ಹಿಟ್ ಆಂಡ್ ರನ್ ಕುಮಾರಣ್ಣ ಈಗ ಕಣ್ಣೀರ ಸ್ವಾಮಿಯಾಗಿ ಬದಲು-ಬಿಜೆಪಿ ವ್ಯಂಗ್ಯ

ಬೆಂಗಳೂರು: ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಣ್ಣೀರು ಹಾಕಿ ಎರಡು ದಿನ ಕಳೆದರೂ ವಿರೋಧ ಪಕ್ಷ ಬಿಜೆಪಿ ಇದನ್ನೇ ಅಸ್ತ್ರವಾಗಿ ಬಳಸಿಕೊಂಡು ವಾಗ್ದಾಳಿ ನಡೆಸುತ್ತಿದೆ. ಇಂದು ಬಿಜೆಪಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಿಟ್ ಆಂಡ್ ರನ್ ಕುಮಾರಣ್ಣ, ಈಗ ಕಣ್ಣೀರ ಸ್ವಾಮಿಯಾಗಿ ಬದಲಾಗಿದ್ದಾರೆ ಎಂದು ಟೀಕಿಸಿದೆ.

ಈಗಾಗಲೇ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಾಯಕರು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಬಿಜೆಪಿ ರಾಜ್ಯ ನಾಯಕರು ಸೇರಿದಂತೆ ಕೇಂದ್ರ ಸಚಿವರು ಸಿಎಂ ಕಣ್ಣೀರಿಗೆ ವ್ಯಂಗ್ಯ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರ ರಾಜಕೀಯ ಜೀವನ ಸುಳ್ಳು ಭರವಸೆಗಳು, ಕುಟುಂಬ ಕಲ್ಯಾಣ ಹಾಗೂ ನಾಟಕಗಳಿಗೆ ತಿರುಗಿದೆ. ಸಿಎಂ ಈಗ ಬಹಳ ಅಸಹಾಯಕರಾಗಿದ್ದು, ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಸಮರ್ಥರಾಗಿದ್ದಾರೆ. ತಮ್ಮ ಸ್ವಾಭಿಮಾನಕ್ಕೆ ಬೆಲೆಕೊಟ್ಟು ಮೊದಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದೆ.

ಈ ಮೊದಲು ಸಿಎಂ ಒಬ್ಬರು ಒಳ್ಳೆಯ ಕಲಾವಿದರು. ತಮ್ಮ ನಟನೆಯ ಮೂಲಕ ನಾಡಿನ ಜನರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ. ಸಿಎಂ ಅವರ ಕಣ್ಣೀರು ಹಾಕುವ ನಟನೆಗೆ ‘ಉತ್ತಮ ನಟ’ ಪ್ರಶಸ್ತಿ ನೀಡಬೇಕೆಂದು ಟೀಕಿಸಿತ್ತು.

Comments

Leave a Reply

Your email address will not be published. Required fields are marked *