ಫಟಾ ಫಟ್ ಅಂತ ಮಾಡಿ ಟೊಮೆಟೊ ಚಟ್ನಿ

ಡಿಬಿಡಿಯ ಜೀವನದಲ್ಲಿ ಅಡುಗೆ ಮಾಡಿಕೊಳ್ಳಲು ಹಲವರಿಗೆ ಸಮಯ ಸಿಗುವುದಿಲ್ಲ. ಹೀಗಾಗಿ ಹೆಚ್ಚಿನವರು ಹೋಟೆಲ್‍ಗಳ ಮೊರೆ ಹೋಗುತ್ತಾರೆ. ಹೊರಗೆ ಸಿಗುವ ಆಹಾರ ತಿಂದು ಆರೋಗ್ಯವು ಹದಗೆಡುತ್ತದೆ. ಹೀಗಾಗಿ ನೀವು ಮನೆಯಲ್ಲಿಯೇ ಮಾಡುವ ಸರಳ ಅಡುಗೆಗಳನ್ನು ಹಡುಕುತ್ತಿದ್ದೀರ. ಹಾಗಾದ್ರೆ ಟೊಮೆಟೊ ಚಟ್ನಿ ಮಾಡಲು ಟ್ರೈ ಮಾಡಿ.

ರೆಡಿಮೇಡ್ ಆಹಾರ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ ಸ್ವಾದಿಷ್ಟವಾಗಿ ನಿಮ್ಮ ಕೈಯಲ್ಲೇ ಮಾಡಿ ತಯಾರಿಸಬಹುದಾದ ಖಾದ್ಯಗಳು ನಿಮಗೂ ಖುಷಿಯನ್ನು ನೀಡುತ್ತದೆ ಜೊತೆಗೆ ನಿಮ್ಮ ಮನೆಯವರಿಗೂ ಆನಂದನ್ನು ಉಂಟುಮಾಡುತ್ತದೆ. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಮಶ್ರೂಮ್ ಮಸಾಲ ಮಾಡಲು ಟ್ರೈ ಮಾಡಿ

ಬೇಕಾಗುವ ಸಾಮಗ್ರಿಗಳು:
* ಟೊಮೇಟೊ – ಅರ್ಧ ಕೆಜಿ
* ಈರುಳ್ಳಿ – 2
* ಬೆಳ್ಳುಳ್ಳಿ – 10 ಎಸಳು
* ಒಣಮೆಣಸಿನಕಾಯಿ – 2- 3
* ಹುಣಸೆಹಣ್ಣು- ಸ್ವಲ್ಪ
* ರುಚಿಗೆ ತಕ್ಕಷ್ಟು ಉಪ್ಪು
* ಕೊತ್ತಂಬರಿ ಸೊಪ್ಪು – ಸ್ವಲ್ಪ
* ಕರಿಬೇವಿನ ಸೊಪ್ಪು- 4-5 ಎಸಳು

ಮಾಡುವ ವಿಧಾನ:

* ಮೊದಲಿಗೆ ಬಾಣಲೆಯನ್ನು ಒಲೆ ಮೇಲಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿ ಬೆಳ್ಳುಳ್ಳಿ ಟೊಮೆಟೊ ಮತ್ತು ಒಣಮೆಸಿನ ಕಾಯಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ

* ಚೆನ್ನಾಗಿ ಹುರಿದುಕೊಂಡ ನಂತರ ಕೊತ್ತಂಬರಿ ಸೊಪ್ಪು, ಕರಿಬೇವಿನೆಸಳು, ಹುಣಸೆಹಣ್ಣು ಮತ್ತು ಉಪ್ಪು ಸೇರಿಸಿ ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ

* ಸಾಸಿವೆ, ಇಂಗು, ಜೀರಿಗೆಯ ಒಗ್ಗರಣೆಯನ್ನು ರೆಡಿ ಮಾಡಿ ಈ ಚಟ್ನಿಗೆ ಸೇರಿಸಿ.

* ನಂತರ ಈ ಟೊಮೆಟೊ ಚಟ್ನಿಯನ್ನು ಚೆನ್ನಾಗಿ ಕುದಿಸಿಕೊಳ್ಳಿ. ಈ ಮಿಶ್ರಣ ಗಟ್ಟಿಯಾಗುವವರೆಗೆ ಬೇಯಿಸಿದರೆ ಚಟ್ನಿ ಸವಿಯಲು ಸಿದ್ಧವಾಗುತ್ತದೆ.

Comments

Leave a Reply

Your email address will not be published. Required fields are marked *