ಕೋವಿಡ್-19 ಲಸಿಕೆ ಪಡೆದು 7.4 ಕೋಟಿ ರೂ. ಗೆದ್ದ ಯುವತಿ

ಕ್ಯಾನ್ಬೆರಾ: ಕೋವಿಡ್-19 ಲಸಿಕೆ ಪಡೆದ ಯುವತಿ ಬರೋಬ್ಬರಿ 7.4 ಕೋಟಿ ರೂ. ಬಹುಮಾನ ಗೆದ್ದು, ರಾತ್ರೋರಾತ್ರಿ ಮಿಲಿಯನೇರ್ ಆಗಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

ಕೊರೊನಾ ಸೋಂಕು ಇನ್ನೂ ಪೂರ್ತಿಯಾಗಿ ಹೋಗಿಲ್ಲ. ಆದ್ದರಿಂದ ಪ್ರಪಂಚದಾದ್ಯಂತ ಸರ್ಕಾರಗಳು ಕೋವಿಡ್-19 ಲಸಿಕೆಗಳನ್ನು ತೆಗೆದುಕೊಳ್ಳುವಂತೆ ಜನರನ್ನು ಪ್ರೋತ್ಸಾಹಿಸಲು ಹಲವು ಆಫರ್ ಗಳನ್ನು ಕೊಡುತ್ತಿದೆ. ಅದೇ ರೀತಿ ಆಸ್ಟ್ರೇಲಿಯಾದಲ್ಲಿ ಲಸಿಕೆ ಪಡೆದರೆ ಲಾಟರಿ ಕೊಡುತ್ತಿದ್ದಾರೆ. ಈ ಹಿನ್ನೆಲೆ 25 ವರ್ಷದ ಸಿಡ್ನಿ ಯುವತಿಗೆ 7.4 ಕೋಟಿ ರೂ. ಲಾಟರಿ ಹೊಡೆದಿದ್ದು, ರಾತ್ರೋರಾತ್ರಿ ಈ ಯುವತಿ ಮಿಲಿಯನೇರ್ ಆಗಿದ್ದಾಳೆ. ಇದನ್ನೂ ಓದಿ: ವನ್ಯಜೀವಿ ಸಾಕ್ಷ್ಯಚಿತ್ರಕ್ಕಾಗಿ ಅಂಜನಾದ್ರಿ ಸುತ್ತ ಓಡಾಡಿದ್ದ ಅಪ್ಪು

ಕೊರೊನಾವೈರಸ್ ಲಸಿಕೆ ಪಡೆದ ಲಕ್ಷಾಂತರ ಆಸ್ಟ್ರೇಲಿಯನ್ನರಲ್ಲಿ ‘ಜೋನ್ನೆ ಝು’ ಯುವತಿ ಅದೃಷ್ಟದ ಡ್ರಾದಲ್ಲಿ ಮಿಲಿಯನೇರ್ ಆಗಿದ್ದಾಳೆ. ಭಾನುವಾರ, ದಿ ಮಿಲಿಯನ್ ಡಾಲರ್ ವ್ಯಾಕ್ಸ್ ಅಲೈಯನ್ಸ್ ಲಾಟರಿಯ ವಿಜೇತರನ್ನು ಘೋಷಿಸಿದ್ದು, ಇದರಲ್ಲಿ 25 ವರ್ಷದ ‘ಜೋನ್ನೆ ಝು’ ವಿಜೇತಶಾಲಿ ಎಂದು ಹೇಳಲಾಗಿದೆ. ಈ ಯುವತಿ ಕೋವಿಡ್-19 ವ್ಯಾಕ್ಸಿನೇಷನ್ ಹಾಕಿಸಿಕೊಂಡಿದ್ದು, 7.4 ಕೋಟಿ ರೂ. ಗೆದ್ದಿದ್ದಾಳೆ.

ಈ ಕುರಿತು ಮಾತನಾಡಿದ ಜೋನ್ನೆ ಝು, ಈ ಹಣದಿಂದ ನಾನು ನನ್ನ ಕುಟುಂಬವನ್ನು ಒಳ್ಳೆಯ ಮನೆಯಲ್ಲಿ ಇರಿಸಲು ಬಯಸುತ್ತೇನೆ. ಅವರಿಗೆ ಉಡುಗೊರೆಗಳನ್ನು ಖರೀದಿಸುತ್ತೇನೆ. ಉಳಿದ ಹಣವನ್ನು ಭವಿಷ್ಯಕ್ಕಾಗಿ ಕೂಡಿ ಇಡುತ್ತೇನೆ. ಇದರ ಜೊತೆಗೆ ಹೆಚ್ಚಿನ ಹಣವನ್ನು ಗಳಿಸಿ ಜನರಿಗೆ ಸಹಾಯ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಬೆಟ್ಟದ ಹೂವು ಚಿತ್ರದಲ್ಲಿ ನಟನೆ ಮಾಡಲ್ಲವೆಂದು ಅಪ್ಪು ಹಠಮಾಡಿದ್ದರು: ಹೊನ್ನಾವಳ್ಳಿ ಕೃಷ್ಣ

ಬಹುಮಾನ ಫೋಷಿಸುವ ಹಿಂದಿನ ದಿನ ಯಾರೋ ನನಗೆ ಫೋನ್ ಮಾಡಿದರು. ಆ ಸಮಯದಲ್ಲಿ ನಾನು ಕೆಲಸದಲ್ಲಿದ್ದೆ. ನನಗೆ ಫೋನ್ ರಿಸೀವ್ ಮಾಡಲು ಸಾಧ್ಯವಾಗಲಿಲ್ಲ. ನಂತರ ನಾನು ಆ ನಂಬರ್ ಗೆ ಕಾಲ್ ಮಾಡಿದೆ. ಆಗ ಅವರು ನೀವು ಲಾಟರಿ ಗೆದ್ದಿದ್ದೀರಿ ಎಂದು ಹೇಳಿದಾಗ ನನಗೆ ಸಂತೋಷ ತಡೆದುಕೊಳ್ಳಲು ಆಗಲಿಲ್ಲ ಎಂದು ತಿಳಿಸಿದರು.

ಈ ಬಹುಮಾನವನ್ನು ಆಸ್ಟ್ರೇಲಿಯನ್ನರಲ್ಲಿ ವ್ಯಾಕ್ಸಿನೇಷನ್ ದರಗಳನ್ನು ಹೆಚ್ಚಿಸಲು ಮಿಲಿಯನ್ ಡಾಲರ್ ವ್ಯಾಕ್ಸ್ ಯೋಜನೆಯನ್ನು ಮಾಡಲಾಗಿದೆ. ಗೆದ್ದವರಿಗೆ 1 ಮಿಲಿಯನ್ ನಗದು ಜೊತೆಗೆ 100 ಗಿಫ್ಟ್ ಕಾರ್ಡ್ ಮತ್ತು 1000 ಡಾಲರ್ ಅನ್ನು ಕೊಂಡಳಾಗುತ್ತೆ.

Comments

Leave a Reply

Your email address will not be published. Required fields are marked *