ಇಂದು ಮಾಡಿ ಬಿಸಿಯಾದ ಗರಂ ಗರಂ ಕಚೋರಿ

ತಂಪಾದ ವಾತಾವರಣಕ್ಕೆ ಏನಾದರೂ ಬಿಸಿಬಿಸಿ, ರುಚಿಯಾದ ಖಾದ್ಯ ತಿನ್ನಲಿದ್ದರೆ ಬಹಳ ಚೆನ್ನಾಗಿರುತ್ತದೆ ಎಂದು ಹೆಚ್ಚಿನವರಿಗೆ ಅನಿಸುವುದುಂಟು. ಆದರೆ ಅದೇ ಬಜ್ಜಿ, ಬೋಂಡಾ ತಿಂದು ಬೇಜಾರಾಗಿದ್ದರೆ, ಬಿಸಿ ಬಿಸಿಯಾದ ಕಚೋರಿ ಒಮ್ಮೆ ಟ್ರೈ ಮಾಡಬಹುದು. ಮಕ್ಕಳು ಕಚೋರಿಯನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ.

ಬೇಕಾಗುವ ಸಾಮಗ್ರಿಗಳು:
* ಮೈದಾಹಿಟ್ಟು – 2 ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ಅಜ್ವಾನ – ಅರ್ಧ ಚಮಚ
* ಅಡುಗೆ ಎಣ್ಣೆ- ಅರ್ಧ ಕಪ್
* ದನಿಯಾ – 1 ಚಮಚ
* ಜೀರಿಗೆ – 1 ಚಮಚ
* ಸೋಂಪು – 1 ಚಮಚ
* ಈರುಳ್ಳಿ – 3
* ಹಸಿಮೆಣಸು – 2
* ಕಡಲೆಹಿಟ್ಟು – 2 ಚಮಚ
* ಖಾರದ ಪುಡಿ – 1 ಚಮಚ
* ಗರಂಮಸಾಲೆ – ಅರ್ಧ ಚಮಚ
* ಕಾಳುಮೆಣಸಿನ ಪುಡಿ – ಅರ್ಧ ಚಮಚ
* ಅರಿಸಿಣ ಪುಡಿ – ಚಿಟಿಕೆ
* ಆಲೂಗೆಡ್ಡೆ – 3 (ಬೇಯಿಸಿದ್ದು)
* ಕೊತ್ತಂಬರಿ ಸೊಪ್ಪು – ಸ್ವಲ್ಪ
* ಸಕ್ಕರೆ- 1 ಚಮಚ

ಮಾಡುವ ವಿಧಾನ:
* ಮೈದಾಹಿಟ್ಟಿಗೆ ಉಪ್ಪು, ಅಜ್ವಾನ, ಅಡುಗೆಎಣ್ಣೆ ಹಾಗೂ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಚಪಾತಿ ಹಟ್ಟಿನ ಹದಕ್ಕೆ ಕಲೆಸಿಕೊಂಡು 20 ನಿಮಿಷಗಳ ಕಾಲ ನೆನೆಸಿಡಿ.
* ದನಿಯಾ, ಜೀರಿಗೆ ಹಾಗೂ ಸೋಂಪನ್ನು ಹುಡಿ ಮಾಡಿಕೊಳ್ಳಿ. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

* ಪಾತ್ರೆಯೊಂದಕ್ಕೆ 3 ಅಡುಗೆಎಣ್ಣೆ, ಈರುಳ್ಳಿ, ಹಸಿಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕಡಲೆಹಿಟ್ಟು, ಖಾರದಪುಡಿ, ಗರಂಮಸಾಲೆ, ಕಾಳುಮೆಣಸಿನ ಪುಡಿ, ಅರಿಸಿನ ಪುಡಿ, ಇಂಗು ಹಾಗೂ ಈಗಾಗಲೇ ಹುಡಿ ಮಾಡಿಟ್ಟುಕೊಂಡ ಹುಡಿಯನ್ನು ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿ ಬೇಯಿಸಿಕೊಳ್ಳಬೇಕು. ಇದನ್ನೂ ಓದಿ:   ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ


* ಅದಕ್ಕೆ ಪುಡಿ ಮಾಡಿದ ಆಲೂಗೆಡ್ಡೆ ಕೊತ್ತಂಬರಿ ಸೊಪ್ಪು, ಸಕ್ಕರೆ ಸೇರಿಸಿ ಕಲೆಸಿ. ಇದನ್ನು ಉಂಡೆ ಮಾಡಿಕೊಳ್ಳಿ. ಮೈದಾಹಿಟ್ಟಿನ ಮಿಶ್ರಣವನ್ನು ಉಂಡೆ ಮಾಡಿಕೊಂಡು ಅಂಗೈ ಅಗಲಕ್ಕೆ ತಟ್ಟಿಕೊಳ್ಳಿ. ಅದರೊಳಗೆ ಆಲೂಗೆಡ್ಡೆ ಉಂಡೆಯನ್ನು ಇರಿಸಿ ಲಟ್ಟಿಸಿಕೊಳ್ಳಿ. ಇದನ್ನು ಎಣ್ಣೆಯಲ್ಲಿ ಕರಿದರೆ ಕಚೋರಿ ಸವಿಯಲು ಸಿದ್ಧವಾಗುತ್ತದೆ.  ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

Comments

Leave a Reply

Your email address will not be published. Required fields are marked *