KGF ಚಿತ್ರ ತಂಡದಿಂದ ಯಶ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಯಶ್ ಅವರ ಹುಟ್ಟುಹಬ್ಬಕ್ಕೆ ಕೆಜಿಎಫ್ ಚಿತ್ರತಂಡ ವಿಭಿನ್ನ ಮತ್ತು ವಿಶೇಷವಾಗಿ ವಿಶ್ ಮಾಡುತ್ತದೆ ಎಂದು ಕಾದು ಕುಳಿತಿದ್ದ, ಅಭಿಮಾನಿಗಳಿಗೆ ನಿರಾಸೆಯಾಗಿಲ್ಲ. ಚಿತ್ರತಂಡ ಯಶ್ ಅವರ ಖಡಕ್‌ ಲುಕ್ ಇರುವ ಫೋಟೋವನ್ನು ಶೇರ್ ಮಾಡಿಕೊಂಡಿದೆ.

 

View this post on Instagram

 

A post shared by Hombale Films (@hombalefilms)

ಎಚ್ಚರಿಕೆ, ಮುಂದೆ ಅಪಾಯವಿದೆ. ನಮ್ಮ ರಾಕಿ ಭಾಯಿ ಯಶ್ ಅವರಿಗೆ ಜನ್ಮದಿನದ ಶುಭಾಶಯಗಳು ಎಂದು ಬರೆದು ಯಶ್ ಅವರು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವ ಲುಕ್‍ನ ಫೋಟೋವನ್ನು ಕೆಜಿಎಫ್ ತಂಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ. ಇದನ್ನೂ ಓದಿ: 36 ನೇ ವಸಂತಕ್ಕೆ ಕಾಲಿಟ್ಟ ರಾಕಿಂಗ್ ಸ್ಟಾರ್ ಯಶ್

ಕೆಜಿಎಫ್ ಚಾಪ್ಟರ್ 2 ಸಿನಿಮಾ, 2022ರ ಏಪ್ರಿಲ್ 14ರಂದು ಬಿಡುಗಡೆ ಆಗಲಿದೆ ಎಂದು ಈ ಮೊದಲೇ ಚಿತ್ರತಂಡ ಘೋಷಿಸಿತ್ತು. ಆದರೆ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ವೀಕೆಂಡ್ ಕರ್ಫ್ಯೂವನ್ನು ಸರ್ಕಾರ ವಿಧಿಸಿದೆ. ಹೀಗಾಗಿ ಅನೇಕ ಬಿಗ್ ಬಜೆಟ್ ಸಿನಿಮಾಗಳು ತಮ್ಮ ರಿಲೀಸ್ ಡೇಟ್ ಮುಂದೂಡಿಕೊಂಡಿವೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ರಿಲೀಸ್ ದಿನಾಂಕದಲ್ಲಿ ಬದಲಾವಣೆ ಆಗಬಹುದಾ ಎಂಬ ಅನುಮಾನ ಮೂಡಿತ್ತು. ಆದರೆ ಯಶ್ ಅವರಿಗೆ ಜನ್ಮ ದಿನಾಚರಣೆ ವಿಶ್ ಮಾಡಿರುವ ಹೊಂಬಾಳೆ ಫಿಲ್ಮ್ಸ್  #KGF2onApr14 ಎಂಬ ಹ್ಯಾಶ್ ಟ್ಯಾಗ್ ಬಳಸುವ ಮೂಲಕ ರಿಲೀಸ್ ದಿನಾಂಕದಲ್ಲಿ ಸದ್ಯಕ್ಕಂತೂ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಖಚಿತಪಡಿಸಿದೆ. ಯಶ್ ಅಭಿಮಾನಿಗಳಿಗೆ ಈ ವಿಚಾರ ಸಖತ್ ಖುಷಿಯನ್ನು ತಂದಿದೆ.

ನಿರ್ಮಾಪಕ ವಿಜಯ್ ಕಿರಗಂದೂರು ಕೂ ಮೂಲಕವಾಗಿ, ಹೃದಯ ಸ್ಪರ್ಶಿಯಾದ ಯಶ್ ಅವರಿಗೆ ಜನ್ಮದಿನದ ಶುಭಾಶಯಗಳು, ನಾವು ಒಟ್ಟಿಗೆ ಹೆಣೆಯುತ್ತಿರುವ ಬೆಳವಣಿಗೆ ಮತ್ತು ಕಥೆ, ನಿಮ್ಮೊಂದಿಗೆ ಹೊಸ ದಾಖಲೆಗಳನ್ನು ಸ್ಥಾಪಿಸಲು ಆಶಿಸುತ್ತೇವೆ ಎಂದು ಬರೆದು ಶುಭಕೋರಿದ್ದಾರೆ.

ಓಮಿಕ್ರಾನ್‌, ಕೊರೊನಾ ಸೋಂಕಿನ ಭೀತಿ ಎಲ್ಲೆಡೆ ಇರುವುದರಿಂದ ಯಶ್‌ ಮನೆಯಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.  ಯಶ್ ಜನ್ಮದಿನವಾದ ಇಂದು ಕರ್ನಾಟಕದಲ್ಲಿ ವಾರಾಂತ್ಯದ ಕರ್ಫ್ಯೂ ಇದೆ. ಈ ಕಾರಣಕ್ಕೆ ಯಶ್ ಮನೆ ಸಮೀಪ ತೆರಳೋಕೆ ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ  ಸೋಶಿಯಲ್ ಮೀಡಿಯಾ ಮೂಲಕವಾಗಿ ಶುಭಕೋರುತ್ತಿದ್ದಾರೆ.  ಕೇವಲ ಕರ್ನಾಟಕದ ಫ್ಯಾನ್ಸ್ ಮಾತ್ರವಲ್ಲದೆ, ಆಂಧ್ರ ಪ್ರದೇಶ, ತಮಿಳು ನಾಡು, ಮಹಾರಾಷ್ಟ್ರ ಮೊದಲಾದ ರಾಜ್ಯಗಳ ಅಭಿಮಾನಿಗಳು ವಿಶ್‌ ಮಾಡುತ್ತಿದ್ದಾರೆ. ಯಶ್ ಹೆಸರು ಟ್ವಿಟರ್‌ನಲ್ಲಿ  ಟ್ರೆಂಡ್ ಆಗಿದೆ. ಯಶ್ ಅವರ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ.

2007ರಲ್ಲಿ ತೆರೆಗೆ ಬಂದ ಜಂಬದ ಹುಡುಗಿ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ್ದರು. 2014ರಲ್ಲಿ ತೆರೆಗೆ ಬಂದ Mr & Mrs ರಾಮಾಚಾರಿ ಬಾಕ್ಸ್ ಆಫೀಸ್‍ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು. ನಂತರ ಯಶ್ ಅವರ ಲಕ್ ಬದಲಾಯಿತ್ತು. ಒಳ್ಳೆಯ ಪಾತ್ರಗಳು ಅವರ ಪಾಲಿಗೆ ಒಲಿದು ಬಂದವು. ಯಶ್ ನಟನೆಯ ಕೆಜಿಎಫ್ ಸಿನಿಮಾದಿಂದ ಕನ್ನಡ ಚಿತ್ರರಂಗದ ದಿಕ್ಕೆ ಬದಲಾಯಿತು. ರಾಕಿಂಗ್ ಸ್ಟಾರ್ ಯಶ್ ಅವರ ರೇಂಜ್ ಕೂಡ ಬದಲಾಗಿದೆ. ಕೆಜಿಎಫ್ ಚಾಪ್ಟರ್ 2 ಸಿನಿಮಾ ಏಪ್ರಿಲ್ 14 ರಂದು ತೆರೆಗೆ ಬರಲಿದೆ. ಈ ಸಿನಿಮಾವನ್ನು ಪರದೆ ಮೇಲೆ ನೋಡಲು ಅವರ ಅಭಿಮಾನಿಗಳ ಬಳಗ ಮತ್ತು ಸಿನಿಪ್ರಿಯರು ಕಾದು ಕುಳಿತಿದ್ದಾರೆ.

Comments

Leave a Reply

Your email address will not be published. Required fields are marked *