ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ ಹೇಮ ಮಾಲಿನಿ, ಧರ್ಮೇಂದ್ರ

ಮುಂಬೈ: ಬಾಲಿವುಡ್ 90ರ ದಶಕದ ಡ್ರೀಮ್ ಗರ್ಲ್ ಹೇಮ ಮಾಲಿನಿ ಮತ್ತು ಧರ್ಮೇಂದ್ರ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.

ಹೇಮ ಮಾಲಿನಿ ಅ.16ರಂದು 73ನೇ ಹುಟ್ಟುಹಬ್ಬವನ್ನು ತನ್ನ ಕುಟುಂಬ ಮತ್ತು ಆಪ್ತರೊಂದಿಗೆ ಆಚರಿಸಿಕೊಂಡಿದ್ದು, ಈಗ ಪತಿ ಧರ್ಮೇಂದ್ರ ಅವರೊಂದಿಗೆ ವಿಶ್ರಾಂತಿಯಲ್ಲಿದ್ದಾರೆ. ಹೇಮ ಅವರು ತಮ್ಮ ಮತ್ತು ಧರ್ಮೇಂದ್ರ ಅವರ ಫೋಟೋವನ್ನು ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ನನ್ನ ಜನ್ಮದಿನದಂದು ಪ್ರೀತಿಯ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ತನ್ನ ಹಿತೈಷಿಗಳಿಗೆ, ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಇದನ್ನೂ ಓದಿ: 26 ಪ್ರಕರಣಗಳಲ್ಲಿ ಸಮೀರ್ ತನಿಖೆ ನಡೆಸುವಾಗ ಸರಿಯಾದ ನಿಯಮಗಳನ್ನು ಅನುಸರಿಸಿಲ್ಲ: ನವಾಬ್ ಮಲಿಕ್

ಇನ್‍ಸ್ಟಾದಲ್ಲಿ ಫೋಟೋ ಶೇರ್ ಮಾಡಿದ ಅವರು, ನನ್ನ ಜನ್ಮದಿನದಂದು ನನಗೆ ಶುಭ ಹಾರೈಸಿದ ಮತ್ತು ಸುಂದರವಾದ ಸಂದೇಶಗಳನ್ನು ಕಳುಹಿಸಿದ ಎಲ್ಲರಿಗೂ ಧನ್ಯವಾದಗಳು. ನಿಮ್ಮೆಲ್ಲರಿಂದ ಪ್ರೀತಿಯನ್ನು ಸ್ವೀಕರಿಸಲು ನಾನು ಸಂತೋಷ ಪಡುತ್ತೇನೆ. ಇದಕ್ಕೆ ನಾನು ಕೃತಜ್ಞತೆಯ ಭಾವನೆಯನ್ನು ಹೊಂದಿದ್ದೇನೆ. ಎಲ್ಲರಿಗೂ ಧನ್ಯವಾದಗಳು. ಹುಟ್ಟುಹಬ್ಬ ಆಚರಣೆ ಮಾಡಿದ ನಂತರ ವಿಶ್ರಾಂತಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಫೋಟೋದಲ್ಲಿ ಹೇಮ ಮಾಲಿನಿ ಮತ್ತು ಧಮೇರ್ಂದ್ರ ಅವರು ಒಟ್ಟಿಗೆ ಮುದ್ದಾಗಿ ಕಾಣಿಸಿಕೊಂಡಿದ್ದು, ಧರ್ಮೇಂದ್ರ ಹೇಮ ಭುಜದ ಮೇಲೆ ಕೈ ಹಾಕಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

ಹೇಮ ಮಾಲಿನಿ ಅವರು ಅವರ ಹುಟ್ಟುಹಬ್ಬದ ಎರಡು-ಮೂರು ದಿನಗಳ ನಂತರ ಸೆಲೆಬ್ರೇಷನ್ ಫೋಟೋಗಳನ್ನು ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿದ್ದರು. ಫೋಟೋದಲ್ಲಿ ಮಗಳು ಇಶಾ ಡಿಯೋಲ್, ಧರ್ಮೇಂದ್ರ, ಹೇಮ ಮಾಲಿನಿ, ಹಿರಿಯ ನಟ ಸಂಜಯ್ ಖಾನ್ ಅವರೊಂದಿಗೆ ಕೇಕ್ ಅನ್ನು ಕತ್ತರಿಸಿದ್ದಾರೆ. ಕುಟುಂಬ ಮತ್ತು ಕೆಲವು ಆಪ್ತರೊಂದಿಗೆ ಮನೆಯಲ್ಲಿ ಹುಟ್ಟುಹಬ್ಬದ ಆಚರಣೆ ಎಂದು ಬರೆದು ಫೋಟೋ ಫೋಸ್ಟ್ ಮಾಡಿದ್ದರು. ಇದನ್ನೂ ಓದಿ: KFC ತಿರಸ್ಕರಿಸಿ ಅಭಿಯಾನಕ್ಕೆ ತಮಿಳಿಗರ ಬೆಂಬಲ

ಧರ್ಮೇಂದ್ರ ಮತ್ತು ಹೇಮ ಮಾಲಿನಿ 1979ರಲ್ಲಿ ಮದುವೆಯಾದರು. ಈ ದಂಪತಿಗೆ ಇಶಾ ಮತ್ತು ಅಹಾನಾ ಡಿಯೋಲ್ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಶೋಲೆ, ಸೀತಾ ಔರ್ ಗೀತಾ, ದಿಲಗಿ, ರಾಜಾ ಜಾನಿ, ದೋ ದಿಶಾಯೇನ್, ದಿ ಬರ್ನಿಂಗ್ ಟ್ರೈನ್, ಜುಗ್ನು, ದಿಲ್ ಕಾ ಹೀರಾ ಮತ್ತು ಡ್ರೀಮ್ ಗರ್ಲ್ ಮುಂತಾದ ಚಿತ್ರಗಳಲ್ಲಿ ಧರ್ಮೇಂದ್ರ ಮತ್ತು ಹೇಮ ಮಾಲಿನಿ ಒಟ್ಟಿಗೆ ನಟಿಸಿದ್ದಾರೆ.

Comments

Leave a Reply

Your email address will not be published. Required fields are marked *