ಶ್ರೀಕೃಷ್ಣನ ಮೂರ್ತಿ ಕೈ ತುಂಡಾಗಿದೆ- ಆಸ್ಪತ್ರೆಗೆ ತಂದ ಅರ್ಚಕ

ಲಕ್ನೋ: ಶ್ರೀಕೃಷ್ಣನ ವಿಗ್ರಹ ಶುಚಿ ಮಾಡುವ ವೇಳೆ ಹಾನಿಗೊಂಡಿದ್ದು, ಅದಕ್ಕೆ ಚಿಕಿತ್ಸೆ ನೀಡಿ ಎಂದು ಅರ್ಚಕರೊಬ್ಬರು ಆಸ್ಪತ್ರೆಗೆ ಬಂದುಪಟ್ಟು ಹಿಡಿದ ಘಟನೆ ಅಗ್ರಾದಲ್ಲಿ ನಡೆದಿದೆ.

ಲೇಖ್ ಸಿಂಗ್ ಅರ್ಜುನ್ ನಗರದ ಖೇರಿಯಾ ಮೋಡ್‍ನಲ್ಲಿರುವ ಪತ್ವಾರಿ ದೇವಸ್ಥಾನದಲ್ಲಿ ಅರ್ಚಕರಾಗಿದ್ದಾರೆ. ಇವರು ಬೆಳಗ್ಗೆ ವಿಗ್ರಹವನ್ನು ಶುಚಿ ಮಾಡುವಾಗ ಆಕಸ್ಮಿಕವಾಗಿ ವಿಗ್ರಹದ ಕೈ ಮುರಿದಿದೆ. ಈ ಕೈಯನ್ನು ಜೋಡಿಸಿಕೊಡಿ ಎಂದು ವೈದ್ಯರ ಬಳಿ ಅರ್ಚಕ ಹಠ ಹಿಡಿದಿದ್ದಾರೆ. ವ್ಯಕ್ತಿಯ ವಿಚಿತ್ರ ವರ್ತನೆಗೆ ಅಚ್ಚರಿಗೊಂಡ ವೈದ್ಯರು ಶ್ರೀ ಕೃಷ್ಣ ಹೆಸರಿಲ್ಲಿ ನೋಂದವಣಿ ಮಾಡಿಕೊಂಡಿದ್ದಾರೆ. ಬಾಲ ಕೃಷ್ಣನ ವಿಗ್ರಹಕ್ಕೆ ಬ್ಯಾಂಡೇಜ್ ಸುತ್ತಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ, ಕೋಲಾರದಲ್ಲಿ ವರುಣಾರ್ಭಟ- ದಾವಣೆಗೆರೆಯಲ್ಲಿ ದೇಗುಲ ಜಲಾವೃತ

 

ಆಸ್ಪತ್ರೆಯಲ್ಲಿ ಮೊದಲು ನನ್ನ ವಿನಂತಿಯನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಇದರಿಂದ ಬೇಸರವಾಗಿ ನಾನು ದೇವರ ವಿಗ್ರಹವನ್ನು ಹಿಡಿದು ಅಳಲು ಪ್ರಾರಂಭಿಸಿದೆ. ಆಮೇಲೆ ಅವರು ಕೃಷ್ಣನಿಗೆ ಬ್ಯಾಂಡೇಜ್ ಹಾಕಿದರು ಎಂದು ಲೇಖ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಬಿಡಿಎ ಅಧಿಕಾರಿಗಳಿಗೆ ಎಸಿಬಿ ಶಾಕ್‌- ಕಂತೆ ಕಂತೆ ನೋಟು, ಬ್ಯಾಗ್‌ಗಟ್ಟಲೆ ದಾಖಲೆಗಳು ವಶ!

Comments

Leave a Reply

Your email address will not be published. Required fields are marked *