ಕಾಶ್ಮೀರದಲ್ಲಿ ಪಂಡಿತರ ಹತ್ಯೆ – ಹಿಜ್ಬುಲ್‌ ಉಗ್ರ ಬೆಂಗಳೂರಿನಲ್ಲಿ ಸಿಕ್ಕಿ ಬಿದ್ದಿದ್ದು ಹೇಗೆ?

ಬೆಂಗಳೂರು: ಬಂಧನಕ್ಕೆ ಒಳಗಾದ ಜ್ಬುಲ್‌ ಉಗ್ರ ತಾಲೀಬ್ ಹುಸೇನ್ ಬಗ್ಗೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಕಾಶ್ಮೀರಿ ಪಂಡಿತರ ಮಾರಣಹೋಮದಲ್ಲಿ ತಾಲೀಬ್ ಹುಸೇನ್ ಕೈವಾಡದ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಕಳೆದ 2 ತಿಂಗಳಿಂದ ಕಾಶ್ಮೀರದಲ್ಲಿ ಹಿಂದೂಗಳು, ಕಾಶ್ಮೀರಿ ಪಂಡಿತರ ಹತ್ಯೆಗಳ ಸರಣಿ ಹತ್ಯೆಗಳು ನಡೆಯುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಇಲಾಖೆ, ಕಾಶ್ಮೀರ ತೊರೆದು ಬೇರೆ ಬೇರೆ ರಾಜ್ಯಗಳಲ್ಲಿ ತಲೆಮರೆಸಿಕೊಂಡಿರುವ ಹಲವು ಉಗ್ರರ ಶೋಧ ನಡೆಸಿತ್ತು.

ಈ ವೇಳೆ ಹತ್ಯೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಗೆ ಬೆಂಗಳೂರಿನಿಂದ ಪದೇ ಪದೇ ಫೋನ್ ಸಂಪರ್ಕ ಮಾಡಿರುವುದು ಪತ್ತೆಯಾಗಿತ್ತು. ಈ ಫೋನ್ ಕಾಲ್ ಆಧರಿಸಿ ಜಮ್ಮು ಕಾಶ್ಮೀರ ಪೊಲೀಸರು, ಬೆಂಗಳೂರಿನ ಶ್ರೀರಾಂಪುರದ ತನಕ ಬಂದು ತಾಲೀಬ್ ಹುಸೇನ್‍ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕಾಂಪೌಂಡ್ ಒಳಗಡೆ ನುಗ್ಗಿತು ಕಾರು

ವಿಶೇಷ ಏನೆಂದರೆ ಬಂಧನಕ್ಕೂ ಮುನ್ನ ಬೆಂಗಳೂರಲ್ಲಿ ತಾಲೀಬ್ ಹುಸೇನ್ 8 ಮನೆಗಳನ್ನು ಬದಲಾಯಿಸಿದ್ದಾನೆ. ಅಷ್ಟೇ ಅಲ್ಲದೆ ಇಲ್ಲಿ ಬದುಕಲು ಕಷ್ಟವಾಗುತ್ತಿದೆ. ಎರಡು ದಿನದಲ್ಲಿ ಬೇರೆ ಕಡೆ ಹೋಗಿ ಏನಾದರೂ ಕೆಲಸ ಮಾಡುತ್ತೇನೆ ಎಂದಿದ್ದ.

ಹುಸೇನ್ ಪತ್ನಿ ಊರಿಗೆ ಹೋದ ವೇಳೆ ಮನೆಗೆ ಅಪರಿಚಿತ ಯುವಕರು ಬಂದು ಹೋಗುತ್ತಿದ್ದರು. ಸ್ಥಳೀಯರು ಪ್ರಶ್ನೆ ಮಾಡಿದಾಗ ನಮ್ಮ ಕಡೆಯವರು ಬೆಂಗಳೂರಿಗೆ ಬಂದಾಗ ಇಲ್ಲಿಗೆ ಬಂದು ಹೋಗುತ್ತಿದ್ದರು ಎಂದು ಉತ್ತರಿಸಿದ್ದ. ಹೀಗಾಗಿ ಬೆಂಗಳೂರಿನಿಂದಲೇ ಯುವಕರಿಗೆ ತಾಲೀಬ್ ಹುಸೇನ್ ತರಬೇತಿ ಕೊಡ್ತಿದ್ನಾ ಎಂಬ ಅನುಮಾನ ಮೂಡಿದೆ. ಇದನ್ನೂ ಓದಿ: ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಕಾರಿ ಟ್ವೀಟ್ – ಬಿಜೆಪಿ ಮುಖಂಡ ಅರೆಸ್ಟ್

Comments

Leave a Reply

Your email address will not be published. Required fields are marked *