ನಿಮಗೆ ತಿಳಿಯದೆ ಖಾತೆಯಿಂದ ಹಣ ಡ್ರಾ ಆಗೋದು ಹೇಗೆ- 1.35 ನಿಮಿಷದ ವೈರಲ್ ವಿಡಿಯೋ ನೋಡಿ

ಬೆಂಗಳೂರು: ನೀವು ಎಟಿಎಂಗೆ ಹೋಗಿ ಹಣ ಡ್ರಾ ಮಾಡಿದರೂ ನಿಮಗೆ ಗೊತ್ತಾಗದ ರೀತಿಯಲ್ಲಿ ನಿಮ್ಮ ಕಾರ್ಡ್ ಮಾಹಿತಿ ಕದ್ದು ಖಾತೆಗೆ ಕನ್ನ ಹಾಕುತ್ತಿದ್ದ ಗ್ಯಾಂಗ್ ಹಿಂದಿನ ರಹಸ್ಯವನ್ನು ಪೊಲೀಸರು ರಿವೀಲ್ ಮಾಡಿದ್ದಾರೆ. ಖದೀಮರು ಗ್ರಾಹಕರ ಖಾತೆಗೆ ಹೇಗೆ ಕನ್ನ ಹಾಕುತ್ತಿದ್ದರು ಎಂಬುದರ ಬಗ್ಗೆ ಜಾಗೃತಿ ಮಾಡಿಸಲು ಪೊಲೀಸರು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.

1.35 ನಿಮಿಷದ ವಿಡಿಯೋವನ್ನು ತಿರುಪತಿ ಪೊಲೀಸ್ ಪೇಜ್ ನಲ್ಲಿ ಅಪ್ಲೋಡ್ ಮಾಡಿದ್ದು, ಎಟಿಎಂಗೆ ತೆರಳುವ ಗ್ರಾಹಕರ ಕಾರ್ಡ್ ಹಾಗೂ ಪಿನ್ ನಂಬರನ್ನು ಖದೀಮರು ಹೇಗೆ ಪಡೆಯುತ್ತಿದ್ದರು ಎಂಬುದರ ಸಂಪೂರ್ಣ ವಿವರಣೆ ವಿಡಿಯೋದಲ್ಲಿದೆ. ಸದ್ಯ ತಿರುಪತಿ ಪೊಲೀಸರ ಈ ವಿಡಿಯೋ ವೈರಲ್ ಆಗಿದೆ. 

https://www.facebook.com/tirupatipolice/videos/243380043198168/

ಮಾಹಿತಿ ಹೇಗೆ ಪಡೆಯುತ್ತಾರೆ?
ಗ್ರಾಹಕರಂತೆ ಎಟಿಎಂಗೆ ಪ್ರವೇಶ ಪಡೆಯುವ ಖದೀಮರು ಎಟಿಎಂ ಯಂತ್ರಕ್ಕೆ ಸ್ಕಿಮ್ಮಿಂಗ್ ಪ್ಲೇಟ್ ಹಾಗೂ ನಂಬರ್ ಪ್ಯಾಡ್ ಕಾಣುವಂತೆ ಮೈಕ್ರೊ ಕ್ಯಾಮೆರಾ ಅಳವಡಿಸಿ ಹೊರ ಬರುತ್ತಾರೆ. ಗ್ರಾಹಕರು ಎಟಿಎಂ ಯಂತ್ರದೊಳಗೆ ಕಾರ್ಡ್ ಹಾಕಿದಾಗ ಅದರ ಮಾಹಿತಿ ಸ್ಕಿಮ್ಮಿಂಗ್ ಪ್ಲೇಟ್‍ನಲ್ಲಿ ದಾಖಲಾಗುತ್ತದೆ. ಇತ್ತ ಗ್ರಾಹಕರು ಪಿನ್ ನಂಬರ್ ಒತ್ತುವುದು ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ.

ಗ್ರಾಹಕರು ಎಟಿಎಂನಿಂದ ಹೊರಬರುತ್ತಿದಂತೆ ಮೊದಲು ಅಳವಡಿಸಿದ್ದ ಕ್ಯಾಮೆರಾ ಹಾಗೂ ಸ್ಕಿಮ್ಮಿಂಗ್ ಪ್ಲೇಟ್ ತೆಗೆದುಕೊಂಡು ಆರೋಪಿಗಳು ತೆರಳುತ್ತಾರೆ. ಅದರಲ್ಲಿ ಸಂಗ್ರಹವಾಗಿದ್ದ ಮಾಹಿತಿಯನ್ನು ಲ್ಯಾಪ್‍ಟಾಪ್‍ಗೆ ವರ್ಗಾಯಿಸಿ, ಆ ಮಾಹಿತಿಯ ಅನ್ವಯ ನಕಲಿ ಕ್ರೆಡಿಟ್ ಹಾಗೂ ಡೆಬಿಡ್ ಕಾರ್ಡ್ ತಯಾರಿಸುತ್ತಾರೆ. ಬಳಿಕ ಪಿನ್ ನಂಬರ್ ಬಳಸಿ ಗ್ರಾಹಕರ ಖಾತೆಯಿಂದ ಹಣ ಡ್ರಾ ಮಾಡುತ್ತಾರೆ.

ಏನಿದು ಸ್ಕಿಮ್ಮಿಂಗ್: ರಹಸ್ಯವಾಗಿ ಎಟಿಎಂ ಯಂತ್ರಕ್ಕೆ ಅಳವಡಿಸುವ ಸಾಧನ ಇದಾಗಿದ್ದು, ಎಟಿಎಂಗೆ ಕಾರ್ಡ್ ಹಾಕುವ ಜಾಗದಲ್ಲಿ ಅಳವಡಿಸಿ ಗ್ರಾಹಕರ ಡೇಟಾಗೆ ಸಂಗ್ರಹಿಸಲಾಗುತ್ತದೆ. ಅಲ್ಲದೇ ಮೈಕ್ರೊ ಕ್ಯಾಮೆರಾ ಮೂಲಕ ನಿಮ್ಮ ಪಿನ್ ಮಾಹಿತಿ ಕೂಡ ಪಡೆಯುತ್ತಾರೆ.

ಎಚ್ಚರಿಕೆ ವಹಿಸುವುದು ಹೇಗೆ?
ಸ್ಕಿಮ್ಮಿಂಗ್ ಉಪಕರಣದಿಂದ ಕಾರ್ಡ್ ಮಾಹಿತಿ ಪಡೆದರು ಕೂಡ ಪಿನ್ ನಂಬರ್ ಇಲ್ಲದೆ ಹಣ ಡ್ರಾ ಮಾಡಲು ಸಾಧ್ಯವಾಗುವುದಿಲ್ಲ. ಅದ್ದರಿಂದ ಗ್ರಾಹಕರು ಪಿನ್ ನಂಬರ್ ಎಂಟ್ರಿ ಮಾಡುವ ವೇಳೆ ಮತ್ತೊಂದು ಕೈಯಿಂದ ಅಡ್ಡ ಹಿಡಿದು ಪಿನ್ ನಮೂದಿಸಿದರೆ ಮಾಹಿತಿ ಸೋರಿಕೆ ಆಗದಂತೆ ತಡೆಯಬಹುದಾಗಿದೆ. ಅಲ್ಲದೇ ಕಾರ್ಡ್ ರೀಡರ್ ಗಡಸಾಗಿರುವ ಅನುಭವವ ಉಂಟಾದರೆ ಈ ಕುರಿತು ಅಧಿಕಾರಿಗಳ ಗಮನಕ್ಕೆ ತರುವುದು ಉತ್ತಮ. ಇದನ್ನೂ ಓದಿ: ಯಾವ ಎಟಿಎಂ ಕಾರ್ಡ್ ಗಳು ಬೇಗ ಹ್ಯಾಕ್ ಆಗುತ್ತದೆ? ಹೊಸ ಎಟಿಎಂ ಕಾರ್ಡ್ ನಲ್ಲಿರುವ ಭದ್ರತಾ ವಿಶೇಷತೆ ಏನು?

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *