ಗಂಡನ ಚಪಲ, ಹೆಣ್ಣಿನ ಶೋಕಿಯಿಂದ ಬೇಸತ್ತು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿ ಗೃಹಿಣಿ ಆತ್ಮಹತ್ಯೆ!

ಕೋಲಾರ: ಗಂಡನ ಚಪಲ ಹಾಗೂ ಹೆಣ್ಣಿನ ಶೋಕಿಯಿಂದ ಬೇಸತ್ತ ಮಹಿಳೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕಪ್ಪಲಮಡಗು ಗ್ರಾಮದಲ್ಲಿ ನಡೆದಿದೆ.

ದಿವ್ಯಾ(23) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಕಳೆದ ಕೆಲವು ದಿನಗಳಿಂದ ಪತಿಯ ಪರ ಹೆಣ್ಣಿನ ಸಹವಾಸ ಹಾಗೂ ಒಡವೆ ವಿಚಾರದಲ್ಲಿ ಚಿಕ್ಕಮ್ಮನೊಂದಿಗೆ ಮನಸ್ತಾಪದಿಂದ ಮನನೊಂದಿದ್ದ ಗೃಹಿಣಿ ದಿವ್ಯಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ದಿವ್ಯಾ ಪತಿ ರಾಮಚಂದ್ರನಿಗೆ ಎರಡನೇ ಪತ್ನಿಯಾಗಿದ್ದಳು. ರಾಮಚಂದ್ರನಿಗೆ ಪರ ಸ್ತ್ರೀಯರ ಜೊತೆಗಿನ ಸಂಬಂಧ ಹಾಗೂ ತನ್ನ ಚಿಕ್ಕಮ್ಮ ರಾಧಮ್ಮರೊಂದಿಗೆ ಒಡವೆ ವಿಚಾರದಲ್ಲಿ ಮನಸ್ತಾಪ ಮಾಡಿಕೊಂಡಿದ್ದಳು ಎನ್ನಲಾಗಿದೆ. ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ದಿವ್ಯಾ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿಕೊಂಡು ಸಾವನ್ನಪ್ಪಿದ್ದಾಳೆ.

ಫೇಸ್‍ಬುಕ್ ಪೋಸ್ಟ್ ನಲ್ಲಿ ಏನಿದೆ?
“ಪ್ರೀತಿಸಿ ಮದುವೆಯಾಗಿ ತನ್ನ ಹಂಡತಿನ ಬಿಟ್ಟು ಬೇರೊಬ್ಬ ಪತ್ನಿಯನ್ನು ನೋಡುವುದು ಎಷ್ಟರ ಮಟ್ಟಿಗೆ ಸರಿ? ಬದಲಿಗೆ ತನ್ನ ಪತ್ನಿಯನ್ನು ಆತ ಇಷ್ಟಪಟ್ಟಿದ್ದ ಆಕೆಯ ಗಂಡನಿಗೆ ಬದಲಾಯಿಸಿ ಕೊಡಬಹುದಲ್ವೇ, ದಯವಿಟ್ಟು ಅಲೋಚಿಸಿ ಅಣ್ಣ ತಮ್ಮಂದಿರೇ, ಸ್ನೇಹಿತರೇ ಎಂದೇ ಆಗಲಿ ನಾವು ಸರಿ ಇದ್ದರೆ ಮಾತ್ರ ನಮ್ಮ ಸಮಾಜ ಸರಿ ಇರುತ್ತದೆ. ಈಗ ಆತನಿಗೆ ಯಾವ ಶಿಕ್ಷೆ ನೀಡಬಹುದು ಎಂದು ದಯವಿಟ್ಟು ಕಾಮೆಂಟ್ ಮೂಲಕ ತಿಳಿಸಿ” ಎಂದು ಫೇಸ್‍ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಳು. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *