ಸಿದ್ದರಾಮಯ್ಯರನ್ನು ಭೇಟಿಯಾದ ಹೌದು ಹುಲಿಯಾ ಖ್ಯಾತಿಯ ಪೀರಪ್ಪ

ಬೆಂಗಳೂರು: ಹೌದು ಹುಲಿಯಾ ಡೈಲಾಗ್ ಖ್ಯಾತಿಯ ಪಕೀರಪ್ಪ (ಪೀರಪ್ಪ) ಕಟ್ಟಿಮನಿ ಹುಲಿಯಾ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದಾರೆ. ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯರನ್ನ ಭೇಟಿ ಮಾಡಿ ಆಶೀರ್ವಾದ ಪಡೆದು ಕುಶಾಲೋಪರಿ ವಿಚಾರಿಸಿದ್ದಾರೆ.

ಉಪಚುನಾವಣೆ ಪ್ರಚಾರದ ವೇಳೆ ಫುಲ್ ವೈರಲ್ ಆದ ಡೈಲಾಗ್ ‘ಹೌದು ಹುಲಿಯಾ’. ಕಾಗವಾಡದಲ್ಲಿ ಕಾಂಗ್ರೆಸ್ ಆಭ್ಯರ್ಥಿ ಪರ ಸಿದ್ದರಾಮಯ್ಯನವರು ಪ್ರಚಾರದ ಭಾಷಣ ಮಾಡುವ ವೇಳೆ ಇಂದಿರಾಗಾಂಧಿ ದೇಶಕ್ಕೋಸ್ಕರ ಪ್ರಾಣ ತೆತ್ತರು ಅಂದಾಗ ವೇದಿಕೆ ಮುಂದೆ ಕುಳಿತಿದ್ದ ಪಕೀರಪ್ಪ ಕಟ್ಟಿಮನಿ ಹೌದು ಹುಲಿಯಾ ಅಂತಾ ಜೋರಾಗಿ ಕೂಗಿ ಹೇಳಿದ್ದರು.

ಕುಡಿದ ಮತ್ತಿನಲ್ಲಿ ಹೌದು ಹುಲಿಯಾ ಎಂದು ಹೇಳಿದ್ದು ಮಾತು ರಾಜ್ಯಾದ್ಯಂತ ಫೇಮಸ್ ಆಗಿ ಸೋಶಿಯಲ್ ಮೀಡಿಯಾಗಳಲ್ಲಿ ಫುಲ್ ವೈರಲ್ ಆಗಿತ್ತು. ಟಿಕ್ ಟಾಕ್ ಗಳಲ್ಲಿ ಎಲ್ಲಾ ಫುಲ್ ಬಳಕೆ ಮಾಡಿಕೊಂಡು ಡಬ್ ಸ್ಮ್ಯಾಶ್ ಮಾಡಿದ್ರು. ಇದಾದ ಬಳಿಕ ಡೈಲಾಗ್ ಹೇಳಿದ ಪಕೀರಪ್ಪ ಕಟ್ಟಿಮನಿ ಕೂಡ ಫುಲ್ ಫೇಮಸ್ ಆದರು. ಇದರ ಬೆನ್ನಲ್ಲೆ ಇಂದು ಸಿದ್ದರಾಮಯ್ಯರನ್ನ ಭೇಟಿ ಮಾಡಿದ್ದಾರೆ.

ಸಿದ್ದರಾಮಯ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ ಬಳಿಕ ಪಕೀರಪ್ಪ ಕಟ್ಟಿಮನಿ ಭೇಟಿಯಾಗಿದ್ದಾರೆ. ಈ ವೇಳೆ ಪಕೀರಪ್ಪ ಕಟ್ಟಿಮನಿ ಸಿದ್ದರಾಮಯ್ಯನವರ ಕಾಲಿಗೆ ಮುಗಿದು ನಮಸ್ಕರಿಸಿ ನೀವೆ ನಮ್ಮ ಒಡೆಯಾ ನೀವು ಕೊಟ್ಟ ಒಂದು ರೂಪಾಯಿ ಕೆ.ಜಿ ಅಕ್ಕಿ ತಿಂದು ಇವತ್ತು ಉದ್ಧಾರ ಆಗಿದ್ದೀವಿ ಒಡೆಯ ಅಂತಾ ಸಿದ್ದರಾಮಯ್ಯರಿಗೆ ನಮಸ್ಕರಿಸಿದ್ದಾರೆ.

ಪಕೀರಪ್ಪ ಕಟ್ಟಿಮನಿ ಭೇಟಿಯಾದ ಬಳಿಕ ಸಿದ್ದರಾಮಯ್ಯ ನವರು ಪಕೀರಪ್ಪನನ್ನ ಮಾತನಾಡಿಸಿದ್ದು. ರಾಜ್ಯಾದ್ಯಂತ ನೀನು ಫೇಮಸ್ ಆದ್ಯಾಲಪ್ಲ ಅಂತಾ ಪಕೀರಪ್ಪನನ್ನ ಸಿದ್ದರಾಮಯ್ಯ ನವರು ಕೇಳಿದ್ರು ಆಗ ಪಕೀರಪ್ಪ ಏನು ಮಾತನಾಡದೇ ಸಿದ್ದರಾಮಯ್ಯ ಮುಂದೆ ನಿಂತು ಮೌನಕ್ಕೆ ಶರಣಾಗಿ ಮುಗುಳ್ನಗೆ ಬೀರಿದ್ದಾರೆ.

ಪಕೀರಪ್ಪ ಭೇಟಿ ಮಾಡಿದ ಬಳಿಕ ಸಿದ್ದರಾಮಯ್ಯ ನವರು ಟ್ವೀಟ್ ಮಾಡಿದ್ದು ಕಾಗವಾಡದಲ್ಲಿ ನನ್ನ ಭಾಷಣದ ವೇಳೆ ಹೌದು ಹುಲಿಯಾ ಅಂತಾ ಅವನದ್ದೇ ಶೈಲಿಯಲ್ಲಿ ಪ್ರೀತಿಯಿಂದ ಕೂಗಿದ್ದ ಈ ಪೀರಪ್ಪ ಕಟ್ಟಿಮನಿ. ಅಷ್ಟೇ ಪ್ರೀತಿಯಿಂದ ನನ್ನ ಆರೋಗ್ಯ ವಿಚಾರಿಸಲು ಬಂದಿದ್ದಾನೆ. ನಿಷ್ಕಲ್ಮಶ ಪ್ರೀತಿ ತುಂಬಿದ ಹೃದಯದ ಇತನೇ ನಿಜವಾದ ಹುಲಿಯಾ ಅಂತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *