ಬೆಂಗಳೂರು: ನಟ ಮತ್ತು ನಿರ್ದೇಶಕ ಹುಚ್ಚ ವೆಂಕಟ್ ನನಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ನನ್ನ ಸಾವಿಗೆ ಹುಚ್ಚ ವೆಂಕಟ್ ನ ಬೆದರಿಯೇ ಕಾರಣ ಎಂದು ಯುವ ನಿರ್ದೇಶಕರೊಬ್ಬರು ಟ್ವೀಟ್ ಮಾಡಿದ್ದಾರೆ.
ಫೇಸ್ ಬುಕ್ ಲೈಫ್ ಸಿನಿಮಾ ನಿರ್ದೇಶಕ ಕೀರ್ತನ್ ಶೆಟ್ಟಿ ಅವರು ಈ ರೀತಿಯ ಟ್ವೀಟ್ ಮಾಡಿದ್ದಾರೆ. ಕೀರ್ತನ್ ಅವರು, ಮತ್ತೆ ಹುಚ್ಚ ವೆಂಕಟನ್ ಆರ್ಭಟ, ನನ್ನ ಮೇಲೆ ಅವಾಚ್ಯ ಪದಗಳಿಂದ ನಿಂದನೆ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೇ ನನ್ನ ಮೇಲೆ ಹಲ್ಲೆಗೂ ಯತ್ನ ನಡೆದಿದ್ದು, ನನ್ನ ಸಾವಿಗೆ ಹುಚ್ಚ ವೆಂಕಟ್‍ನ ಬೆದರಿಕೆಯೇ ಕಾರಣ” ಎಂದು ಟ್ವೀಟ್ ಮಾಡಿ ಮಾಧ್ಯಮಗಳಿಗೆ ಟ್ಯಾಗ್ ಮಾಡಿದ್ದಾರೆ.

ಹುಚ್ಚ ವೆಂಕಟ್ ಸಿನಿಮಾದಲ್ಲಿ ನಟಿಸುವುದಾಗಿ ಒಪ್ಪಿ 30,000 ರೂ. ಹಣ ಪಡೆದು, ಈಗ ಶೂಟಿಂಗೂ ಬರುತ್ತಿಲ್ಲ. ಇತ್ತ ತೆಗೆದುಕೊಂಡಿರುವ ಹಣವನ್ನು ವಾಪನ್ ಕೊಡುತ್ತಿಲ್ಲ. ಫೋನ್ ಮಾಡಿದರೆ ಕೆಟ್ಟಾದಾಗಿ ಬೈತಾರೆ ಎಂದು ಕೀರ್ತನ್ ಆರೋಪಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ನನ್ನ ಸಾವಿಗೆ ಹುಚ್ಚ ವೆಂಕಟ್ ನ ಬೆದರಿಕೆಯೇ ಕಾರಣ 😭 @suvarnanewstv @tv9kannada @Tv9kannadanews @publictvnews @Jaggesh2 @Gundkal @PuneethRajkumar
— KirikHuduga Keerthan (@KirikHuduga) October 28, 2018
ಹುಚ್ಚ ವೆಂಕಟ್ ನಿಂದ ನನ್ನ ಮೇಲೆ ಹಲ್ಲೆಗೆ ಯತ್ನ 😭😭😭 @publictvnews @namtalkies @FilmibeatKa @Vijaykarnataka @OneindiaKannada @Jaggesh2 @sakannadiga
— KirikHuduga Keerthan (@KirikHuduga) October 28, 2018

Leave a Reply