ಅಕಾಲಿಕ ಮಳೆಗೆ ಕುಸಿದ ಮನೆ – ಅವಶೇಷಗಳಡಿ ಸಿಲುಕಿ ಬಾಲಕಿ ಸಾವು

ರಾಯಚೂರು: ಜಿಲ್ಲೆಯಲ್ಲಿ ಕಳೆದ 3 ದಿನಗಳಿಂದ ಸುರಿದ ಅಕಾಲಿಕ ಮಳೆಗೆ (Rain) ರಾಯಚೂರು (Raichur) ತಾಲೂಕಿನ ಕುರುವಕಲಾ ಗ್ರಾಮದಲ್ಲಿ ಮನೆಯೊಂದು ಕುಸಿದಿದ್ದು (House Collapse) ಬಾಲಕಿಯೊಬ್ಬಳು (Girl) ಸಾವನ್ನಪ್ಪಿದ್ದಾಳೆ.

ನಿರ್ಮಲಾ (13) ಮನೆ ಕುಸಿತದಿಂದಾಗಿ ಮೃತಪಟ್ಟ ಬಾಲಕಿ. ಮನೆ ಅವಶೇಷಗಳಡಿ ಸಿಲುಕಿದ್ದ ಬಾಲಕಿ ನಿರ್ಮಲಾ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಹಿಂಡಲಗಾ ಕೈದಿ ಹೆಸರಲ್ಲಿ ನಿತಿನ್ ಗಡ್ಕರಿ ಕಚೇರಿಗೆ ಮತ್ತೊಮ್ಮೆ ಜೀವಬೆದರಿಕೆ ಕರೆ

ಜಿಲ್ಲೆಯಲ್ಲಿ ಮಳೆಯ ಆರ್ಭಟ ನಿಂತಿದ್ದರೂ ಕಳೆದ 3 ದಿನಗಳಿಂದ ಸುರಿದಿದ್ದ ಅಕಾಲಿಕ ಮಳೆಗೆ ಹಳೆಯ ಮಣ್ಣಿನ ಮನೆಗಳು ಶಿಥಿಲಗೊಂಡಿವೆ. ಕುರುವಕಲಾ ಗ್ರಾಮದಲ್ಲಿ ಮನೆ ಹಳೆಯದಾಗಿದ್ದರಿಂದ ಮಳೆಗೆ ಕುಸಿದು ಬಿದ್ದಿದ್ದೆ. ಮನೆಯಲ್ಲಿದ್ದ ಮೃತ ಬಾಲಕಿಯ ತಾಯಿ ಹಾಗೂ ತಂಗಿಗೆ ಗಂಭೀರ ಗಾಯಗಳಾಗಿವೆ.

ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮುಂಬೈನಿಂದ ಗದಗ ನಗರಕ್ಕೆ ತರುತ್ತಿದ್ದ 4 ಕೆಜಿ ಬಂಗಾರ ಸೀಜ್

Comments

Leave a Reply

Your email address will not be published. Required fields are marked *