ಬೆಂಗಳೂರಲ್ಲಿ ಲಾರಿ-ಆಟೋ ನಡುವೆ ಭೀಕರ ಅಪಘಾತ; ಯುವತಿ ಸಾವು, ಲಾರಿ ಚಾಲಕ ಪರಾರಿ

ಬೆಂಗಳೂರು: ಬೆಳ್ಳಂಬೆಳಗ್ಗೆ ಆಟೋ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ಬೆಂಗಳೂರು (Bengaluru) ವಿಧಾನಸೌಧ ಕೂಗಳತೆಯ ಕಾಫಿ ಬೋರ್ಡ್ ಸಿಗ್ನಲ್ ಬಳಿ ನಡೆದಿದೆ.

ಶಾಲಿನಿ ಮೃತ ದುರ್ದೈವಿ. ಬೆನ್ಸನ್ ಟೌನ್ ಚಿನ್ನಪ್ಪ ಗಾರ್ಡನ್‌ನಿಂದ `ನಮ್ಮ ಯಾತ್ರಿ’ (Namma Yatri) ಆಪ್ ಮೂಲಕ ಆಟೋ ಬುಕ್ ಮಾಡಿದ್ದ ಯುವತಿ, ಮೆಜೆಸ್ಟಿಕ್ (Megestic) ಕಡೆ ಪ್ರಯಾಣ ಬೆಳಸಿದರು. ಈ ವೇಳೆ ಕಾಫಿ ಬೋರ್ಡ್ ಜಂಕ್ಷನ್‌ಗೆ ಬಂದ ವೇಳೆ ಮತ್ತೊಂದು ರಸ್ತೆಯಲ್ಲಿ ಬರುತ್ತಿದ್ದ ಲಾರಿ ಸಿಗ್ನಲ್ ಜಂಪ್ ಮಾಡಿ ಆಟೋಗೆ ಗುದ್ದಿದ ಪರಿಣಾಮ ಹಿಂಬದಿ ಸೀಟ್‌ನಲ್ಲಿದ್ದ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ದಶೋತ್ಸವ ಸಂಭ್ರಮದಲ್ಲಿ ಪಬ್ಲಿಕ್ ಮ್ಯೂಸಿಕ್‌ – ನೀವಿಲ್ಲದೇ ನಾವಿಲ್ಲ, ಮುಂದೆಯೂ ಹರಸಿ ಹಾರೈಸಿ

ಘಟನೆ ಸಂಭವಿಸುತ್ತಿದ್ದಂತೆ ಸ್ಥಳದಲ್ಲೇ ಲೋಡ್ ತುಂಬಿದ್ದ ಲಾರಿಯನ್ನೇ ಬಿಟ್ಟು ಚಾಲಕ ಎಸ್ಕೇಪ್ ಆಗಿದ್ದಾನೆ. ಇನ್ನೂ ಘಟನೆಯಲ್ಲಿ ಆಟೋ ಚಾಲಕ ಇಮ್ರಾನ್ ಪವಾಡ ರೀತಿಯಲ್ಲಿ ಬದುಕುಳಿದಿದ್ದಾನೆ. ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಇದನ್ನೂ ಓದಿ: Madhya Pradesh | ಅತ್ಯಾಚಾರವೆಸಗಿ ಕಾಡಲ್ಲಿ ತಲೆಮರೆಸಿಕೊಂಡಿದ್ದವನ ಪತ್ತೆಗೆ ನೈಟ್ ವಿಷನ್ ಡ್ರೋನ್ ಬಳಕೆ