ಒಂದೇ ಗಂಟೆಯೊಳಗೆ 120ಕ್ಕೂ ಹೆಚ್ಚು ಹಿಜ್ಬುಲ್ಲಾ ಉಗ್ರರ ತಾಣಗಳನ್ನು ಧ್ವಂಸ ಮಾಡಿದ ಇಸ್ರೇಲ್

ಟೆಲ್‌ ಅವೀವ್:‌ ಒಂದೇ ಗಂಟೆಯ ಅವಧಿಯಲ್ಲಿ 120ಕ್ಕೂ ಹೆಚ್ಚು ಹಿಜ್ಬುಲ್ಲಾ ಉಗ್ರರ ಕಚೇರಿಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ವಾಯುಪಡೆ ದಾಳಿ ನಡೆಸಿದೆ.

ದಕ್ಷಿಣ ಲೆಬನಾನ್‌ನಲ್ಲಿ ಒಂದು ಗಂಟೆಯೊಳಗೆ 120 ಕ್ಕೂ ಹೆಚ್ಚು ಭಯೋತ್ಪಾದಕರ ಅಡಗುದಾಣಗಳನ್ನು ಧ್ವಂಸ ಮಾಡಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಸೋಮವಾರ ಉಗ್ರರ ವಿರುದ್ಧ ಕೈಗೊಂಡ ವ್ಯಾಪಕ ದಾಳಿಯ ಭಾಗವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ. ದಾಳಿಯಲ್ಲಿ ಸಾವು ನೋವಿನ ಬಗ್ಗೆ ಯಾವುದೇ ಮಾಹಿತಿಯನ್ನು ಇಸ್ರೇಲ್‌ ಹಂಚಿಕೊಂಡಿಲ್ಲ.

ಉಗ್ರರ ವಿರುದ್ಧ ಐಎಎಫ್ (ವಾಯು ಪಡೆ) ವ್ಯಾಪಕವಾದ ವೈಮಾನಿಕ ಕಾರ್ಯಾಚರಣೆಯನ್ನು ನಡೆಸಿತು. ಈ ವೇಳೆ ದಕ್ಷಿಣ ಲೆಬನಾನ್‌ನಲ್ಲಿ ಒಂದು ಗಂಟೆಯೊಳಗೆ 120 ಕ್ಕೂ ಹೆಚ್ಚು ಭಯೋತ್ಪಾದಕರ ತಾಣಗಳನ್ನು ಹೊಡೆಯಲಾಗಿದೆ ಎಂದು ಇಸ್ರೇಲ್‌ ಸೇನೆ ತಿಳಿಸಿದೆ.

ಇಸ್ರೇಲ್ ಮತ್ತು ಇರಾನ್ (Israel Iran War) ನಡುವೆ ಸೇಡು, ಪ್ರತೀಕಾರದ ದಾಳಿಗಳು ತೀವ್ರಗೊಳ್ಳುತ್ತಿವೆ. ಬೈರೂತ್‌ ನಗರದ ಮೇಲೆ ಇಸ್ರೇಲ್‌ನ ಪಡೆಗಳು ವೈಮಾನಿಕ ದಾಳಿ ಮುಂದುವರಿಸಿವೆ. ಇರಾನ್‌ ಸುಪ್ರೀಂ ಲೀಡರ್‌ ಇಸ್ರೇಲ್‌ ವಿರುದ್ಧ ಗುಡುಗಿದ ಬಳಿಕ ಇಸ್ರೇಲ್‌ ತನ್ನ ವಾಯುದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ.

ಇನ್ನೂ ಗಾಜಾದಲ್ಲಿನ (Gaza) ಮಸೀದಿಯ (Mosque) ಮೇಲೆ ಇಸ್ರೇಲ್‌ (Israel) ವಾಯುಪಡೆ ಶುಕ್ರವಾರ ನಡೆಸಿದ್ದ ವೈಮಾನಿಕ ದಾಳಿಯಿಂದ 26 ಮಂದಿ ಸಾವಿಗೀಡಾಗಿದ್ದರು. ಈ ಬೆನ್ನಲ್ಲೇ ಹಮಾಸ್‌ ಕೂಡ ಕೌಂಟರ್‌ ಅಟ್ಯಾಕ್‌ ಮಾಡಿತ್ತು. ಇಸ್ರೇಲ್‌ ವೈಮಾನಿಕ ದಾಳಿ ಬೆನ್ನಲ್ಲೇ ಗಾಜಾದಿಂದ ರಾಕೆಟ್‌ಗಳನ್ನು (Rocket Fired) ಹಾರಿಸಿತ್ತು.