ಯಮುನೋತ್ರಿಗೆ ತೆರಳುತ್ತಿದ್ದ ಬಸ್ ಪಲ್ಟಿ – 17 ಯಾತ್ರಾರ್ಥಿಗಳ ಸಾವು

ಡೆಹರಾಡೂನ್: ಬಸ್ಸೊಂದು ಆಯಾತಪ್ಪಿ ಕಂದಕಕ್ಕೆ ಉರುಳಿದ್ದು, ಬಸ್‍ನಲ್ಲಿ ಸಂಚರಿಸುತ್ತಿದ್ದ 17 ಮಂದಿ ಸಾವನ್ನಪ್ಪಿ, 6 ಜನ ಗಾಯಗೊಂಡಿರುವ ಘಟನೆ ಉತ್ತರಾಖಂಡದ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯ ದಮ್ಟಾ ಬಳಿ ನಡೆದಿದೆ.

ಬಸ್‍ನಲ್ಲಿ ಮಧ್ಯಪ್ರದೇಶದ 40 ಯಾತ್ರಾರ್ಥಿಗಳು ತೆರಳುತ್ತಿದ್ದರು. 17 ಮಂದಿ ಸಾವನ್ನಪ್ಪಿದ್ದು, 6 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನೂ ಪೊಲೀಸರು ಮತ್ತು ಎಸ್‍ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿವೆ. ಮಧ್ಯಪ್ರದೇಶದ ಪನ್ನಾ ಜಿಲ್ಲೆಯಿಂದ ಉತ್ತರಕಾಶಿಗೆ ತೆರಳುತ್ತಿದ್ದ ಬಸ್ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯ ದಮ್ತಾ ಬಳಿ ಹಳ್ಳಕ್ಕೆ ಬಿದ್ದಿದೆ ಎಂದು ಡಿಜಿಪಿ ಅಶೋಕ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಟೋಲ್ ಪ್ಲಾಜಾ ನೌಕರರ ಮೇಲೆ ಬಿಜೆಪಿ ಮುಖಂಡನ ಗೂಂಡಾ ವರ್ತನೆ

ಅಪಘಾತದ ನಂತರ ಸ್ಥಳದಲ್ಲಿ ಎಲ್ಲರೂ ಭಯಭೀತರಾಗಿದ್ದರು. ಬಸ್ಸೊಂದು ಕಂದಕಕ್ಕೆ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ತರಾತುರಿಯಲ್ಲಿ ಸ್ಥಳಕ್ಕೆ ತಲುಪಿದರು. ಇದಾದ ನಂತರ ರಕ್ಷಣಾ ಕಾರ್ಯ ಆರಂಭವಾಯಿತು. ಪ್ರಾಥಮಿಕ ಮಾಹಿತಿ ಪ್ರಕಾರ ಅಪಘಾತದಲ್ಲಿ 17 ಮಂದಿ ಸಾವನ್ನಪ್ಪಿದ್ದಾರೆ. ಎಲ್ಲಾ ಯಾತ್ರಾರ್ಥಿಗಳು ಯಮುನೋತ್ರಿಗೆ ತೆರಳಿದ್ದರು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಸಂಬಂಧದ ವಿಚಾರ ಗೊತ್ತಾಗಿ ನೋವಿನಿಂದ ಗಲಾಟೆ ಮಾಡಿದ್ದು ನಿಜ, ಆದ್ರೆ ಕೊಲೆ ಮಾಡಿಲ್ಲ: ಅನಂತರಾಜು ಪತ್ನಿ

Comments

Leave a Reply

Your email address will not be published. Required fields are marked *