ಸ್ವಾಮಿ ಅವಧೇಶಾನಂದ ಗಿರಿ, ಸದ್ಗುರು ಭೇಟಿಯಾದ ಅಮಿತ್‌ ಶಾ

ನವದೆಹಲಿ: ಆಧ್ಯಾತ್ಮಿಕ ನಾಯಕ ಸದ್ಗುರುಗಳನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಭೇಟಿಯಾದರು. ಭಾರತೀಯ ಆಧ್ಯಾತ್ಮಿಕತೆ ಕುರಿತು ಸದ್ಗುರುಗಳ ಜೊತೆ ಚರ್ಚೆ ನಡೆಸಿದ್ದಾರೆ.

ಸದ್ಗುರುಗಳನ್ನು ಭೇಟಿಯಾಗಿದ್ದು ಸಂತೋಷವಾಯಿತು. ಭಾರತೀಯ ಆಧ್ಯಾತ್ಮಿಕತೆ ಮತ್ತು ಸಮಾಜಗಳನ್ನು ಪರಿವರ್ತಿಸುವಲ್ಲಿ ಅದರ ಪಾತ್ರದ ಬಗ್ಗೆ ಸದ್ಗುರುಗಳ ಜೊತೆ ಚರ್ಚೆ ನಡೆಸಿದೆ ಎಂದು ಸಚಿವರು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಇಶಾ ಫೌಂಡೇಶನ್‌ನ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್‌ ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು. ಇದಕ್ಕೂ ಮುನ್ನ, ಸ್ವಾಮಿ ಅವಧೇಶಾನಂದ ಗಿರಿ ಜಿ ಮಹಾರಾಜ್ ಅವರನ್ನು ಭೇಟಿಯಾದರು.

ಸ್ವಾಮಿ ಅವಧೇಶಾನಂದ ಗಿರಿ ಜಿ ಮಹಾರಾಜ್ ಅವರು ಜುನಾ ಅಖಾರದ ಪ್ರಸ್ತುತ ಆಚಾರ್ಯ ಮಹಾಮಂಡಲೇಶ್ವರರಾಗಿದ್ದಾರೆ. ಇದು ಭಾರತದ ಅತ್ಯಂತ ಹಳೆಯ ಮತ್ತು ಪ್ರಮುಖ ಅಖಾರಾಗಳಲ್ಲಿ ಒಂದಾಗಿದೆ.