ಸಿಎಂ ಆಗುವಂತೆ ಡಿಕೆಶಿಗೆ ಆಶೀರ್ವಾದ ಮಾಡಿದ ಜೈನ ಮಹಾರಾಜರು

ಹುಬ್ಬಳ್ಳಿ: ಮೈತ್ರಿ ಸರ್ಕಾರದ ಜಲ ಸಂಪನ್ಮೂಲ ಸಚಿವ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿ ಅಗಲಿ ಎಂದು ಹುಬ್ಬಳ್ಳಿ ವರೂರು ಗ್ರಾಮದ ನವಗ್ರಹ ತೀರ್ಥ ಕ್ಷೇತ್ರದ ಜೈನ ಮಹಾರಾಜರು ಅಶೀರ್ವದಿಸಿದ್ದಾರೆ.

ಚುನಾವಣಾ ಪ್ರಚಾರಕ್ಕೆಂದು ಮಠಕ್ಕೆ ಭೇಟಿ ನೀಡಿದ್ದ ಡಿ.ಕೆ ಶಿವಕುಮಾರ್ ಅವರಿಗೆ, ವರೂರು ಗ್ರಾಮದ ನವಗ್ರಹ ತೀರ್ಥ ಕ್ಷೇತ್ರದ ಶ್ರೀ ಪರಮಪೂಜ್ಯ ಗುಣಧರನಂದಿ ಮಹಾರಾಜರು ರಾಜ್ಯವನ್ನು ಆಳುವ ಶಕ್ತಿ ನಿಮ್ಮದಾಗಲಿ ಎಂದು ಅಶೀರ್ವಾದ ಮಾಡಿದ್ದಾರೆ.

ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸಚಿವರು, ನಾನು ಸಿಎಂ ಅಗುವಂತೆ ಶ್ರೀಗಳು ಅಶೀರ್ವಾದ ಮಾಡಿದ್ದು, ಅದು ಅವರ ವೈಯಕ್ತಿಕ ಅಭಿಪ್ರಾಯ. ನಾನು ಸಾಕಷ್ಟು ಮಠಗಳಿಗೆ ಭೇಟಿ ನೀಡಿದ್ದೇನೆ. ಆದರೆ ಯಾವುದೇ ಆಪೇಕ್ಷೆ ಇಲ್ಲದೇ ಅಶೀರ್ವಾದ ಮಾಡಿದ ಶ್ರೀಗಳು ಇವರೇ. ಈ ಪವಿತ್ರ ಸ್ಥಳಕ್ಕೆ ಬಂದಿದ್ದು ನನ್ನ ಪುಣ್ಯ ಎಂದು ಹೇಳಿದರು.

Comments

Leave a Reply

Your email address will not be published. Required fields are marked *