ಹಾಲಿವುಡ್ ನಟಿ ಆಂಬರ್ ಹರ್ಡ್ ಮತ್ತು ನಟ ಜಾನಿ ಡೆಪ್ ದಾಂಪತ್ಯ ಒಂದೇ ವರ್ಷದ್ದು : ದಂಡಕಟ್ಟಿದ್ದು 115 ಕೋಟಿ

ಹಾಲಿವುಡ್ ಸಿನಿಮಾ ರಂಗದ ಖ್ಯಾತ ಜೋಡಿಯಾದ ಜಾನಿ ಡೆಪ್ ಮತ್ತು ಆಂಬರ್ ಹರ್ಡ್ ಇಂದು ಮಾನನಷ್ಟ ಮೊಕದ್ದಮೆ ಕಾರಣದಿಂದಾಗಿ ಸಾಕಷ್ಟು ಸುದ್ದಿಯಾಗಿದ್ದಾರೆ. ಕೌಟುಂಬಿಕ ದೌರ್ಜನ್ಯ ಮತ್ತು ಮಾನನಷ್ಟ ಪ್ರಕರಣದ ತೀರ್ಪು ಹೊರ ಬಂದಿದ್ದು, ಅಚ್ಚರಿಯ ಸಂಗತಿ ಅಂದರೆ, ಇಬ್ಬರು ತಪ್ಪಿತಸ್ಥರು ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ : ನಾಳೆ ಉಪೇಂದ್ರ ಹೊಸ ಸಿನಿಮಾಗೆ ಮುಹೂರ್ತ : ಅತಿಥಿಗಳಾದ ನಾಲ್ವರು ಸ್ಟಾರ್ ನಟರು

ದಿ ರಮ್ ಡೈರಿ ಚಿತ್ರದ ಶೂಟಿಂಗ್ ವೇಳೆಯಲ್ಲಿ ಜಾನಿ ಡೆಪ್ ಅವರಿಗೆ ನಟಿ ಆಂಬರ್ ಹರ್ಡ್ ಪರಿಚಯವಾಗುತ್ತಾರೆ. ಪರಿಚಯವು ಸ್ನೇಹಕ್ಕೆ ತಿರುಗಿ, ಅದು ಪ್ರೇಮವಾಗಿ 2015ರಲ್ಲಿ ಈ ಜೋಡಿ ಮದುವೆ ಆಗುತ್ತದೆ. ಒಂದು ವರ್ಷ ಕೂಡ ಅವರು ಜತೆಯಾಗಿ ಇರುವುದಿಲ್ಲ. ಹೊಂದಾಣಿಕೆಯ ಕಾರಣದಿಂದಾಗಿ ಇಬ್ಬರೂ ವಿಚ್ಛೇದನ ಪಡೆಯಲು ಮುಂದಾಗುತ್ತಾರೆ. ಈ ವೇಳೆಯಲ್ಲಿ ಡ್ರಗ್ಸ್ ಮತ್ತು ಮದ್ಯದ ನಶೆಯಲ್ಲಿ ತಮ್ಮ ಮೇಲೆ ದೈಹಿಕ ದೌರ್ಜನ್ಯವಾಗಿದೆ ಎಂದು ಹರ್ಡ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಾರೆ. ವಿಚ್ಛೇದನವನ್ನೂ ಪಡೆಯುತ್ತಾರೆ. ಇದನ್ನೂ ಓದಿ : ಖ್ಯಾತ ಗಾಯಕ ಕೆಕೆ ಅಂತ್ಯ ಸಂಸ್ಕಾರ ಮುಂಬೈನಲ್ಲಿ : ಅಂತಿಮ ನಮನ ಸಲ್ಲಿಸಿದ ಬಿಟೌನ್

ಇದಾದ ನಂತರ 2018ರಲ್ಲಿ ಆಂಬರ್ ಹರ್ಡ್ ತಮ್ಮ ಬದುಕಿನಲ್ಲಿ ನಡೆದ ಕಹಿ ಘಟನೆ ಮತ್ತು ತಮ್ಮ ದಾಂಪತ್ಯದಲ್ಲಿ ಬಿಟ್ಟ ಬಿರುಕಿನ ಕಾರಣವನ್ನು ಹಾಗೂ ತಮ್ಮ ಮೇಲೆ ನಡೆದ ದೌರ್ಜನ್ಯವನ್ನು ಪತ್ರಿಕೆಯೊಂದರಲ್ಲಿ ಬರೆಯುತ್ತಾರೆ. ಜಾನಿ ಡೆಪ್ ತಮಗೆ ಏನೆಲ್ಲ ಹಿಂಸೆ ಕೊಟ್ಟ ಎನ್ನುವುದನ್ನು ಲೇಖನದಲ್ಲಿ ವಿವರಿಸುತ್ತಾರೆ. ಹಾಗಾಗಿ ಜಾನಿ ಡೆಪ್, ಮಾಜಿ ಪತ್ನಿಯ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸುತ್ತಾರೆ. ಇದನ್ನೂ ಓದಿ : ಕೆಕೆ ಕೊಂದಿದ್ದು ಕೋಲ್ಕತ್ತಾ, ಸಾವು ಮುಚ್ಚಿಹಾಕಲು ಸರ್ಕಾರಿ ಗೌರವ : ನಂದಿತಾ ಪುರಿ ಆಕ್ರೋಶ

ಆರು ವಾರಗಳ ಕಾಲ ನಡೆದ ವಿಚಾರಣೆಯಲ್ಲಿ ಮಾಜಿ ಪತ್ನಿಯು ಜಾನಿ ಡೆಪ್ ಅವರ ಮಾನಹಾನಿ ಮಾಡಿರುವುದು ಸಾಕ್ಷ್ಯಾಧಾರಗಳಿಂದ ರುಜುವಾತಾದ ಹಿನ್ನೆಲೆಯಲ್ಲಿ ಮಾಜಿಪತಿಗೆ 115 ಕೋಟಿ ರೂಪಾಯಿ ಪರಿಹಾರವನ್ನು ನೀಡಬೇಕು ಎಂದು ಕೋರ್ಟ್ ಹೇಳಿದೆ. ಅಲ್ಲದೇ, ಮಾಜಿಪತ್ನಿಗೆ ಜಾನಿ ಕಿರುಕುಳ ನೀಡಿರುವ ಕೆಲ ಸಾಕ್ಷ್ಯಗಳು ದೊರೆತಿರುವುದರಿಂದ ಮಾಜಿಪತ್ನಿಗೆ ಜಾನಿ 15 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಕೋರ್ಟ್ ಆದೇಶಿಸಿದೆ.

Comments

Leave a Reply

Your email address will not be published. Required fields are marked *