ಪೊಲೀಸರ ವಿರುದ್ಧ ದೂರು ನೀಡಲು ಕಮಿಷನರ್ ಕಚೇರಿಗೆ ಬಂದ ಹುಚ್ಚ ವೆಂಕಟ್

ಬೆಂಗಳೂರು: ಪೊಲೀಸರ ವಿರುದ್ಧ ದೂರು ನೀಡಲು ಹುಚ್ಚ ವೆಂಕಟ್ ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿದ್ದಾನೆ.

ಯಾವ ಪೊಲೀಸ್ ಠಾಣೆಯಲ್ಲಿ ನನ್ನ ಕಂಪ್ಲೇಟ್ ತೆಗೆದುಕೊಳ್ಳುತ್ತಿಲ್ಲ, ಹಾಗಾಗಿ ಕಮಿಷನರ್ ಗೆ ದೂರು ನೀಡಲು ಬಂದಿರುವುದಾಗಿ ಹುಚ್ಚ ವೆಂಕಟ್ ತಿಳಿಸಿದ್ದಾನೆ. ಯಾರ ವಿರುದ್ಧ ದೂರು ನೀಡಲು ಮುಂದಾಗಿದ್ದೀರಾ ಎಂದು ಪ್ರಶ್ನಿಸಿದ್ದಾಗ ವೆಂಕಟ್ ಸರಿಯಾದ ಉತ್ತರ ನೀಡುತ್ತಿಲ್ಲ. ಬುಧವಾರ ನಡು ರಸ್ತೆಯಲ್ಲಿ ಹುಚ್ಚ ವೆಂಕಟ್ ಕುಡಿದು ತೂರಾಡುತ್ತಿದ್ದು, ಇವನ ರಂಪಾಟವನ್ನು ನೋಡಲು ಸ್ಥಳೀಯರು ಮುಗಿಬಿದ್ದಿದ್ದರು.

ನಗರದ ಉಲ್ಲಾಳದ ಅಂಗಡಿ ಬಳಿ ನಿಂತಿದ್ದ ಜನರ ಮೇಲೆ ಗುರುವಾರ ಬೆಳಗ್ಗೆ ಏಕಾಏಕಿ ಹುಚ್ಚ ವೆಂಕಟ್ ಹಲ್ಲೆ ನಡೆಸಿದ್ದ. ಬುಧವಾರ ರಸ್ತೆಯಲ್ಲಿ ಕುಡಿದು ತೂರಾಡುವ ಮೂಲಕ ಸುದ್ದಿಯಾಗಿದ್ದ ಹುಚ್ಚ ವೆಂಕಟ್ ಗುರುವಾರ ಅಂಗಡಿ ಬಳಿ ನಿಂತಿದ್ದವರ ಮೇಲೆ ಹಲ್ಲೆ ನಡೆಸಿ ಮತ್ತೊಮ್ಮೆ ತನ್ನ ಹುಚ್ಚಾಟ ಮುಂದುವರಿಸಿದನು. ಇದನ್ನೂ ಓದಿ: ಮುಂದುವರಿದ ಹುಚ್ಚಾ ವೆಂಕಟ್ ಹುಚ್ಚಾಟ: ನಡುರಸ್ತೆಯಲ್ಲೇ ಜನರ ಮೇಲೆ ಏಕಾಏಕಿ ಹಲ್ಲೆ-ವಿಡಿಯೋ ನೋಡಿ!

ಗುರುವಾರ ಬೆಳಗ್ಗೆ 8.30ರ ಸುಮಾರಿಗೆ ಹುಚ್ಚ ವೆಂಕಟ್ ಉಲ್ಲಾಳದ ಬೇಕರಿ ಬಳಿ ಬಂದು ಟೀ ಕೊಡುವ ಯುವಕನ ಮುಖಕ್ಕೆ ಬಿಸಿ ಟೀ ಎರಚಿದ್ದು ಅಲ್ಲದೇ ಆತನನ್ನು ಹಿಂಬಾಲಿಸಿಕೊಂಡು ಹೋಗಿ ಹಲ್ಲೆ ನಡೆಸಿದನು. ಈ ವೇಳೆ ತಡೆಯಲು ಬಂದ ಇಬ್ಬರು ಯುವಕರ ಮೇಲೆಯೂ ಹಲ್ಲೆ ನಡೆಸಿದ್ದು, ಸದ್ಯ ಹಲ್ಲೆಗೊಳಗಾದ ಯುವಕರು ಪೊಲೀಸರಿಗೆ ಮಾಹಿತಿ ನೀಡಿದರು.  ಇದನ್ನೂ ಓದಿ: ನಡು ರಸ್ತೆಯಲ್ಲಿ ಕುಡಿದು, ತೂರಾಡಿದ ಹುಚ್ಚಾ ವೆಂಕಟ್!

ವೆಂಕಟ್ ಮೈಮೇಲಿನ ಬಟ್ಟೆ ಕೊಳೆ ಮಾಡಿಕೊಂಡು ಥೇಟ್ ಕುಡುಕರಂತೆ ವರ್ತಿಸುತ್ತಿದ್ದನು. ಬಳಿಕ ರಾಜರಾಜೇಶ್ವರಿನಗರ ಠಾಣೆಯ ಪೊಲೀಸರು ಆತನನ್ನು ವಶಕ್ಕೆ ಪಡೆದು ಎನ್‍ಸಿಆರ್ ದಾಖಲಿಸಿದರು. ಎನ್‍ಸಿಆರ್ ದಾಖಲಿಸಿದ ಬಳಿಕ ಪೊಲೀಸರು ಎಚ್ಚರಿಕೆ ಕೊಟ್ಟು ವೆಂಕಟ್‍ನನ್ನು ಬಿಟ್ಟು ಕಳಿಸಿದರು. ಆದರೆ ಈಗ ಕಮಿಷನರ್ ಕಚೇರಿಗೆ ದೂರು ನೀಡಲು ಬಂದಿರುವುದಾಗಿ ಹುಚ್ಚ ವೆಂಕಟ್ ಹೇಳುತ್ತಿದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=8Ngjmqu7Zw0

Comments

Leave a Reply

Your email address will not be published. Required fields are marked *