ಹಾಟ್ ದುಂಡು ಮಲ್ಲಿಗೆ ನಮಿತಾ ಮದುವೆಗೆ ರೆಡಿಯಾಗಿದ್ದು ಹೇಗೆ ಗೊತ್ತಾ? ಈ ವಿಡಿಯೋ ನೋಡಿ

ಬೆಂಗಳೂರು: ಈ ವರ್ಷ ಸಿನಿಮಾ ಮತ್ತು ಕ್ರಿಕೆಟ್ ಅಂಗಳದಲ್ಲಿ ಮದುವೆಯ ಕಲರವ ಸಿಕ್ಕಾಪಟ್ಟೆ ಕೇಳಿ ಬಂದಿದೆ. ಇನ್ನೂ ಕೆಲ ಸೆಲಬ್ರೆಟಿಗಳು ಮದುವೆಯಾಗಿ ತಿಂಗಳುಗಳೇ ಕಳೆದ್ರೂ ಸಾಮಾಜಿಕ ಜಾಲತಾಣಗಳಲ್ಲಿ ಮದುವೆ ಮೇನಿಯಾ ಇನ್ನೂ ಕಡಿಮೆಯಾಗಿಲ್ಲ.

ಹೌದು, ಸ್ಯಾಂಡಲ್‍ವುಡ್ ನ ದುಂಡು ಮಲ್ಲಿಗೆ ನಮಿತಾ ಮದುವೆಯಾಗಿ ತಿಂಗಳು ಕಳೆಯುತ್ತಾ ಬಂದಿದೆ. ಆದರೆ ಬುಧವಾರ ನಮಿತಾ ತಾವು ಮದುವೆಗೆ ತಯಾರಾಗುತ್ತಿರುವ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಎಲ್ಲ ಅಭಿಮಾನಿಗಳು ಮದುವೆ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ್ದ ನಮಿತಾ ರೆಡಿಯಾಗಿದ್ದು ಹೇಗೆ? ಎಂಬುದನ್ನು ನೋಡುತ್ತಿದ್ದಾರೆ.

ವಿಡಿಯೋದಲ್ಲಿ ಏನಿದೆ?: ಯುಟ್ಯೂಬ್ ನಲ್ಲಿ ಅಪ್ಲೋಡ್ ಆಗಿರುವ ವಿಡಿಯೋದಲ್ಲಿ ಮೊದಲಿಗೆ ನಮಿತಾ ಮತ್ತು ವೀರ್ ಧರಿಸಿರುವ ಉಡುಪುಗಳನ್ನು ತೋರಿಸಲಾಗಿದೆ. ನಂತರ ಮದುವೆಗೆ ನಮಿತಾ ಮತ್ತು ವೀರ್ ತಯಾರಾಗುವ ಝಲಕ್ ನ್ನು ಕಾಣಬಹುದು. ವಿಡಿಯೋದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ನಮಿತಾ ಗೆಳತಿಯರ ಸಮ್ಮುಖದಲ್ಲಿ ಮೇಕಪ್, ಮೆಹಂದಿ ಹಾಕಿಕೊಳ್ಳುತ್ತಿದ್ದಾರೆ. ಇದೇ ವಿಡಿಯೋದಲ್ಲಿ ನಮಿತಾ ಮದುವೆಯ ತುಣುಕುಗಳು, ಮಾಂಗಲ್ಯಧಾರಣೆ, ಬಂಧು-ಬಳಗವನ್ನು ತೋರಿಸಲಾಗಿದೆ.

ನೀಲಕಂಠ, ನಮಿತಾ ಐ ಲವ್ ಯು ಸೇರಿದಂತೆ ಕನ್ನಡದ ಹಲವು ಚಿತ್ರಗಳಲ್ಲಿ ನಮಿತಾ ನಟಿಸಿದ್ದಾರೆ. ನವೆಂಬರ್ 24ರಂದು ತಿರುಪತಿ ತಿಮ್ಮಪ್ಪನ ಆಶೀರ್ವಾದದೊಂದಿಗೆ ಗೆಳಯ ವಿರೇಂದ್ರರೊಂದಿಗೆ ಸಾಂಸರಿಕ ಜೀವನಕ್ಕೆ ಕಾಲಿರಿಸಿದ್ದಾರೆ.

https://www.youtube.com/watch?v=9AWQ3_dwGTI

https://www.youtube.com/watch?v=zqBY9t8PXuw

https://www.youtube.com/watch?v=1OyWDbTqZ1A

Comments

Leave a Reply

Your email address will not be published. Required fields are marked *