ಇತಿಹಾಸ ಪ್ರಸಿದ್ಧ ದೇವರಹೋಸಹಳ್ಳಿ ಬ್ರಹ್ಮರಥೋತ್ಸವ – ಹಿಂದೂ, ಮುಸ್ಲಿಂ ಭಾವೈಕ್ಯ ಸಾಕ್ಷಿ

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತೀದೊಡ್ಡ ಬ್ರಹ್ಮರಥೋತ್ಸವ ಕೋವಿಡ್ ನಂತರ ಯಶಸ್ವಿಯಾಗಿದೆ. ಸುಮಾರು 1 ಲಕ್ಷ ಭಕ್ತರ ಸಮ್ಮುಖದಲ್ಲಿ ದೇವರಹೊಸಹಳ್ಳಿಯ ಶ್ರೀ ಭದ್ರಕಾಳಮ್ಮ ಸಮೇತ ವೀರಭದ್ರಸ್ವಾಮಿ ವೈಭವಯುತವಾದ ಬ್ರಹ್ಮರಥೋತ್ಸವ ಸಂಪನ್ನವಾಗಿದೆ.

ಬ್ರಹ್ಮರಥೋತ್ಸವದಲ್ಲಿ ಒಂದೆಂಡೆ ಸಾಲು-ಸಾಲು ಭಕ್ತರು, ಜಾನಪದ ಕಲಾ ಪ್ರಕಾರಗಳು, ಅರವಂಟಿಕೆಗಳು, ನೆಲಮಂಗಲ ತಾಲೂಕಿನ ದೇವರಹೊಸಹಳ್ಳಿಯ ಬ್ರಹ್ಮರಥೋತ್ಸವ ಇಂದು ಮಿಥುನ ಲಗ್ನದಲ್ಲಿ 01.30ಕ್ಕೆ ಸಂಪನ್ನಗೊಂಡಿತ್ತು. ಪ್ರಕೃತಿ ಮಡಿಲಿನಲ್ಲಿರುವ ಶ್ರೀ ವೀರಭದ್ರ ಸ್ವಾಮಿಗೆ ಹಲವಾರು ಭಕ್ತರು ಉಘೇ ಹೇಳಿದರು. ಮುಜರಾಯಿ ಇಲಾಖೆ, ಪೆÇಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಗ್ನಿಶಾಮಕ ಠಾಣೆಯ ಸಹಕಾರದೊಂದಿಗೆ, ಕೋವಿಡ್ ನಂತರ ಅತ್ಯಂತ ದೊಡ್ಡ ಬ್ರಹ್ಮರಥೋತ್ಸವ ಯಶಸ್ವಿಯಾಯಿತು. ಇದನ್ನೂ ಓದಿ: ಬಿಹಾರ ದಿವಸ್ ಆಚರಣೆಯಲ್ಲಿ ಆಹಾರ ಸೇವಿಸಿದ 100 ಮಕ್ಕಳು ಆಸ್ಪತ್ರೆಗೆ ದಾಖಲು

ಪ್ರಧಾನ ಅರ್ಚಕರಾದ ಜಗಜ್ಯೋತಿ ಬಸವೇಶ್ವರ್ ಈ ವೇಳೆ ಮಾತನಾಡಿದ್ದು, ಗೂಳೂರಿನ ಪ್ರಾಂತ್ಯದ ಅಂದಿನ ಚಿಕ್ಕದೇವರಾಜ ಅರಸರು 1652ರಲ್ಲಿ ಜೀರ್ಣೋದ್ಧಾರ ಮಾಡಿದ ಸುಮಾರು 500 ವರ್ಷಗಳ ಪುರಾತನ ಇತಿಹಾಸವಿರುವ ದೇವಾಲಯವಾಗಿದೆ. ಕಳೆದ ಬಾರಿ ಕೋವಿಡ್‍ನಿಂದಾಗಿ ಬೆಳಗಿನ ಜಾವವೇ ರಥೋತ್ಸವ ಎಳೆದಿದ್ದರು ಎಂದು ವಿವರಿಸಿದರು.

ಕೋವಿಡ್‍ನಿಂದ ಮುಕ್ತವಾದ ಈ ವರ್ಷ ಸರಿಯಾದ ವೇಳೆಯಲ್ಲಿ ರಥೋತ್ಸವ ನಡೆಯಿತು. ಇಂದು ರಾತ್ರಿ ಕಲ್ಯಾಣೋತ್ಸವ, ನಾಳೆ ಮುತ್ತಿನ ಪಲ್ಲಕ್ಕಿ, ಸಿಂಹವಾಹನದ ಜೊತೆಗೆ ಸೋಮವಾರದವರೆಗೆ ಎಲ್ಲ ಪ್ರಕ್ರಿಯೆ ನಡೆದು, ಮಂಗಳವಾರ ದೆವ್ವದ ಜಾತ್ರೆಯಿಂದ ಕೊನೆಗಾಣುತ್ತದೆ ಎಂದರು. ಇದನ್ನೂ ಓದಿ:  ವಿಸ್ತಾರವಾದ, ಪ್ರತ್ಯೇಕವಾದ ನಿಲ್ಲುವವರೆಗೂ ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ: ಮುತಾಲಿಕ್

ರಾಜ್ಯದ ಕೆಲವು ದೇವಾಲಯದ ಜಾತ್ರೆ ವೇಳೆ ಮುಸ್ಲಿಂ ಸಮುದಾಯದ ಜನರು ಅಂಗಡಿ ತೆರೆಯಲು ಅವಕಾಶ ನೀಡಿಲ್ಲ. ಆದರೆ ಇಲ್ಲಿ ಹಿಂದೂ, ಮುಸ್ಲಿಂ ಸಮುದಾಯದ ಬೇಧ-ಭಾವವಿಲ್ಲದೆ ಎಲ್ಲರು ಒಟ್ಟಾಗಿ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದು ಭಾವೈಕ್ಯತೆಗೆ ಕಾರಣವಾಗಿದೆ.

Comments

Leave a Reply

Your email address will not be published. Required fields are marked *