ಹಾರ್ನ್ ಮಾಡ್ತೀರಾ? ಇದನ್ನು ಓದಲೇಬೇಕು ನೀವು : ಜನಜಾಗೃತಿಗಾಗಿ ಸ್ಟಾರ್ ಗಳ ವಿನೂತನ ಬಳಕೆ

ರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಶಬ್ದ ಮಾಡುವವರ ವಿರುದ್ಧ ವಿನೂತನ ರೀತಿಯಲ್ಲಿ ತಿಳುವಳಿಕೆ ನೀಡಲು ಮುಂದಾಗಿದೆ. ಕನ್ನಡದ ಹೆಸರಾಂತ ನಟರ ಚಿತ್ರಗಳ ಡೈಲಾಗ್ ಇಟ್ಟುಕೊಂಡು ಪೋಸ್ಟರ್ ತಯಾರಿಸಿದ್ದು, ಡಾ.ರಾಜ್ ಕುಮಾರ್, ಉಪೇಂದ್ರ, ಯಶ್, ಪುನೀತ್ ರಾಜ್ ಕುಮಾರ್ ಹೀಗೆ ಹಲವು ಕಲಾವಿದರ ಪಾಪ್ಯುಲರ್ ಡೈಲಾಗ್ ಬಳಸಿಕೊಂಡು ಶಬ್ದ ಮಾಡಬೇಡಿ ಎಂದು ಹೇಳುವುದಕ್ಕೆ ಹೊರಟಿದೆ. ಇದನ್ನೂ ಓದಿ : ಮಗುವಿಗಾಗಿ ಪ್ಲ್ಯಾನ್ ಮಾಡಿದ್ದಾರಂತೆ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್

ಡಾ.ರಾಜ್ ಕುಮಾರ್ ನಟನೆಯ ಚಿತ್ರಗಳ ಡೈಲಾಗ್ ಗಳಾದ “ಇದೇ ನನ್ನ ಗುರಿ ಇದೇ ನನ್ನ ಮಂತ್ರ, ಇದೇ ನನ್ನ ಪ್ರತಿಜ್ಞೆ ನಾನ್ ಹಾರ್ನ್ ಮಾಡೋದಿಲ್ಲ’, ‘ಮೀನಾಕ್ಷಿ ಮೀನಾಕ್ಷಿ ಎಂಥ ಒಳ್ಳೆಯ ಮಗ್ಳಿಗೆ ಜನ್ಮ ಕೊಟ್ಟೆ ಸೌಂಡೇ ಮಾಡೋದಿಲ್ಲ.. ಆಹಾ’, ‘ ಆ ನಿನ್ನ ಸಂಪತ್ತಿಗೆ ನನ್ನ ಸವಾಲ್. ಹಾರ್ನ್ ಮಾಡಬೇಡ ಬಡವ ರಾಸ್ಕಲ್’, ‘ ಭೋರ್ಗರೆದು ನುಗ್ಗುವ ಟ್ರಾಫಿಕ್ ಪ್ರವಾಹವನ್ನು ಪ್ರತಿರೋಧಿಸಬಲ್ಲೆ. ಈ ಶಬ್ದವನ್ನು ಮಾತ್ರ ನಾ ಸಹಿಸಲಾರೆ. ಹಾರ್ನ್ ಮಾಡಬೇಡ ಗಾಂಢೀವಿ’ ಹೀಗೆ ಸಂಭಾಷಣೆಯನ್ನು ಬಳಸಿಕೊಂಡು ಪೋಸ್ಟರ್ ಮಾಡಲಾಗಿದೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ವಿವಾದ : ಶಶಿ ತರೂರು ಮತ್ತು ಅನುಪಮ್ ಖೇರ್ ಜಟಾಪಟಿ

ಯಶ್ ಅವರ ಕೆಜಿಎಫ್ 2 ಸಿನಿಮಾದ ಸಂಭಾಷಣೆ ಇಟ್ಟುಕೊಂಡು. “ಆಳೋಕೆ ಬಂದರೆ ಸುಲ್ತಾನ್ ಇವನೆ, ಅಡ್ಡಡ್ಡ ಬಂದ್ರೆ ಸೈತಾನ್ ಇವನೆ ‘ಐ ಡೋಂಟ್ ಲೈಕ್ ಇಟ್ ಹಾಂಕಿಂಗ್’ ಎಂಬ ಪೋಸ್ಟರ್ ಮಾಡಿದ್ದು, ಈ ಪೋಸ್ಟರ್ ಕಂಡು ಅಭಿಮಾನಿಗಳು ಕೂಡ ತಮ್ಮದೇ ಆದ ರೀತಿಯಲ್ಲಿ ಬೇರೆ ಬೇರೆ ಡೈಲಾಗ್ ಹೊಡೆದಿದ್ದಾರೆ. ಇದನ್ನೂ ಓದಿ : ಜ್ಯೂ.ರವಿಚಂದ್ರನ್ ಖ್ಯಾತಿಯ ಲಕ್ಷ್ಮಿ ನಾರಾಯಣ್ ನಿಧನ

ಐ ಡೋಂಟ್ ಲೈಕ್ ಇಟ್ ಅಂದಾಕ್ಷಣ ಥಟ್ಟನೆ ನೆನಪಾಗುವ ಕಲಾವಿದ ಉಪೇಂದ್ರ. ಉಪೇಂದ್ರ ಸಿನಿಮಾದ ಈ ಪಾಪ್ಯುಲರ್ ಡೈಲಾಗ್ ಅನ್ನು ಆಯ್ಕೆ ಮಾಡಿಕೊಂಡಿರುವ  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು “ಹಾರ್ನ್ ಮಾಡಬೇಡ ಕಾಂತ.. ಈ ಡೋಂಟ್ ಲೈಕ್ ಇಟ್ “ ಎಂಬ ಪೋಸ್ಟರ್ ರಿಲೀಸ್ ಮಾಡಿದೆ.

ಅಲ್ಲದೇ, ಪುನೀತ್ ರಾಜ್ ಕುಮಾರ್ ಅವರ ಪೋಸ್ಟರ್ ಕೂಡ ಶಬ್ದ ಮಾಡಬೇಡಿ ಎಂದು ಹೇಳುತ್ತಿದ್ದು, “ಡೋಂಟ್ ಬಿ ಎ ಹಾಂಕಿಂಗ್ ಸ್ಟಾರ್, ಬಿ ಎ ಪವರ್ ಸ್ಟಾರ್’ ಎಂಬ ಕ್ಯಾಚಿ ಕೋಟ್ ಅನ್ನು ಈ ಪೋಸ್ಟರ್ ಗಾಗಿ ಬಳಸಲಾಗಿದೆ. ಈ ಪೋಸ್ಟರ್ ಗೆ ಅಪ್ಪು ಫ್ಯಾನ್ಸ್ ಫಿದಾ ಆಗಿದ್ದಾರೆ.

Comments

Leave a Reply

Your email address will not be published. Required fields are marked *