ಹುಡ್ಗೀರ ಹಾಸ್ಟೆಲ್‍ನಲ್ಲಿ ವಿಕೃತ ಕಾಮಿಯ ಸಂಚಾರ- ಹೆಣ್ಮಕ್ಕಳ ಬಟ್ಟೆ ಧರಿಸಿ ಸೈಕೋ ಆನಂದ

ಹಾಸನ: ವಿದ್ಯಾರ್ಥಿನಿಯರ ಹಾಸ್ಟೆಲ್‍ಗೆ ಕಾಮುಕರು ನುಗ್ಗಿ ಅವಾಂತರ ಸೃಷ್ಟಿಸೋದು ಮಾಮೂಲಾಗಿ ಬಿಟ್ಟಿದೆ. ಈಗ ಹಾಸನದ ವಿದ್ಯಾನಗರದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಕಾಮುಕ ಪ್ರವೇಶಿಸಿ ಆತಂಕ ಸೃಷ್ಟಿಸಿದ್ದಾನೆ.

ಮುಂಜಾನೆ ಸುಮಾರು 2.40ಕ್ಕೆ ಕಳ್ಳಮಾರ್ಗದಲ್ಲಿ ಹಾಸ್ಟೆಲ್ ನ ಟೆರೇಸ್ ಪ್ರವೇಶಿಸಿ ಅಲೆದಾಡುವ ಕಾಮಿ, ಹೆಣ್ಣು ಮಕ್ಕಳ ಬಟ್ಟೆ ಧರಿಸುವುದು, ಒಳ ಉಡುಪುಗಳೊಂದಿಗೆ ವಿಕೃತ ಆನಂದ ಅನುಭವಿಸುತ್ತಾನೆ. ನಂತರ ಹಾಸ್ಟೆಲ್ ಪಕ್ಕದ ಮನೆಯಲ್ಲಿ ನಿಲ್ಲಿಸಿದ್ದ ಬೈಕ್ ಕಳವಿಗೂ ಯತ್ನಿಸಿದ್ದಾನೆ. ಬೈಕ್ ಸ್ಟಾರ್ಟ್ ಆಗದೇ ಇದ್ದಾಗ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಈ ಎಲ್ಲಾ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಮುಂಜಾನೆ ನಿವಾಸಿಗಳು ನಿದ್ರೆಗೆ ಜಾರಿದ್ದು ಕಳ್ಳ ಕಾಮುಕನ ಆಟ ಯಾರಿಗೂ ಗೊತ್ತಾಗಿಲ್ಲ ಎಂದು ವಿದ್ಯಾರ್ಥಿನಿ ಹರ್ಷಿತಾ ಹೇಳಿದ್ದಾಳೆ.

ಹಾಸ್ಟೆಲ್ ಕಟ್ಟಡದಿಂದ ಹೊರ ಬಂದ ನಂತರ ಪಕ್ಕದ ಮನೆಯಲ್ಲಿ ನಿಲ್ಲಿಸಿದ್ದ ಹೋಂಡಾ ಶೈನ್ ಬೈಕ್ ಕಳವಿಗೆ ಯತ್ನ ಮಾಡುವ ಕಳ್ಳ, ಲಾಕ್ ಮಾಡದ ಬೈಕನ್ನು ಹೊರಗಡೆ ತೆಗೆದುಕೊಂಡು ಹೋಗುತ್ತಾನೆ. ಈ ದೃಶ್ಯವೂ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಬೈಕ್ ರಿಪೇರಿ ಇದ್ದ ಕಾರಣ ಒಂದೂವರೆ ತಿಂಗಳಿಂದ ಮನೆ ಮುಂದೆ ನಿಲ್ಲಿಸಲಾಗಿತ್ತು. ಕೊನೆಗೆ ಅದು ಸ್ಟಾರ್ಟ್ ಆಗದೇ ಇದ್ದಾಗ, ನೇತಾಜಿ ಶಾಲೆ ಪಕ್ಕದಲ್ಲೇ ಬೆಂಕಿ ಹಚ್ಚಿ ಕಳ್ಳ-ಕಾಮುಕ ಪರಾರಿಯಾಗಿದ್ದಾನೆ ಎಂದು ಬೈಕ್ ಮಾಲೀಕ ಸುನಿಲ್ ತಿಳಿಸಿದ್ದಾರೆ.

ಇತ್ತ ಬೈಕ್ ಸಂಪೂರ್ಣ ಸುಟ್ಟು ಹೋಗಿದ್ದು, ಸುದ್ದಿ ತಿಳಿಯುತ್ತಿದ್ದಂತೆಯೇ ಬಡಾವಣೆ ಪೊಲೀಸರು ಹಾಗೂ ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಬಹುಶಃ ಅಪರಿಚಿತ ಮಾನಸಿಕ ಅಸ್ವಸ್ಥನಿರಬಹುದು. ಸದ್ಯಕ್ಕೆ ಬೈಕ್ ಕಳ್ಳತನಕ್ಕೂ ಪ್ರಯತ್ನಿಸಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಆದ್ದರಿಂದ ಆತನ ಪತ್ತೆಗೆ ಬಲೆ ಬೀಸಿದ್ದೇವೆ ಎಂದು ಎಸ್‍ಪಿ ಡಾ.ಪ್ರಕಾಶ್ ಗೌಡ ತಿಳಿಸಿದ್ದಾರೆ.

2017 ಡಿಸೆಂಬರ್ 7 ರ ಮುಂಜಾನೆ ಹಾಸನ ಹೊರವಲಯದಲ್ಲಿರುವ ಪಶು ವೈದ್ಯಕೀಯ ಮಹಿಳಾ ಹಾಸ್ಟೆಲ್ ಗೆ ಕಾಮುಕನೊಬ್ಬ ನುಗ್ಗಿ ಆತಂಕ ಸೃಷ್ಟಿಸಿದ್ದನು. ಆತ ಯಾರೆಂಬುದು ಎಂಬುದು ಈವರೆಗೂ ಗೊತ್ತಾಗಿಲ್ಲ. ಈ ನಡುವೆ ಮತ್ತೊಬ್ಬ ಅಪರಿಚಿತ ಅದೇ ರೀತಿಯ ಕಾಟ ನೀಡಿರುವುದು ಸಹಜವಾಗಿ ಕಳವಳಕ್ಕೆ ಕಾರಣವಾಗಿದೆ. ಕೂಡಲೇ ಆತನನ್ನು ಬಂಧಿಸಿ ಆತಂಕ ದೂರ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *