HSRP ಅಳವಡಿಕೆಗೆ ವಿಧಿಸಿದ್ದ ಗಡುವು ಮತ್ತೆ ವಿಸ್ತರಣೆ

– ಡಿ.31 ರ ವರೆಗೆ ಅವಧಿ ವಿಸ್ತರಿಸಿದ ಸರ್ಕಾರ

ಬೆಂಗಳೂರು: ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (HSRP) ಅಳವಡಿಸಲು ನೀಡಿದ್ದ ಗಡುವನ್ನು ಸರ್ಕಾರ ಮತ್ತೆ ವಿಸ್ತರಿಸಿದೆ.

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಡಿಸೆಂಬರ್ 4 ಕೊನೆ ದಿನವಾಗಿತ್ತು. ಈಗ ಡಿಸೆಂಬರ್ 31 ರ ವರೆಗೆ ಅವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಇದನ್ನೂ ಓದಿ: ನಿರ್ಮಲಾನಂದನಾಥ ಶ್ರೀಗಳ ಫೋನ್ ಟ್ಯಾಪ್ ಮಾಡಿದಾಗ ಯಾಕೆ ಮಾತಾಡಲಿಲ್ಲ – ಅಶೋಕ್‌ಗೆ ಡಿಕೆಶಿ ಪ್ರಶ್ನೆ

ಇದೀಗ ಸಾರಿಗೆ ಇಲಾಖೆ ಈ ವರ್ಷದ ಕೊನೆಯ ದಿನದ ವರೆಗೆ ಹೆಚ್‌ಎಸ್‌ಆರ್‌ಪಿ ಗಡುವು ವಿಸ್ತರಿಸಿದೆ. ರಾಜ್ಯದಲ್ಲಿ ಸುಮಾರು 2 ಕೋಟಿಯಷ್ಟು ವಾಹನಗಳು ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕಿತ್ತು.

ಸದ್ಯ 55 ಲಕ್ಷ ವಾಹನಗಳು ಮಾತ್ರ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿದ್ದಾರೆ. ಈ ಮೂಲಕ ಐದನೇ ಬಾರಿಗೆ ಹೆಚ್‌ಎಸ್‌ಆರ್‌ಪಿ ಗಡುವು ವಿಸ್ತರಿಸಿರುವ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳು ‘ಪಬ್ಲಿಕ್ ಟಿವಿ’ಗೆ ಮಾಹಿತಿ ಕೊಟ್ಟಿದ್ದಾರೆ. ಇದನ್ನೂ ಓದಿ: `ನಮ್ಮ ಮೆಟ್ರೋ’ದಿಂದ ಬಿಗ್ ಅಪ್ಡೇಟ್ – ಒಂದೂವರೆ ವರ್ಷದೊಳಗೆ ಬರಲಿದ್ಯಾ ಹೆಬ್ಬಾಳ-ಏರ್‌ಪೋರ್ಟ್ ಮೆಟ್ರೋ?