ಹೋಳಿ ಹಬ್ಬದ ಪ್ರಯುಕ್ತ ಪ್ರಾಣಿಗಳ ಮೇಲೆ ಬಣ್ಣ ಬಳಸದಿರಲು ಸೂಚನೆ: ಡಾ. ಉಮಾಪತಿ

ಬೆಂಗಳೂರು: ಹೋಳಿ ಹಬ್ಬದ ಸಂದರ್ಭದಲ್ಲಿ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು, ಹಸು, ಮೇಕೆ, ಕುರಿ ಇತ್ಯಾದಿಗಳ ಮೇಲೆ ಬಣ್ಣವನ್ನು ಬಳಸದಿರುವಂತೆ ಜಿಲ್ಲಾ ಪ್ರಾಣಿ ದಯಾ ಸಂಘದ ಕಾರ್ಯದರ್ಶಿಗಳು ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಬೆಂಗಳೂರು ನಗರ ಜಿಲ್ಲಾ ಉಪನಿರ್ದೇಶಕರಾದ ಡಾ. ಪಿ.ಉಮಾಪತಿಯವರು ಸಾರ್ವಜನಿಕರನ್ನು ಆಗ್ರಹಿಸಿದ್ದಾರೆ.

ರಾಸಯನಿಕವಾಗಲಿ ಅಥವಾ ನೈಸರ್ಗಿಕ ಬಣ್ಣವಾಗಲಿ ಪ್ರಾಣಿಗಳ ದೇಹದೊಳಗೆ ಚರ್ಮ, ಬಾಯಿ, ಕಣ್ಣು ಅಥವಾ ಮೂಗಿನ ಮೂಲಕ ಪ್ರವೇಶಿಸಿದ್ದಲ್ಲಿ ವಿವಿಧ ರೀತಿಯ ಅಲರ್ಜಿ, ವಾಂತಿ ಹಾಗೂ ಕುರುಡುತನವನ್ನೂ ಸಹ ತರುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಹೋಳಿ ಹಬ್ಬ – ಧಾರವಾಡದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ

ಜನರ ಮೋಜಿಗಾಗಿ ಆಡುವ ಬಣ್ಣದ ಆಟವು ಪ್ರಾಣಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಇದನ್ನು ತಡೆಯುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಪ್ರಾಣಿಗಳ ವಿರುದ್ಧ ಕ್ರೌರ್ಯ ತಡೆ ಕಾಯ್ದೆ 1960(PCAACT) ಅನ್ವಯ ಇದು ಕಾನೂನು ಬಾಹಿರವಾಗಿದ್ದು ಅಂತಹ ಯಾವುದೇ ಪ್ರಕರಣಗಳು ವರದಿಯಾದ್ದಲ್ಲಿ, ಕಾಯ್ದೆಯ ನಿಯಮಗಳ ಅನ್ವಯ ಕ್ರಮ ಜರುಗಿಸಲಾಗುವುದೆಂದು ಅವರು ಎಚ್ಚರಿಸಿದ್ದಾರೆ.

 

Comments

Leave a Reply

Your email address will not be published. Required fields are marked *