯಾಗಿತ್ತದೆ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸುತ್ತಾರೆ.

ಪರಿಸರಕ್ಕೆ ಪೂರಕವಾದಂತಹ ಜೀವಸಂಕುಲಗಳನ್ನು ರಕ್ಷಿಸಬೇಕಾದದ್ದು ಮಾನವ ಧರ್ಮ. ಹಾಗಾಗಿ ಸ್ವ ಹಿತಾಸಕ್ತಿಗಾಗಿ ಅನ್ಯ ಜೀವಿಗಳನ್ನು ಬಲಿಕೊಡವುದು ಸರಿಯಲ್ಲ. ಈಗಾಗಲೇ ಇವುಗಳ ಸಂತತಿ ಕ್ಷೀಣಿಸುತ್ತಿದ್ದು, ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಪುಸ್ತಕಗಳಲ್ಲಿ ನಾವು ಗುಬ್ಬಚ್ಚಿಯನ್ನು ಕಾಣಬಹುದು. ಆ ಹಂತಕ್ಕೆ ತಲುಪುವದ್ರಲ್ಲಿ ಸಂಶಯವಿಲ್ಲ.

 

Comments

Leave a Reply

Your email address will not be published. Required fields are marked *