ರಾತ್ರೋ ರಾತ್ರಿ ವಿದ್ಯಾರ್ಥಿಗಳಿದ್ದ ಹಾಸ್ಟೆಲ್ ಮೇಲ್ಛಾವಣಿ ಕುಸಿತ!

ಹಾಸನ: ರಾತ್ರೋ ರಾತ್ರಿ ಹಾಸ್ಟೆಲ್ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ವಿದ್ಯಾರ್ಥಿಗಳು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಹಾಸನದ ಮೆಟ್ರಿಕ್ ನಂತರದ ಬಿಸಿಎಂ ಹಾಸ್ಟಲ್ ನಲ್ಲಿ ಈ ಅವಘಡ ಸಂಭವಿಸಿದೆ. ರಾತ್ರಿ ಈ ಘಟನೆ ಸಂಭವಿಸಿದ್ದರಿಂದ ವಿದ್ಯಾರ್ಥಿಗಳೆಲ್ಲರೂ ಹಾಸ್ಟೆಲ್ ನಲ್ಲಿ ಇದ್ದರು. ಆದ್ರೆ ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಹಾಸ್ಟೆಲ್ ನಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು.

ಮಂಗಳವಾರ ರಾತ್ರಿ ಹಾಸ್ಟೆಲ್ ನಲ್ಲಿ ಊಟ ಮಾಡಿ ವಿದ್ಯಾರ್ಥಿಗಳು ಮಲಗಿದ್ದರು. ಈ ವೇಳೆ ಜೋರಾದ ಶಬ್ಧವೊಂದು ಕಳಿಸಿದೆ. ದೊಡ್ಡದಾದ ಶಬ್ಧವನ್ನು ಕೇಳಿದ ಮಕ್ಕಳು ನಿದ್ದೆಯಿಂದ ಎದ್ದು ಹಾಸ್ಟೆಲ್ ನಿಂದ ಹೊರಗೆ ಓಡಿದ್ದಾರೆ. ಇದೇ ವೇಳೆ ಮೇಲ್ಛಾವಣಿ ಕುಸಿದಿದೆ.

ಕಟ್ಟಡ ಹಾಳಾಗಿದ್ದರೂ ದುರಸ್ತಿಪಡಿಸದ ಅಧಿಕಾರಿಗಳ ವಿರುದ್ಧ ಇದೀಗ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾಸ್ಟಲ್ ಕಟ್ಟಡದ ಬಹುತೇಕ ಕೊಠಡಿಗಳು ಕೂಡ ಕುಸಿಯೋ ಹಂತದಲ್ಲಿದ್ದು, ಆತಂಕದಲ್ಲಿದ್ದಾರೆ. ಅಲ್ಲದೇ ಅನಾಹುತ ಸಂಭವಿಸೊ ಮುನ್ನ ಎಚ್ಚೆತ್ತುಕೊಳ್ಳಲು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *