ಸಮುದ್ರದಲ್ಲಿ ಮುಳುಗಿತು ಹಾಂಕಾಂಗ್ ಫೇಮಸ್ ತೇಲುವ ರೆಸ್ಟೋರೆಂಟ್

ಬೀಜಿಂಗ್: ಹಾಂಕಾಂಗ್‌ನ ಪ್ರಸಿದ್ಧ ಜಂಬೋ ರೆಸ್ಟೋರೆಂಟ್ ಚೀನಾದ ದಕ್ಷಿಣ ಭಾಗದ ಸಮುದ್ರದಲ್ಲಿ 1,000 ಅಡಿಗೂ ಅಧಿಕ ಆಳಕ್ಕೆ ಮುಳುಗಿ ಹೋಗಿದೆ.

46 ವರ್ಷಗಳಿಂದ ಒಂದೇ ನೆಲೆಯಲ್ಲಿದ್ದ ಫ್ಲೋಟಿಂಗ್ ರೆಸ್ಟೋರೆಂಟ್ ಅನ್ನು ಬೇರೆಡೆಗೆ ಸ್ಥಳಾಂತರಿಸಲು ಟಗ್‌ಬೋಟ್ ಸಹಾಯದಿಂದ ಎಳೆದುಕೊಂಡು ಹೋಗಲಾಗಿತ್ತು. ಈ ಸಂದರ್ಭ ದಕ್ಷಿಣ ಚೀನಾ ಸಮುದ್ರದ ಭಾರೀ ಅಲೆಯ ಕಾರಣ ಜಂಬೋ ರೆಸ್ಟೋರೆಂಟ್ ಮಗುಚಿ ಬಿದ್ದಿದೆ. ಅದನ್ನು ನೀರಿನಿಂದ ಮೇಲೆತ್ತುವುದು ಅತ್ಯಂತ ಕಷ್ಟಕರವಾಗಿದೆ. ಸದ್ಯ ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: 30 ವರ್ಷಗಳಲ್ಲೇ ಬ್ರಿಟನ್‌ನಲ್ಲಿ ಅತಿ ದೊಡ್ಡ ರೈಲು ಮುಷ್ಕರ

ಒಂದು ಕಾಲದಲ್ಲಿ ವಿಶ್ವದ ಅತಿ ದೊಡ್ಡ ತೇಲುವ ರೆಸ್ಟೋರೆಂಟ್ ಎಂದು ಹೆಗ್ಗಳಿಕೆಗೆ ಪಾತ್ರವಾಗಿದ್ದ ಜಂಬೋ, ಅನೇಕ ಹಾಂಕಾಂಗ್ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರಗಳಲ್ಲೂ ಕಾಣಿಸಿಕೊಂಡಿತ್ತು. ಈ ರೆಸ್ಟೋರೆಂಟ್‌ನಲ್ಲಿ ಎರಡನೇ ರಾಣಿ ಎಲಿಜಬೆತ್, ಜಿಮ್ಮಿ ಕಾರ್ಟರ್, ಟಾಮ್ ಕ್ರೂಸ್ ಸೇರಿದಂತೆ ಹಲವು ಗಣ್ಯರಿಗೆ ಆತಿಥ್ಯ ನೀಡಲಾಗಿತ್ತು. ಭವ್ಯವಾದ ಗೋಪುರ, ವರ್ಣರಂಜಿತ ಚಿತ್ರ, ಚೈನೀಸ್ ಭಾಷೆಯ ಸಾಲುಗಳಿಂದ ಜಂಬೋ ಪ್ರಸಿದ್ಧವಾಗಿತ್ತು. ಇದನ್ನೂ ಓದಿ: ಪ್ರಾರ್ಥನೆ ಸಲ್ಲಿಸುವ ಮೊದಲು ದೇವಸ್ಥಾನದ ನೆಲ ಗುಡಿಸಿದ ದ್ರೌಪದಿ ಮುರ್ಮು

2013ರ ಸಮಯ ಚೀನಾದ ದಕ್ಷಿಣ ಭಾಗದಲ್ಲಿ ಮೀನುಗಾರಿಕೆ ಹಾಗೂ ಜನಸಂಖ್ಯೆ ಕ್ಷೀಣಿಸಿದ ಕಾರಣ ಜಂಬೋ ತನ್ನ ಪ್ರಸಿದ್ಧಿಯನ್ನು ನಿಧಾನವಾಗಿ ಕಳೆದುಕೊಂಡಿತು. ಕೋವಿಡ್ ಪ್ರಾರಂಭವಾದ ಬಳಿಕವಂತೂ ರೆಸ್ಟೋರೆಂಟ್ ಮಾಲೀಕರು ಭಾರೀ ನಷ್ಟವನ್ನು ಅನುಭವಿಸಿ, ಮುಚ್ಚುವ ಸ್ಥಿತಿಗೆ ಬಂದಿದ್ದರು. ಹಣದ ಕೊರತೆಯಿದ್ದ ಕಾರಣ ರೆಸ್ಟೋರೆಂಟ್‌ನ ಮೂಲ ಕಂಪನಿ ಹೊಸ ಮಾಲೀಕರನ್ನು ಹುಡುಕುತ್ತಿತ್ತು. ಆದರೆ 46 ವರ್ಷಗಳ ಬಳಿಕ ಅದನ್ನು ಬೇರೆಡೆಗೆ ಸ್ಥಳಾಂತರಿಸುವ ಸಂದರ್ಭ ಮುಳುಗಡೆಯಾಗಿದ್ದು, ಇದೀಗ ಸುಪ್ರಸಿದ್ಧ ಜಂಬೋ ರೆಸ್ಟೋರೆಂಟ್ ಕೇವಲ ನೆನಪಾಗಿ ಉಳಿದಿದೆ.

Live Tv

Comments

Leave a Reply

Your email address will not be published. Required fields are marked *