ರೆಸ್ಟೋರೆಂಟ್ ಶೈಲಿಯ ಮಸಾಲಾ ಪಾಪಡ್‌ ಮನೆಯಲ್ಲಿಯೇ ಮಾಡಿ

ಕೆಲವೊಮ್ಮೆ ತುಂಬಾ ಸರಳವಾಗಿ ತಯಾರಾಗುವ ಆಹಾರವನ್ನು ತಿನ್ನಬೇಕೆನಿಸುತ್ತೆ. ಯಾಕೆ ಹೇಳಿ.. ತುಂಬಾ ಹೊತ್ತು ತೆಗೆದುಕೊಳ್ಳುವ ಆಹಾರವನ್ನು ತಯಾರಿಸುವ ತಾಳ್ಮೆ ನಮಗಿರುವುದಿಲ್ಲ. ಹೀಗಿರುವಾಗ ಎಲ್ಲರಿಗೂ ಇಷ್ಟವಾಗುವ, ಆರೋಗ್ಯಕ್ಕೂ ಒಳ್ಳೆಯದಾಗಿರುವ ತರಕಾರಿ ಬಳಸಿ ಥಟ್‌ ಅಂತ ತಯಾರಿಸ್ಪಡುವ ಮಸಾಲಾ ಪಾಪಡ್‌ ಸುಲಭವಾಗಿ ಹೀಗೆ ಮಾಡಿ.

ಸಾಮಾನ್ಯವಾಗಿ ಪಾಪಡ್‌ ಅಂಗಡಿಯಲ್ಲೇ ಸಿಗುತ್ತದೆ. ಅಂತಹ ಒಂದು ಪ್ಯಾಕೆಟ್‌ ತಂದರೆ ಸಾಕು. ಅಲ್ಲಿಗೆ ಅರ್ಧ ಕೆಲಸ ಮುಗಿದಂತೆ. ಬಳಿಕ ನಿಮಗೆ ಇಷ್ಟವಾಗುವ ಅಥವಾ ಯಾವುದಾದರೂ ತರಕಾರಿ ಬಳಸಿ ಮಸಾಲಾ ಪಾಪಡ್‌ ತಯಾರಿಸಬಹುದು. ಮೊದಲಿಗೆ ಪಾಪಡ್‌ನ್ನು ಕಾವಲಿಯ ಮೇಲೆ ಬಿಸಿ ಮಾಡಿ ಸುಟ್ಟುಕೊಳ್ಳಬೇಕು ಅಥವಾ ಎಣ್ಣೆಯಲ್ಲಿ ಕಾಯಿಸಿಕೊಳ್ಳಬೇಕು. ಆದರೆ ಹೆಚ್ಚಾಗಿ ಸುಟ್ಟುಕೊಂಡರೆ ಮಸಾಲಾ ಪಾಪಡ್‌ ಚೆನ್ನಾಗಿರುತ್ತದೆ.

ಸುಟ್ಟುಕೊಂಡ ಬಳಿಕ ಅದರ ಮೇಲೆ ಕೆಂಪು ಖಾರದ ಪುಡಿ ಹಾಕಿ, ನಂತರ ಈರುಳ್ಳಿ, ಟೊಮ್ಯಾಟೋ, ಚಿಕ್ಕದಾದ ಮಿಕ್ಸ್ಷರ್‌, ಕೊತ್ತಂಬರಿ ಸೊಪ್ಪು ಹಾಕಿ. ಕೊನೆಗೆ ಅದರ ಮೇಲೆ ಸ್ವಲ್ಪ ಉಪ್ಪು ಹಾಗೂ ನಿಂಬೆ ಹಣ್ಣಿನ ರಸ ಹಾಕಿದರೆ ಸಾಕು. ಅಲ್ಲಿಗೆ ಮಸಾಲಾ ಪಾಪಡ್‌ ರೆಡಿ…!