ಮರ್ಯಾದಾ ಹತ್ಯೆ: ಅನ್ಯಜಾತಿ ಹುಡ್ಗನನ್ನು ಲವ್ ಮಾಡಿದ ಮಗಳನ್ನು ದೊಣ್ಣೆಯಿಂದ ಹೊಡೆದು ಸುಟ್ಟ ತಂದೆ

ಬೆಂಗಳೂರು: ಅನ್ಯಜಾತಿ ಹುಡುಗನ ಜೊತೆ ಪ್ರೇಮಾಂಕುರವಾಗಿ ಮನೆ ಬಿಟ್ಟು ಹೋಗಿದ್ದ ಮಗಳನ್ನು ತಂದೆಯೇ ಕೊಲೆಗೈದಿರುವ ಘಟನೆ ನಗರದ ಹೊರವಲಯದ ನೆಲಮಂಗಲದಲ್ಲಿ ನಡೆದಿದೆ.

ಚಿಕ್ಕ ನರಸಿಂಹಯ್ಯ ಎಂಬಾತನೇ ಮಗಳನ್ನು ಕೊಲೆಗೈದ ತಂದೆ. 16 ವರ್ಷದ ಲಕ್ಷ್ಮೀದೇವಿ ಕೊಲೆಯಾದ ಬಾಲಕಿ. ಚಿಕ್ಕ ನರಸಿಂಹಯ್ಯ ನೆಲಮಂಗಲದ ತ್ಯಾಮಗೊಂಡ್ಲು ಬಳಿಯ ಲಕ್ಕಪ್ಪನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, 29 ದಿನಗಳ ಹಿಂದೆಯೇ ಈ ಕೊಲೆ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.

ಲಕ್ಷ್ಮೀ ದೇವಿ 10ನೇ ತರಗತಿ ಓದುತ್ತಿದ್ದು, ತನ್ನದೇ ಗ್ರಾಮದ ಲಕ್ಷ್ಮೀನಾರಾಯಣ ಎಂಬ ಯುವಕನ ಜೊತೆ ಪ್ರೀತಿಸುತ್ತಿದ್ದಳು. ಇವರಿಬ್ಬರು ಈ ಹಿಂದೆ ಮನೆ ಬಿಟ್ಟು ಹೋಗಿದ್ದರು. ಈ ಸಂಬಂಧ ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ತಂದೆ ಲಕ್ಷ್ಮೀದೇವಿಯನ್ನು ಮನೆಗೆ ಕರೆದುಕೊಂಡು ಬಂದು ಮನೆಯಲ್ಲಿ ಚೆನ್ನಾಗಿ ಹೊಡೆದು ಸಾಯಿಸಿ, ನಂತರ ಆಕೆಯ ಶವವನ್ನು ಸುಟ್ಟು ಹಾಕಿದ್ದಾನೆ ಅಂತಾ ಹೇಳಲಾಗಿದೆ.

ಇದನ್ನೂ ಓದಿ: ಮರ್ಯಾದಾ ಹತ್ಯೆ: ನವದಂಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ವಧುವಿನ ಚಿಕ್ಕಪ್ಪಂದಿರು

ಘಟನಾ ಸ್ಥಳಕ್ಕೆ ಕೇಂದ್ರ ವಲಯ ಐಜಿ ಅಮೃತ ಪೌಲ್ ಹಾಗೂ ಬೆಂಗಳೂರು ಗ್ರಾಮಾಂತರ ಎಸ್.ಪಿ ಅಮಿತ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಹೆಚ್ವಿನ ತನಿಖೆ ನಡೆಸುತ್ತಿದ್ದಾರೆ. ಸದ್ಯ ಮಾಧ್ಯಮಗಳ ಜೊತೆ ಮಾತನಾಡಿರುವ ಐಜಿ ಅಮೃತ್ ಪೌಲ್, ಆರೋಪಿ ತಂದೆ ಚಿಕ್ಕನರಸಿಂಹಯ್ಯ ನನ್ನ ವಶಕ್ಕೆ ಪಡೆದಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಇದನ್ನೂ  ಓದಿ: ಮರ್ಯಾದಾ ಹತ್ಯೆ: ಪ್ರೀತಿಯಲ್ಲಿ ಬಿದ್ದ ಮಗಳು ತಾಯಿಯಿಂದ ಕೊಲೆಯಾದ್ಳು!

ಇದನ್ನೂ ಓದಿ: ಹುಡುಗನೊಂದಿಗೆ ಮಾತಾಡಿದ್ದಕ್ಕೆ 13 ವರ್ಷದ ಮಗಳನ್ನ ಕೊಂದ ತಂದೆ

Comments

Leave a Reply

Your email address will not be published. Required fields are marked *