ರಾಜ್ಯದ ಅತಿದೊಡ್ಡ ಶೈಕ್ಷಣಿಕ ಮೇಳ ಪಬ್ಲಿಕ್‌ ಟಿವಿ ವಿದ್ಯಾಪೀಠಕ್ಕೆ ಚಾಲನೆ

ಬೆಂಗಳೂರು: ‌ರಾಜ್ಯದ ಅತಿದೊಡ್ಡ ಶೈಕ್ಷಣಿಕ ಮೇಳವಾದ ಪಬ್ಲಿಕ್‌ ಟಿವಿ ವಿದ್ಯಾಪೀಠಕ್ಕೆ (PUBLiC TV Vidhyapeeta) ಇಂದು ಚಾಲನೆ ಸಿಕ್ಕಿದೆ.

ಪಬ್ಲಿಕ್‌ ಟಿವಿ ಮುಖ್ಯಸ್ಥ ಹೆಚ್‌.ಆರ್‌ ರಂಗನಾಥ್‌ ಅವರು ಟೇಪ್ ಕತ್ತರಿಸುವ ಮೂಲಕ ಚಾಲನೆ ಕೊಟ್ಟರು. ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಎಸ್ ಮತ್ತು ಎಸ್ ಬಿಜೆ ಗ್ರೂಪ್ ನ ಎಂಡಿ ಪ್ರಕಾಶ್ ನಾಥ್ ಸ್ವಾಮೀಜಿ, ಗಾರ್ಡನ್ ಸಿಟಿ ಯುನಿವರ್ಸಿಟಿ ವಿಸಿ ಜೋಸೆಫ್, ರಾಮಯ್ಯ ಯುನಿವರ್ಸಿಟಿ ವಿಸಿ ಕುಲದೀಪ್ ರೈನಾ, ಕೇಂಬ್ರಿಡ್ಜ್ ಇನ್ಸ್‌ಸ್ಟಿಟ್ಯೂಷನ್ ಚೇರ್ಮನ್ ಡಿಕೆ ಮೋಹನ್ ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್ಸಿಟಿಟ್ಯೂಷನ್ ಸಿಇಓ ರಾಜೀವ್ ಗೌಡ ಭಾಗಿಯಾಗಿದ್ದಾರೆ.

ಇಂದು ಮತ್ತು ನಾಳೆ ಎರಡು ದಿನಗಳ ಕಾಲ ನಡೆಯುವ ಈ ಶೈಕ್ಷಣಿಕ ಮೇಳದಲ್ಲಿ ಪಿಯುಸಿ ನಂತರ ಮುಂದೇನು? ಏನೆಲ್ಲಾ ಅವಕಾಶಗಳಿವೆ. ಈಗಿನ ಜಮಾನದಲ್ಲಿ ಯಾವ ಕೋರ್ಸ್ ಆಯ್ಕೆ ಮಾಡಿಕೊಂಡ್ರೆ ಉತ್ತಮ. ಯಾವ ಕಾಲೇಜ್ ಬೆಸ್ಟ್ ಎಂಬೆಲ್ಲಾ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗಲಿದೆ. ಈ ಬಾರಿಯ ವಿದ್ಯಾಪೀಠದಲ್ಲಿ 110ಕ್ಕೂ ಹೆಚ್ಚು ಪ್ರತಿಷ್ಠಿತ ಶಿಕ್ಷಣಸಂಸ್ಥೆಗಳು ಭಾಗವಹಿಸಲಿವೆ. ವಿದ್ಯಾಪೀಠದಲ್ಲಿ ಶೈಕ್ಷಣಿಕ ತಜ್ಞರಿಂದ ವಿಶೇಷ ಉಪನ್ಯಾಸ, ಶಿಕ್ಷಣ ಸಂಸ್ಥೆಗಳಿಂದ ಕೌನ್ಸ್‌ಲಿಂಗ್ ಸೌಲಭ್ಯ ಇರಲಿದೆ. ಸ್ಥಳದಲ್ಲೇ ದಾಖಲಾತಿಗೂ ಅವಕಾಶವಿದೆ. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ಇರಲಿವೆ. ಇದನ್ನೂ ಓದಿ: ವಿದ್ಯಾಪೀಠಕ್ಕೆ ಚಾಲನೆ – ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ