ಕಳ್ಳತನವಾಗಿದ್ದ 70 ಮೊಬೈಲ್‍ಗಳನ್ನ ಪತ್ತೆಹಚ್ಚಿ ಕಳೆದುಕೊಂಡವರಿಗೆ ವಾಪಸ್ – ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

ಧಾರವಾಡ: ಹುಬ್ಬಳ್ಳಿ (Hubballi) ಹಾಗೂ ಧಾರವಾಡ (Dharwad) ಪೊಲೀಸರು 20 ಲಕ್ಷ ರೂ. ಮೌಲ್ಯದ 70 ಮೊಬೈಲ್‍ಗಳನ್ನು (Mobile) ಪತ್ತೆ ಮಾಡಿ ಅವುಗಳನ್ನು ಕಳೆದುಕೊಂಡವರಿಗೆ ಶನಿವಾರ ಹಸ್ತಾಂತರಿಸಿದ್ದಾರೆ.

ಇತ್ತೀಚೆಗಷ್ಟೇ ಹುಬ್ಬಳ್ಳಿಯಲ್ಲಿ ವಿವಿಧ ಕಡೆಗಳಿಂದ ಮೊಬೈಲ್ ಕಳೆದುಕೊಂಡಿರುವ ದೂರುಗಳು ಬಂದಿದ್ದವು. ತಕ್ಷಣ ಕಾರ್ಯ ಪ್ರವೃತ್ತರಾಗಿದ್ದ ಪೊಲೀಸರು ಸುಮಾರು 20 ಲಕ್ಷ ರೂ. ಮೌಲ್ಯದ 70 ಮೊಬೈಲ್‍ಗಳನ್ನು ಪತ್ತೆ ಮಾಡಿದ್ದರು. ಅವುಗಳನ್ನು ಧಾರವಾಡದ ರಂಗಾಯಣದಲ್ಲಿ (Rangayana) ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ, ಜನರಿಗೆ ತಲುಪಿಸಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಅನುಷ್ಠಾನಕ್ಕೆ ತಂದರೆ ಬಿಜೆಪಿಯ ಅಸ್ತಿತ್ವವೇ ಕಳೆದುಹೋಗುತ್ತದೆ: ಈಶ್ವರ ಖಂಡ್ರೆ

ಅವಳಿನಗರದ ಪೊಲೀಸರು ಪ್ರತಿ ತಿಂಗಳ ನಾಲ್ಕನೇ ಶನಿವಾರದಂದು ಈ ರೀತಿಯ ಕಾರ್ಯಕ್ರಮ ಮಾಡುತ್ತಿದ್ದಾರೆ. ಈ ಬಾರಿ ಮೊಬೈಲ್ ಕಳೆದುಕೊಂಡವರಿಗೆ ಮರಳಿ ತಲುಪಿಸಿದ್ದಾರೆ. ಈ ಮೂಲಕ ಜನಸ್ನೇಹಿ ಪೊಲೀಸರು ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ 225 ಮೊಬೈಲ್ ಟವರ್ ಮಂಜೂರು : ಬಿವೈ ರಾಘವೇಂದ್ರ