1940ರಲ್ಲೇ ನಿಧನರಾದ ಹೆಡ್ಗೆವಾರ್ 1942ರಲ್ಲಿ ಬ್ರಿಟಿಷರಿಗೆ ಸಹಾಯ ಮಾಡಿದ್ಹೇಗೆ? – ಟ್ವೀಟ್‌ನಲ್ಲೇ ಟಾಂಗ್ ಕೊಟ್ಟ ಬಿಜೆಪಿ

ಬೆಂಗಳೂರು: ಪ್ರಸ್ತುತ ಆರ್‌ಎಸ್‌ಎಸ್ ವಿಚಾರವಾಗಿ ಕಾಂಗ್ರೆಸ್-ಬಿಜೆಪಿ ರಾಷ್ಟ್ರೀಯ ಪಕ್ಷಗಳ ನಡುವೆ ತಿಕ್ಕಾಟ ಶುರುವಾಗಿದೆ. ಈ ನಡುವೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾಡಿದ ಟ್ವೀಟ್‌ಗೆ ಬಿಜೆಪಿ ಟಾಂಗ್ ಕೊಟ್ಟಿದೆ.

ಹೌದು.. `1942ರ ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಆರ್‌ಎಸ್‌ಎಸ್‌ನ ಹೆಡ್ಗೆವಾರ್, ಗೋಲ್ವಾಲ್ಕರ್ ಅವರು ಬ್ರಿಟಿಷರ ಜೊತೆ ಸೇರಿ ಸಂಚು ರೂಪಿಸಿ ಚಳವಳಿಯನ್ನು ಹತ್ತಿಕ್ಕಲು ಯತ್ನಿಸಿದ್ದನ್ನು ಈ ದೇಶದ ಜನ ಮರೆತಿಲ್ಲ’ ಎಂದು ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಹಿಂಸಾಚಾರ ಪ್ರತಿಭಟನೆ: ಪೊಲೀಸರಿಂದ ಪರಿಸ್ಥಿತಿ ನಿಯಂತ್ರಿಸಲಾಗದಿದ್ರೆ ಕೇಂದ್ರ ಪಡೆ ಕರೆಸಿ – ಹೈಕೋರ್ಟ್

ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ 1940ರಲ್ಲೇ ಹೆಡ್ಗೆವಾರ್ ತೀರಿಕೊಂಡಿದ್ದಾರೆ. ಹೀಗಿರುವಾಗ 1942ರಲ್ಲಿ ಬ್ರಿಟಿಷರಿಗೆ ಸಹಾಯ ಮಾಡಲು ಹೇಗೆ ಸಾಧ್ಯ ಎಂಬುದನ್ನು ದಾಖಲೆ ಪ್ರಶ್ನಿಸಿದೆ. ಇದನ್ನೂ ಓದಿ: ಟಿಕೆಟ್ ಇದ್ದೂ ಪ್ರವೇಶ ನಿರಾಕರಿಸಿದ ಏರ್‌ಇಂಡಿಯಾಕ್ಕೆ 10 ಲಕ್ಷ ದಂಡ

#ಶಿಕ್ಷಣವಿರೋಧಿಕಾಂಗ್ರೆಸ್ ಎನ್ನುವ ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿರುವ ಬಿಜೆಪಿ, ತಿರುಚಿದ ಇತಿಹಾಸದ ಪಠ್ಯ ಪುಸ್ತಕ ಓದಿ, ನಮ್ಮ ನೆಲದ ಇತಿಹಾಸದ ಬಗ್ಗೆ ತಿಳಿಯದೆ, ಇತಿಹಾಸದ ಬಗ್ಗೆ ಸುಳ್ಳನ್ನೇ ಮಾತನಾಡುತ್ತಾ ಬಂದವರಲ್ಲಿ ಸಿದ್ದರಾಮಯ್ಯ ಅವರೂ ಒಬ್ಬರು. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಾದ ತಪ್ಪುಗಳನ್ನು ನಮ್ಮ ಸರ್ಕಾರ ತಿದ್ದುತ್ತಿದೆ. ಅದಕ್ಕೂ ವಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಕುಟುಕಿದೆ.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ನಕಲಿ ಗಾಂಧಿಗಳಲ್ಲ: ಈ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಬೇರೆ, ಮಹಾತ್ಮ ಗಾಂಧಿ ಬೇರೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಮಹಾತ್ಮ ಗಾಂಧಿಯೇ ಹೊರತು, ಈ ನಕಲಿ ಗಾಂಧಿಗಳಲ್ಲ. #ಬುರುಡೆರಾಮಯ್ಯ ಅವರು ಗಾಂಧಿ ಕುಟುಂಬದ ವಂಶ ವೃಕ್ಷದ ಬಗ್ಗೆ ಮೊದಲು ಅರಿತುಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದೆ.

Comments

Leave a Reply

Your email address will not be published. Required fields are marked *