ಉರ್ದು ಭಾಷೆಯಲ್ಲಿ ದೇವರ ನಾಮಫಲಕ ಹಾಕಿದ್ದಕ್ಕೆ ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ

– ಕರ್ನಾಟಕ ರಕ್ಷಣಾ ಸೇನೆಯ ಅಧ್ಯಕ್ಷ ನ್ಯಾಯಾಂಗ ಬಂಧನಕ್ಕೆ

ಬೆಂಗಳೂರು: ಉರ್ದು ಭಾಷೆಯಲ್ಲಿ ದೇವರ ನಾಮಫಲಕ ಹಾಕಿದ್ದಕ್ಕೆ “ನೀವೇನು ಪಾಕಿಸ್ತಾನದಲ್ಲಿ ಇದ್ದೀರಾ” ಅಂತಾ ಹೋಟೆಲ್‌ನಲ್ಲಿ ರಾದ್ಧಾಂತ ನಡೆಸಿರೋ ಘಟನೆ ಬೆಂಗಳೂರಿನ ಸಹಕಾರ ನಗರದಲ್ಲಿ ನಡೆದಿದೆ.

ಸ್ಟಾರ್ ಬ್ರಿಯಾನಿ ಹೋಟೆಲ್‌ನಲ್ಲಿ ಊಟಕ್ಕೆ ಬಂದಿದ್ದ ಮೂವರು ಊಟ ಮಾಡಿದ್ದಾರೆ. ಬಳಿಕ ಬಿಲ್ ಕೊಡಲು ಕ್ಯಾಶ್ ಕೌಂಟರ್‌ಗೆ ಹೋಗಿದ್ದಾರೆ. ಅಲ್ಲಿ ಉರ್ದು ಭಾಷೆಯಲ್ಲಿ ದೇವರ ನಾಮಫಲಕ ನೋಡಿ ಹಲ್ಲೆ ಮಾಡಿದ್ದಾರೆ. ಇದನ್ನೂ ಓದಿ: 10 ರೂ. ಕೇಳಿದ್ದಕ್ಕೆ ಅಪ್ರಾಪ್ತ ಮಗನನ್ನು ಕತ್ತು ಹಿಸುಕಿ ಕೊಂದ ತಂದೆ

ಕರ್ನಾಟಕ ರಕ್ಷಣಾ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿ.ರಮೇಶ್‌ಗೌಡ ತನ್ನ ಇಬ್ಬರು ಸ್ನೇಹಿತರ ಜೊತೆ ಹೋಗಿ ಈ ಗಲಾಟೆ ಮಾಡಿದ್ದಾರೆ. ಬಳಿಕ ಪೊಲೀಸರು ರಮೇಶ್‌ನನ್ನ ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲಿ ಕೂಡ ರಂಪಾಟ ಮಾಡಿ ಗಾಜನ್ನು ಒಡೆದು ಹಾಕಿದ್ದಾನೆ. ಇದನ್ನೂ ಓದಿ: ಕಣ್ಣು ಕಿತ್ತು, ಕತ್ತು ಕೊಯ್ದು ನರ್ಸಿಂಗ್‌ ವಿದ್ಯಾರ್ಥಿನಿಯ ಕೊಲೆ – ಕರಾಳ ರಾತ್ರಿಯಲ್ಲಿ ನಡೆದಿದ್ದೇನು?

ಪ್ರಕರಣ ದಾಖಲಿಸಿಕೊಂಡ ಕೊಡಿಗೇನಹಳ್ಳಿ ಪೊಲೀಸರು ರಮೇಶ್‌ನನ್ನ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.