ರೇಸ್ ವೀಕ್ಷಿಸಲು ಬಂದ ಮೂವರ ಮೇಲೆ ಬಂಡಿ ಸಮೇತ ಹಾಯ್ದ ಕುದುರೆ

ಚಿಕ್ಕೋಡಿ(ಬೆಳಗಾವಿ): ಕುದುರೆಗಳ ಓಟದ ಸಂದರ್ಭದಲ್ಲಿ ಸ್ಪರ್ಧೆ ವೀಕ್ಷಣೆಗೆ ಬಂದಿದ್ದ ಮೂವರ ಮೇಲೆ ಬಂಡಿ ಸಮೇತ ಕುದುರೆ ಹಾಯ್ದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕಲಾಟ್ ಗ್ರಾಮದಲ್ಲಿ ನಡೆದಿದೆ.

ಖಡಕಲಾಟ್ ಗ್ರಾಮದ ಗೈಬಿಸಾಬ್ ಉರುಸ್ ಹಿನ್ನೆಲೆಯಲ್ಲಿ ಉರುಸ್ ಕಮೀಟಿಯಿಂದ ಕುದುರೆ ಓಟದ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಈ ವೇಳೆ ದುರ್ಘಟನೆಯೊಮದು ನಡೆದಿದ್ದು, ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿದೆ. ಇದನ್ನೂ ಓದಿ: ರಾಷ್ಟ್ರಧ್ವಜಕ್ಕೆ ಅವಮಾನ ಎಸಗಿದ ದೇಶದ್ರೋಹಿ ಕಲ್ಲಡ್ಕ ಪ್ರಭಾಕರ ಭಟ್‌ ಬಂಧನ ಯಾವಾಗ? – ಕಾಂಗ್ರೆಸ್ ಪ್ರಶ್ನೆ

ಸ್ಪರ್ಧೆ ಸಂದರ್ಭದಲ್ಲಿ ಬಂಡಿ ಸಮೇತ ಕುದುರೆ ಏಕಾಏಕಿ ಸ್ಪರ್ಧೆ ವೀಕ್ಷಣೆಗೆ ಬಂದಿದ್ದ ಮೂವರ ಮೇಲೆ ಹಾಯ್ದು ಹೋಗಿದೆ. ಬಳಿಕ ಹಿಂದೆ ಇದ್ದ ಇನ್ನೊಂದು ಬಂಡಿಯಲ್ಲಿದ್ದ ಕುದರೆಗಳು ಕೂಡ ಕೆಳಗೆ ಬಿದ್ದವರ ಮೇಲೆ ಹಾಯ್ದಿವೆ. ಪರಿಣಾಮ ಇಬ್ಬರು ಯುವಕರು ಹಾಗೂ ಓರ್ವ ವೃದ್ಧ ಗಾಯಗೊಂಡಿದ್ದು, ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಅದೃಷ್ಟಾವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸದ್ಯ ಯುವಕರ ಮೇಲೆ ಕುದುರೆ ಹಾಯ್ದ ವೀಡಿಯೋ ವೈರಲ್ ಆಗಿದೆ. ಖಡಕಲಾಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಜನರಿಗೆ ಬೆಲೆ ಏರಿಕೆ ಚರ್ಚೆಯ ವಿಷಯ ಅಲ್ಲ, ಮಾತಿನಲ್ಲೇ ಅಭಿವೃದ್ಧಿ ಮಾಡುವವವರು ಇಷ್ಟ: ಹೆಚ್‍ಡಿಕೆ

Comments

Leave a Reply

Your email address will not be published. Required fields are marked *