ಎಲ್ಲಾ ಬಟ್ಟೆ ಕಳಚಿ, ಗಗನಸಖಿಯನ್ನ ತಬ್ಬಿಕೊಳ್ಳಲು ಯತ್ನಿಸಿದ ಪ್ರಯಾಣಿಕ ಅರೆಸ್ಟ್

ಢಾಕಾ: ಬಾಂಗ್ಲಾದೇಶ ಮೂಲದ ಪ್ರಯಾಣಿಕನೊಬ್ಬ ವಿಮಾನದಲ್ಲಿ ವಿವಸ್ತ್ರಗೊಂಡಿದ್ದಲ್ಲದೇ ಗಗನಸಖಿಯನ್ನೇ ತಬ್ಬಿಕೊಳ್ಳಲು ಯತ್ನಿಸಿ ಅಸಭ್ಯ ವರ್ತನೆ ತೋರಿದ್ದಾನೆ.

ಶನಿವಾರದಂದು ಮಲೇಷ್ಯಾದ ಕೌಲಾಲಾಂಪುರ್ ನಿಂದ ಢಾಕಾಗೆ ಹೊರಟಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನ ಹೊರಟ ಬಳಿಕ 20 ವರ್ಷದ ವ್ಯಕ್ತಿ ತನ್ನ ಬಟ್ಟೆಗಳನ್ನೆಲ್ಲಾ ಕಳಚಿ ಸಂಪೂರ್ಣ ನಗ್ನವಾಗಿ ಕುಳಿತು ತನ್ನ ಲ್ಯಾಪ್‍ಟಾಪ್‍ನಲ್ಲಿ ಪೋರ್ನ್ ವಿಡಿಯೋ ನೋಡಲು ಶುರು ಮಾಡಿದ್ದ. ಆರೋಪಿ ಮಲೇಷ್ಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದು, ವಿಮಾನ ಸಿಬ್ಬಂದಿ ಮನವಿ ಮಾಡಿದ ನಂತರ ತನ್ನ ಬಟ್ಟೆಗಳನ್ನ ಮರಳಿ ಹಾಕಿಕೊಂಡಿದ್ದ. ಆದ್ರೆ ನಂತರ ಮಹಿಳಾ ಸಿಬ್ಬಂದಿಯನ್ನ ತಬ್ಬಿಕೊಳ್ಳಲು ಯತ್ನಿಸಿದ್ದಾನೆ. ಇದಕ್ಕೆ ಆಕೆ ವಿರೋಧಿಸಿದಾಗ ಆಕ್ರೋಶಗೊಂಡು ಆಕೆಯ ಮೇಲೆ ದಾಳಿ ಮಾಡಿದ್ದಾನೆ.

ಈ ವೇಳೆ ವಿಮಾನದ ಸಿಬ್ಬಂದಿ ಹಾಗೂ ಇತರೆ ಪ್ರಯಾಣಿಕರು ಆತನನ್ನ ಹಿಡಿದುಕೊಂಡು ಬಟ್ಟೆಯಿಂದ ಆತನ ಕೈಗಳನ್ನ ಕಟ್ಟಿ ಹಾಕಿದ್ದಾರೆ. ಆರೋಪಿ ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ವರ್ತಿಸಲು ಡ್ರಗ್ಸ್ ಅಥವಾ ಮದ್ಯಪಾನ ಸೇವನೆ ಮಾಡಿದ್ದ ಲಕ್ಷಣಗಳು ಇರಲಿಲ್ಲ.

ವಿಮಾನಯಾನ ಸಂಸ್ಥೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದು, ಢಾಕಾಗೆ ಹೊರಟಿದ್ದ ವಿಮಾನದಲ್ಲಿ ಅಸಭ್ಯವಾಗಿ ವರ್ತಿಸಿದ ಪ್ರಯಾಣಿಕನ ಕೈ ಕಟ್ಟಿಹಾಕಲಾಗಿತ್ತು. ಬಳಿಕ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಆತನನ್ನು ಬಂಧಿಸಲಾಯಿತು ಎಂದಷ್ಟೇ ಹೇಳಿದೆ.

Comments

Leave a Reply

Your email address will not be published. Required fields are marked *