ಮಟನ್ ಸುಕ್ಕಾವನ್ನು ಈ ರೀತಿ ಮಾಡಿ, ಸಖತ್ ಟೇಸ್ಟಿಯಾಗಿರುತ್ತೆ

ಳಿಗಾಲದ ಸಂದರ್ಭದಲ್ಲಿ ನಾಲಿಗೆಯು ರುಚಿ ರುಚಿಯಾದ ಖಾದ್ಯವನ್ನು ಸವಿಯಲು ಬಯಸುತ್ತದೆ. ನಾನ್‌ವೆಜ್ ಪ್ರಿಯರಿಗಂತೂ ನಾನ್‌ವೆಜ್ ಪದಾರ್ಥಗಳ ಪರಿಮಳ ಮೂಗಿಗೆ ಸೋಕಿದಾಗ ಬಾಯಲ್ಲಿ ನೀರೂರುತ್ತದೆ. ಮಟನ್ ಸುಕ್ಕಾ ತಿನ್ನಬೇಕು ಅಂತಾ ನಿಮಗೆ ಆಸೆ ಆಗಿದ್ದರೆ, ನಾವು ಇಂದು ಹೇಳು ವಿಧಾನದಲ್ಲಿ ಟ್ರೈ ಮಾಡಿ ನೋಡಿ ಸಖತ್‌ ಟೇಸ್ಟಿಯಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು:
* ಮಟನ್ – 1ಕೆಜಿ
* ಶುಂಠಿ, ಬೆಳ್ಳುಳ್ಳಿ ಪೇಸ್ಟ್- 2 ಚಮಚ
* ಮೆಣಸಿನಪುಡಿ – 4 ಚಮಚ
* ಟೊಮೆಟೋ – 4
* ಅರಿಶಿಣ- 1 ಚಮಚ
* ಅಡುಗೆ ಎಣ್ಣೆ – ಅರ್ಧ ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ತುಪ್ಪಾ
* ಕೊತ್ತಂಬರಿ ಸೊಪ್ಪು- ಸ್ವಲ್ಪ

ಮಾಡುವ ವಿಧಾನ:
* ಕುಕ್ಕರ್‌ಗೆ ಮಟನ್, ಉಪ್ಪು, ಅರಿಸಿಣ, ಕೊತ್ತಂಬರಿ ಸೊಪ್ಪು, ತುಪ್ಪವನ್ನು ಸೇರಿಸಿ 4 ವಿಷಲ್ ಆಗುವವರೆಗೂ ಬೇಯಿಸಿಕೊಳ್ಳಬೇಕು. ಇದನ್ನೂ ಓದಿ: ಖಾರವಾದ ಮಟನ್ ಖೀಮಾ ಮಾಡಿ ಟೇಸ್ಟ್ ನೋಡಿ

* ನಂತರ ಟೊಮೆಟೊವನ್ನು ಮಿಕ್ಸಿಯಲ್ಲಿ ರುಬ್ಬಿಟ್ಟುಕೊಂಡಿರಬೇಕು.
* ಒಂದು ಬಾಣೆಲೆಗೆ ಎಣ್ಣೆ ಹಾಕಿ ಬೇಯಿಸಿದ ಮಾಂಸ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಪುಡಿ, ಅರಿಶಿಣ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನೂ ಓದಿ: ಹಂದಿ ಮಾಂಸದ ಗ್ರೇವಿ ಮಾಡುವ ಸರಳ ವಿಧಾನ ನಿಮಗಾಗಿ

* ನಂತರ ರುಬ್ಬಿಟ್ಟುಕೊಂಡಿದ್ದ ಟೊಮೆಟೋ ಪೇಸ್ಟ್, ಅಡುಗೆ ಎಣ್ಣೆ, ತುಪ್ಪ, ಕೊತ್ತಂಬರಿ ಸೊಪ್ಪು ಸೇರಿಸಿ ಸುಕ್ಕಾ ಹಾಗೆ ಗಟ್ಟಿಯಾಗುವವರೆಗೂ ಬೇಯಿಸಿದರೆ ರುಚಿಯಾದ ಖಾದ್ಯ ಸವಿಯಲು ಸಿದ್ಧವಾಗುತ್ತದೆ.

 

Comments

Leave a Reply

Your email address will not be published. Required fields are marked *