ʻರಾಕಿ ಭಾಯ್‌ʼ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌; KGF-3 ಬಗ್ಗೆ ಬಿಗ್‌ ಹಿಂಟ್‌ ಕೊಟ್ಟ ಹೊಂಬಾಳೆ ಫಿಲ್ಮ್ಸ್

ಕೆಜಿಎಫ್ ಚಾಪ್ಟರ್-2 ತೆರೆಕಂಡು 3 ವರ್ಷ ಕಳೆದಿದೆ, ಇದೀಗ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ (Hombale Films) 3ನೇ ಭಾಗದ ಬಗ್ಗೆ ಬಿಗ್‌ ಹಿಂಟ್‌ ಕೊಟ್ಟಿದೆ. ಆದ್ರೆ ನಿರ್ದೇಶಕ ಪ್ರಶಾಂತ್ ನೀಲ್ ಸದ್ಯಕ್ಕೆ ಬೇರೆ ಚಿತ್ರಗಳಲ್ಲಿ ಬ್ಯುಸಿ ಇದ್ದು, ʻಕೆಜಿಎಫ್ 3ʼ ಸಿನಿಮಾ (KGF 3 Cinema) ಯಾವಾಗ ಶುರುವಾಗಬಹುದು ಎಂಬ ಲೆಕ್ಕಾಚಾರದಲ್ಲಿ ಫ್ಯಾನ್ಸ್ ಕಾಯ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಲೇಟೆಸ್ಟ್‌ ಅಪ್ಡೇಟ್‌ವೊಂದು ಇಲ್ಲಿದೆ…

 

View this post on Instagram

 

A post shared by Hombale Films (@hombalefilms)

ನಟ ಯಶ್ (Yash) ಹಾಗೂ ಪ್ರಶಾಂತ್ ನೀಲ್ (Prashanth Neel) ಕಾಂಬಿನೇಷನ್‌ನಲ್ಲಿ ಮೂಡಿಬಂದ ʻಕೆಜಿಎಫ್-1, ಕೆಜಿಎಫ್-2‌ʼ ಸರಣಿಗಳು ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ನೀಡಿದವು. ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಪ್ರೇಕ್ಷಕರನ್ನ ಆಕರ್ಷಿಸಿದವು. ಕೆಜಿಎಫ್‌-2 ಅಂತು ವಿದೇಶಗಳಲ್ಲೂ ಸದ್ದು ಮಾಡಿತ್ತು, ಇದೀಗ ಈ ಸರಣಿಯ 3ನೇ ಭಾಗದ ಬಗ್ಗೆ ಇರುವ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇದನ್ನೂ ಓದಿ: ವಾಯುಪಡೆಯ ಶೌರ್ಯ-ಸಾಹಸಕ್ಕೆ ಕನ್ನಡಿ ಹಿಡಿದ ಸಿನಿಮಾಗಳನ್ನ ನೀವೂ ನೋಡಿ….

ʻಕೆಜಿಎಫ್ 1′ ಮತ್ತು ʻಕೆಜಿಎಫ್ 2ʼ ಭರ್ಜರಿ ಯಶಸ್ಸಿನ ಬಳಿಕ ಅಭಿಮಾನಿಗಳು ʻಕೆಜಿಎಫ್ 3′ ಕುರಿತು ಉತ್ಸುಕತೆಯಿಂದ ಎದುರು ನೋಡುತ್ತಿದ್ದಾರೆ. ಈ ಬೆನ್ನಲ್ಲೇ ಚಿತ್ರ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್‌ ತನ್ನ ಇನ್‌ಸ್ಟಾ ಖಾತೆಯಲ್ಲಿ ವಿಶೇಷ ಎಐ ವಿಡಿಯೋವೊಂದನ್ನ ಹಂಚಿಕೊಳ್ಳುವ ಮೂಲಕ ಯಶ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ಕೊಟ್ಟಿದೆ. ಇದನ್ನೂ ಓದಿ: ‘ಆಪರೇಷನ್ ಸಿಂಧೂರ’ ಟೈಟಲ್‌ಗೆ ಬೇಡಿಕೆ- ರಿಜಿಸ್ಟರ್ ಮಾಡಲು ಮುಗಿಬಿದ್ದ ನಿರ್ಮಾಪಕರು

ʻನರಾಚಿʼ ದ್ವಾರದಿಂದ ಆರಂಭವಾಗುವ ಈ ವಿಡಿಯೋ ಕೆಜಿಎಫ್‌-2ನಲ್ಲಿ ರಾಕಿ ಭಾಯ್‌ ಹಡಗಿನ ಪೂರ್ತಿ ಚಿನ್ನ ತುಂಬಿಕೊಂಡು ಸಮುದ್ರದ ಮಧ್ಯೆ ನಿಲ್ಲುವವರೆಗೆ ಸಾಗುತ್ತದೆ. ಕೆಜಿಎಫ್‌ ಚಾಪ್ಟರ್‌-1ನಲ್ಲಿ ಯಶ್‌ ನರಾಚಿಗೆ ಎಂಟ್ರಿಕೊಟ್ಟಾಗಿನಿಂದ ಇಡೀ ಕೆಜಿಎಫ್‌ ಸಾಮ್ರಾಜ್ಯಕ್ಕೆ ಸಾಮ್ರಾಟನಾದವರೆಗಿನ ಕಥೆಯನ್ನ ಈ ವಿಡಿಯೋನಲ್ಲಿ ಕಟ್ಟಿಕೊಡಲಾಗಿದೆ. ಅಲ್ಲದೇ ವಿಡಿಯೋ ಕೆಳಗೆ ʻನೀವು ರಾಕಿ ಭಾಯ್ ಜೊತೆಗೆ ಮುಂದುವರಿಯಿರಿ, ಇದು ಯಾರೂ ನಿಯಂತ್ರಿಸಲಾಗದ ಶಕ್ತಿʼ ಎಂದು ಇಂಗ್ಲಿಷ್‌ನಲ್ಲಿ ಬರೆದುಕೊಂಡಿದೆ. ಇದನ್ನೂ ಓದಿ: ಚಂದನ್ ಶೆಟ್ಟಿ ಜೊತೆ ಹಸೆಮಣೆ ಏರಿದ ‘ಸೀತಾ ವಲ್ಲಭ’ ನಟಿ ಸುಪ್ರೀತಾ

ಹೊಂಬಾಳೆ ಫಿಲ್ಮ್ಸ್‌ನ ಈ ವಿಡಿಯೋ ರಿಲೀಸ್‌ ಆಗ್ತಿದ್ದಂತೆ ಯಶ್‌ ಅಭಿಮಾನಿಗಳು ಸಖತ್‌ ಖುಷಿಯಲ್ಲಿದ್ದಾರೆ, ಕೆಜಿಎಫ್‌-3 ಯಾವಾಗ ಬರುತ್ತೆ? ಯಶ್‌ ಅವ್ರನ್ನ ಯಾವಾಗ ರಾಖಿಭಾಯ್‌ ಅವತಾರದಲ್ಲಿ ನೋಡ್ತೀವಿ ಅಂತೆಲ್ಲ ಕಾಮೆಂಟ್‌ನಲ್ಲಿ ಪ್ರಶ್ನೆ ಕೇಳ್ತಿದ್ದಾರೆ. ಇದನ್ನೂ ಓದಿ: ಜಗದೇಕ ವೀರುಡು ಅತಿಲೋಕ ಸುಂದರಿ ರೀ ರಿಲೀಸ್‌ – ರಿಮೇಕ್‌ ಆದ್ರೆ ಜಾನ್ವಿಯೇ ಬೇಕು ಎಂದ ಮೆಗಾಸ್ಟಾರ್‌! 

ಈಗ ಯಶಸ್ವಿ ಚಿತ್ರಗಳ ಪಾತ್ರವನ್ನು ಕೇಂದ್ರೀಕರಿಸಿ ಅದರ ಸೀಕ್ವೆಲ್‌ಗಳನ್ನು ಮಾಡುವ ರೂಢಿ ಎಲ್ಲೆಡೆ ಇದೆ. ಹಾಲಿವುಡ್‌ನಲ್ಲಿ ಗಮನಿಸಿದರೆ ‘ಫಾಸ್ಟ್‌ ಆ್ಯಂಡ್‌ ಫ್ಯೂರಿಯಸ್‌’ ಚಿತ್ರದ 9ಕ್ಕೂ ಅಧಿಕ ಸರಣಿಗಳು ಬಂದಿವೆ. ಬಾಲಿವುಡ್‌ನಲ್ಲಿ ‘ಗೋಲ್‌ಮಾಲ್‌’, ‘ಭೂಲ್‌ ಭುಲಯ್ಯಾ’, ಕಾಲಿವುಡ್‌ನಲ್ಲಿ ‘ಸಿಂಗಂ’ ಮುಂತಾದ ಸಿನಿಮಾಗಳ ಮೂರು ಸರಣಿಗಳಂತೂ ಬಂದಿವೆ. ಸ್ಯಾಂಡಲ್‌ವುಡ್‌ನಲ್ಲಿ ಈ ಹಿಂದೆ ʻಪೊಲೀಸ್‌ ಸ್ಟೋರಿʼ ಚಿತ್ರ ಮೂರು ಭಾಗಗಳಲ್ಲಿ ಕಾಣಿಸಿಕೊಂಡಿತ್ತು. ಈಗ ಮತ್ತೆ ಈ ಟ್ರೆಂಡ್‌ ಕಾಣಿಸಿಕೊಂಡಿದೆ.

ಸದ್ಯ ನಿರ್ದೇಶಕ ಪ್ರಶಾಂತ್‌ ನೀಲ್‌ ಕೂಡ ಜೂ. ಎನ್‌ಟಿಆರ್‌ ಜೊತೆಗಿನ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಇದರ ಬಳಿಕ ಅವರು ‘ಸಲಾರ್‌ 2’ ಸಿನಿಮಾ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. 2026ರಲ್ಲಿ ಸಲಾರ್ ಚಿತ್ರೀಕರಣ ಶುರುವಾದರೆ 2027ಕ್ಕೆ ಸಿನಿಮಾ ರಿಲೀಸ್‌ ಆಗಬಹುದು. ಆದ್ದರಿಂದ ‘ಕೆಜಿಎಫ್‌ 3’ ಚಿತ್ರ 2027 ಅಥವಾ 2028ರ ನಂತರ ಬರಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಚಿತ್ರದ ಮುಹೂರ್ತ ಯಾವಾಗಾ? ಶೂಟಿಂಗ್‌ ಎಷ್ಟು ವರ್ಷ ನಡೆಯುತ್ತೆ? ಯಾವಾಗ ಚಿತ್ರ ತೆರೆಗೆ ಬರಲಿದೆ ಎಂಬ ಮಿಲಿಯನ್‌ ಡಾಲರ್‌ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ…..