54 ಮುಸ್ಲಿಂ ರಾಷ್ಟ್ರಗಳಿಂದ ಪಾಕ್ ಪ್ರಧಾನಿಗೆ ಅವಮಾನ!

ರಿಯಾದ್: ನಿವೃತ್ತ ಸೇನಾಧಿಕಾರಿ ಕುಲಭೂಷಣ್ ಜಾಧವ್ ಮರಣದಂಡನೆ ಪ್ರಕರಣದಲ್ಲಿ ಭಾರತದೆದುರು ಭಾರೀ ಮುಖಭಂಗ ಅನುಭವಿಸಿದ ಬೆನ್ನಲ್ಲೇ ಇದೀಗ ಪಾಕ್ ಪ್ರಧಾನಿ ನವಾಜ್ ಶರೀಫ್ ಅವರಿಗೆ 54 ಮುಸ್ಲಿಂ ರಾಷ್ಟ್ರಗಳು ಅವಮಾನ ಮಾಡಿವೆ.

ರಿಯಾದ್ ನಲ್ಲಿ ನಡೆದ ಅರಬ್ ಇಸ್ಲಾಮಿಕ್ ಅಮೆರಿಕನ್ ಶೃಂಗಸಭೆಯಲ್ಲಿ 54 ಮುಸ್ಲಿಂ ರಾಷ್ಟ್ರಗಳು ಭಾಗವಹಿಸಿದ್ದವು. ಈ ಸಭೆಯಲ್ಲಿ ಪಾಕ್ ಪ್ರಧಾನಿ ಶರೀಫ್ ದೀರ್ಘ ಭಾಷಣಕ್ಕೆ ರೆಡಿಯಾಗಿದ್ದರು. ವಿಶೇಷವಾಗಿ ರಿಯಾದ್‍ಗೆ ತೆರಳುತ್ತಿದ್ದಾಗಲೂ ಈ ಭಾಷಣ ಅಭ್ಯಾಸ ಮಾಡಿದ್ದರು. ಆದರೆ ಈ ಭಾಷಣ ಮಾಡಲು ಪ್ರಧಾನಿಯನ್ನು ವೇದಿಕೆಗೆ ಕರೆಯದೇ ಇರುವ ಮೂಲಕ ಉಳಿದ ರಾಷ್ಟ್ರಗಳು ಅವಮಾನಿಸಿದೆ ಎಂದು ಝಿ ನ್ಯೂಸ್ ವರದಿ ಮಾಡಿದೆ.

ಸಭೆಗೆ ಭಾಗವಹಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಕ್ ಪ್ರಧಾನಿ ಕೈಕುಲುಕಿಸಿ ಅಫ್ಗಾನ್ ಅಧ್ಯಕ್ಷ ಅಶ್ರಫ್ ಘನಿ, ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಮುಂತಾದವರ ಜೊತೆ ಮಾತುಕತೆ ನಡೆಸಿದ್ದಾರೆ.

ಬಳಿಕ ಸಭೆಯಲ್ಲಿ ಟ್ರಂಪ್, ಭಾರತ, ರಷ್ಯಾ ಹಾಗೂ ಆಸ್ಟ್ರೇಲಿಯಾದಲ್ಲಿ ಉಗ್ರರ ದಾಳಿ ಬಗ್ಗೆ ಮಾತನಾಡಿದ್ದಾರೆ. ಆದ್ರೆ ಪಾಕಿಸ್ತಾನದ ಬಗ್ಗೆ ಚಕಾರವೇ ಎತ್ತಿಲ್ಲ. ಅಲ್ಲದೇ ಬೇರೆ ದೇಶಗಳ ಮೇಲೆ ದಾಳಿ ಮಾಡುವ ಮೊದಲು ಉಗ್ರರು ತಮ್ಮ ನೆಲದ ಬಗ್ಗೆ ಖಚಿತಪಡಿಸಿಕೊಳ್ಳಲಿ ಅಂತಾ ಹೇಳಿದ್ರು.

Comments

Leave a Reply

Your email address will not be published. Required fields are marked *