ಹೃತಿಕ್‌, ಕಿಯಾರಾ ನಟನೆಯ ‘ವಾರ್‌ 2’ ಚಿತ್ರದ ವಿಡಿಯೋ ಲೀಕ್‌

ಹೃತಿಕ್ ರೋಷನ್ ಮತ್ತು ಕಿಯಾರಾ (Kiara Advani) ನಟನೆಯ ಬಹುನಿರೀಕ್ಷಿತ ‘ವಾರ್ 2’ (War 2) ಚಿತ್ರದ ಶೂಟಿಂಗ್ ಇಟಲಿಯಲ್ಲಿ ಭರದಿಂದ ನಡೆಯುತ್ತಿದೆ. ‘ವಾರ್ 2’ ಸಿನಿಮಾ ಸೆಟ್‌ನ ವಿಡಿಯೋ ಮತ್ತು ಫೋಟೋಗಳು ಲೀಕ್ ಆಗಿವೆ. ಚಿತ್ರದಲ್ಲಿನ ಹೃತಿಕ್, ಕಿಯಾರಾ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ನಾಲ್ಕೈದು ದಿನಗಳ ಹಿಂದೆ ‘ವಾರ್ 2’ ತಂಡದ ಜೊತೆ ಹೃತಿಕ್ (Hrithik Roshan) ಮತ್ತು ಕಿಯಾರಾ ಇಟಲಿಗೆ ತೆರಳಿದ್ದರು. ರೊಮ್ಯಾಂಟಿಕ್ ಸಾಂಗ್ ಶೂಟ್ ಇಟಲಿಯಲ್ಲಿ ಭರದಿಂದ ನಡೆಯುತ್ತಿತ್ತು. ಚಿತ್ರೀಕರಣದಲ್ಲಿ ಭಾಗಿಯಾದ ‘ವಾರ್ 2’ ಜೋಡಿಯ ಫೋಟೋ ಇದೀಗ ಲೀಕ್ ಆಗಿದೆ. ಇಬ್ಬರೂ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಹಾಗೂ ಫೋಟೋ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಈ ತುಣುಕುಗಳನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇನ್ನೂ ಫೋಟೋ ಲೀಕ್‌ ಆಗಿರೋದು ಸಹಜವಾಗಿ ಚಿತ್ರತಂಡಕ್ಕೆ ಬೇಸರವುಂಟು ಮಾಡಿದೆ.

ಅಂದಹಾಗೆ, ‘ವಾರ್ 2’ ಸಿನಿಮಾದಲ್ಲಿ ಹೃತಿಕ್ ರೋಷನ್ ಜೊತೆ ತೆಲುಗಿನ ನಟ ಜ್ಯೂ.ಎನ್‌ಟಿಆರ್ (Jr.Ntr) ನಟಿಸಿದ್ದಾರೆ. ತಾರಕ್ ಕೂಡ ಪವರ್‌ಫುಲ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಚಿತ್ರವನ್ನು ‘ಬ್ರಹ್ಮಾಸ್ತ್ರ’ ಖ್ಯಾತಿಯ ನಿರ್ದೇಶಕ ಆಯಾನ್ ಮುಖರ್ಜಿ ನಿರ್ದೇಶನ ಮಾಡಿದ್ದಾರೆ.

ಇನ್ನೂ ಮೊದಲ ಬಾರಿಗೆ ಹೃತಿಕ್‌ ಮತ್ತು ಕಿಯಾರಾ ಜೊತೆಯಾಗಿ ನಟಿಸುತ್ತಿರುವ ಕಾರಣ ಚಿತ್ರದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಅದಷ್ಟೇ ಅಲ್ಲ, ಹೃತಿಕ್‌ ಮತ್ತು ತಾರಕ್‌ ಜುಗಲ್‌ಬಂದಿ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.