ಮಲ ಮಗಳ ಮೇಲೆ HIV ಹೊಂದಿದ್ದ ತಂದೆಯಿಂದ ಅತ್ಯಾಚಾರ – ಆರೋಪಿ ಬಂಧನ

RAPE CASE

ಮುಂಬೈ: 14 ವರ್ಷದ ಮಲ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ 45 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ವಾರ ಬಾಲಕಿಯ ತಾಯಿ ಮನೆಯಲ್ಲಿ ಇಲ್ಲದ ವೇಳೆ ಈ ಘಟನೆ ನಡೆದಿದ್ದು, ಆರೋಪಿ ದಕ್ಷಿಣ ಮುಂಬೈನ ಬಾಂಬೆ ಆಸ್ಪತ್ರೆ ಬಳಿ ಗುಡಿಸಿಲಿನಲ್ಲಿ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಆರೋಪಿಯು (ಮಾನವ ಇಮ್ಯುನೊ ಡಿಫಿಷಿಯನ್ಸಿ ವೈರಸ್) ಎಚ್‍ಐವಿ ರೋಗ ಹೊಂದಿದ್ದಾನೆ. ಇದೀಗ ಆತನಿಂದ ಬಾಲಕಿಗೂ ಸೋಂಕು ತಗುಲಿದೆಯೇ ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ಬಾಲಕಿ ತಾಯಿ ಕೂಡ ಎಚ್‍ಐವಿ ಸೋಂಕು ಹೊಂದಿದ್ದಾರೆ ಎಂದು ತಿಳಿಸಲಾಗಿದೆ.

ಇನ್ನೂ ಈ ವಿಚಾರವನ್ನು ಯಾರಿಗೂ ಹೇಳದಂತೆ ಆರೋಪಿ ಬಾಲಕಿಗೆ ಬೆದರಿಕೆಯೊಡ್ಡಿದ್ದು, ಬಾಲಕಿಯು ತನ್ನ ನೆರೆಹೊರೆಯ ಮಹಿಳೆಯ ಬಳಿ ತನಗಾದ ಕಷ್ಟವನ್ನು ಹೇಳಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಮಹಿಳೆ ಆಕೆಯನ್ನು ಠಾಣೆಗೆ ಕರೆದುಕೊಂಡು ಹೋಗಿ ದೂರು ನೀಡಿದ್ದಾಳೆ. ಇದನ್ನೂ ಓದಿ: ಮತದಾನ ಚಲಾಯಿಸಿ ಹೊರ ಬರುತ್ತಿದ್ದಂತೆಯೇ ವೃದ್ಧ ಸಾವು – ಕಾರಣವೇನು ಗೊತ್ತಾ?

POLICE JEEP

ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ, 2012 ರ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಆಜಾದ್ ಮೈದಾನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮನೆಗೆ ಪೊಲೀಸರ ತಂಡ ಭೇಟಿ ನೀಡಿ ಅದೇ ರಾತ್ರಿ ಆತನನ್ನು ಬಂಧಿಸಿದ್ದಾರೆ.

ಮಕ್ಕಳ ಕಲ್ಯಾಣ ಸಮಿತಿಯ ತಜ್ಞರ ತಂಡವು ಬಾಲಕಿಗೆ ಸಲಹೆ ನೀಡಲಿದ್ದು, ಇದೀಗ ಬಾಲಕಿಯ ಮೇಲೆ ಈ ಹಿಂದೆ ಒಂದೇ ಬಾರಿ ಅಥವಾ ಹಲವು ಬಾರಿ ಅತ್ಯಾಚಾರ ನಡೆದಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಿಎಂ ಯೋಗಿ ವೇಷ ತೊಟ್ಟು ಮತಗಟ್ಟೆಗೆ ಬಂದ ವ್ಯಕ್ತಿ – ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿ ಬಿದ್ದ ಜನ

Comments

Leave a Reply

Your email address will not be published. Required fields are marked *