ಹೆಚ್‍ಡಿ.ರೇವಣ್ಣರನ್ನು ರಾವಣನಿಗೆ ಹೋಲಿಸಿ ಜರಿದ ಎಚ್.ಎಂ.ವಿಶ್ವನಾಥ್

ಹಾಸನ : ಮಾಜಿ ಸಚಿವ ಹೆಚ್‍ಡಿ.ರೇವಣ್ಣ ಅವರನ್ನು ರಾವಣನಿಗೆ ಹೋಲಿಸಿ ಬಿಜೆಪಿ ಎಂಎಲ್‍ಸಿ ಅಭ್ಯರ್ಥಿ ವಿಶ್ವನಾಥ್ ಜರಿದಿದ್ದಾರೆ.

Revanna

ಹಾಸನದಲ್ಲಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ವಿಶ್ವನಾಥ್, ಜೆಡಿಎಸ್ ನಲ್ಲಿ ಬೇರೆ ಯಾರೂ ಅಭ್ಯರ್ಥಿಗಳಿರಲಿಲ್ವಾ. ರಿಯಲ್ ಎಸ್ಟೇಟ್ ಉದ್ಯಮಿಯನ್ನು ಬೆಂಗಳೂರಿನಲ್ಲಿ ಎಂ.ಎಲ್.ಸಿ. ಮಾಡಿದ್ರಿ. ಇಡೀ ಮನೆಯವರೆಲ್ಲಾ ಸೇರಿಕೊಂಡು ಕಳೆದ ಭಾರೀ ಪಟೇಲ್ ಶಿವರಾಂ ಅವರನ್ನು ಸೋಲಿಸಿದ್ದರು. ಮಾತು ಎತ್ತಿದ್ರೆ ಎಲ್ಲಾ ದೇವರ ಕೃಪೆ ಅಂತೀರಾ. ಮಹಿಷಾಸುರ ಮರ್ದನ ಮಾಡಿದ್ದು ದೇವರೇ. ರಾವಣನ ದುಷ್ಟ ಬುದ್ದಿಗೆ ಶ್ರೀರಾಮಚಂದ್ರ ಅವನನ್ನು ಕೊಂದ. ರಾವಣನ ಅಂಶ ನಿಮ್ಮ ಹತ್ರಾನು ಇದೆ. ಈ ಜಿಲ್ಲೆಯ ಜನರನ್ನು ಕಾಡುತ್ತಿದ್ದೀರಾ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸೂರಜ್ ರೇವಣ್ಣ ವಿರುದ್ಧ ಹೈಕೋರ್ಟ್‍ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾ

ಹಾಸನಾಂಬೆ ದೇವಾಲಯದ ಹುಂಡಿಯಲ್ಲಿ ನಿಮ್ಮ ವಿರುದ್ಧ ಚೀಟಿ ಹಾಕಿದ್ದು ಅವರೇ. ನಿಮಗೆ ಕಿಂಚಿತ್ತು, ಗೌರವ, ನೈತಿಕತೆ ಇದ್ದರೆ ನಿಮ್ಮ ಮಕ್ಕಳನ್ನು ಚುನಾವಣೆಗೆ ನಿಲ್ಲಿಸುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ಹತ್ತು ಮೀಟರ್ ಆಳದಲ್ಲಿ ಸ್ಕೂಬಾ ಡೈವ್ ಮಾಡಿದ್ರು ಅಪ್ಪು

Comments

Leave a Reply

Your email address will not be published. Required fields are marked *