ಪಿಎಸ್ಐ ಅಕ್ರಮ ಲಾಜಿಕಲ್ ಎಂಡ್‍ಗೆ ತೆಗೆದುಕೊಂಡು ಹೋಗ್ತೀವಿ: ಆರಗ ಜ್ಞಾನೇಂದ್ರ

ಬೆಂಗಳೂರು: ಪಿಎಸ್‍ಐ ಅಕ್ರಮ ಪ್ರಕರಣವನ್ನು ಲಾಜಿಕಲ್ ಎಂಡ್‍ಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ ನೀಡಿದರು.

ಪಿಎಸ್‍ಐ ಅಕ್ರಮದ ಕುರಿತು ನ್ಯಾಯ ಕೊಡುವಂತೆ ಅಭ್ಯರ್ಥಿಗಳಿಂದ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರುವ ಬಡ ಹಾಗೂ ದಲಿತ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಬಾರದು ಎಂದು ನಾವು ಈ ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

psi scam

ಪಿಎಸ್‍ಐ ಅಕ್ರಮದಲ್ಲಿ ಭಾಗಿ ಆಗಿರುವ ಯಾರನ್ನು ನಾವು ಬಿಡುವುದಿಲ್ಲ. ನಮ್ಮ ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ. ಯಾರಿಗೂ ಅನ್ಯಾಯ ಆಗಲು ಬಿಡುವುದಿಲ್ಲ. ಶೀಘ್ರವೇ ಮರುಪರೀಕ್ಷೆ ಬಗ್ಗೆ ಆದೇಶ ಹೊರಡಿಸುತ್ತೇವೆ. ದೈಹಿಕ ಪರೀಕ್ಷೆಯಲ್ಲಿ ಪಾಸ್ ಆದವರಿಗೆಲ್ಲ ಪರೀಕ್ಷೆಗೆ ಅವಕಾಶ ಕೊಡುತ್ತೇವೆ ಎಂದರು.

ಪ್ರಕರಣದಲ್ಲಿ ಯಾರೇ ಇದ್ದರೂ, ಅವರ ಮುಖವಾಡ ಕಳಚುತ್ತಿದ್ದೇವೆ. ಪೊಲೀಸರು, ಅಧಿಕಾರಿಗಳು, ರಾಜಕಾರಣಿಗಳು ಯಾರೇ ಇದ್ದರೆ ಬಿಡೋದಿಲ್ಲ. ದೊಡ್ಡ ದೊಡ್ಡ ಪ್ರಭಾವಗಳು ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ. FSL ರಿಪೋರ್ಟ್ ಬಂದ ಮೇಲೆ ಮತ್ತಷ್ಟು ಮಾಹಿತಿ ನಮಗೆ ತಿಳಿಯುತ್ತವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಮತಾಂತರ ಕಾಯ್ದೆಗೆ ಕ್ರಿಶ್ಚಿಯನ್ ಸಮುದಾಯದವರು ಭಯ ಬೀಳೋದು ಯಾಕೆ: ಆರಗ ಜ್ಞಾನೇಂದ್ರ

ಸಿಐಡಿ ಅವರು ಸಾಕ್ಷಿ ಆಧಾರದ ಸಮೇತ ಆರೋಪಿಗಳನ್ನು ಅರೆಸ್ಟ್ ಮಾಡುತ್ತಿದ್ದಾರೆ. ಕೋರ್ಟ್‍ನಲ್ಲಿ ಕೂಡಾ ತಪ್ಪಿತಸ್ಥರು ಎಸ್ಕೇಪ್ ಆಗಲು ಸಾಧ್ಯವಿಲ್ಲ. ಪ್ರಾಮಾಣಿಕವಾಗಿ ಸಿಐಡಿ ಕೆಲಸ ಮಾಡುತ್ತಿದೆ. ಸರ್ಕಾರ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬಾಗಲಕೋಟೆ ಕೇಸ್‍ಗೆ ಟ್ವಿಸ್ಟ್ – ಮೊದಲು ಸಂಗೀತಾ ಹಲ್ಲೆ ಮಾಡಿದ್ದ ವೀಡಿಯೋ ವೈರಲ್

ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಯಾರೇ ಸಲಹೆ ನೀಡಿದರೂ ನಾವು ಪಡೆದುಕೊಳ್ಳುತ್ತೇವೆ. ಅಕ್ರಮ ಮಾಡುವವರು ಮತ್ತೆ ಹೀಗೆ ಮಾಡದಂತೆ ಮುಟ್ಟಿ ನೋಡಿಕೊಳ್ಳುವಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

Comments

Leave a Reply

Your email address will not be published. Required fields are marked *