ವಿಡಿಯೋ: ಹಾಡಹಗಲೇ ನಡುರಸ್ತೆಯಲ್ಲಿ ಹಿಂದೂ ಸಂಘರ್ಷ ಸೇನೆ ಮುಖಂಡನಿಗೆ ಗುಂಡಿಟ್ಟು ಕೊಲೆ

ಚಂಡೀಗಢ: ಹಿಂದೂ ಸಂಘರ್ಷ ಸೇನೆ ಮುಖಂಡರೊಬ್ಬರನ್ನು ನಡುರಸ್ತೆಯಲ್ಲೇ ಗುಂಡಿಕ್ಕಿ ಕೊಲೆ ಮಾಡಿರೋ ಆಘಾತಕಾರಿ ಘಟನೆ ಪಂಜಾಬ್‍ನ ಅಮೃತ್‍ಸರ್‍ನಲ್ಲಿ ಸೋಮವಾರದಂದು ನಡೆದಿದೆ.

ಹಿಂದೂ ಸಂಘರ್ಷ ಸೇನೆಯ ಜಿಲ್ಲಾ ಮುಖ್ಯಸ್ಥರಾದ ವಿಪಿನ್ ಕುಮಾರ್ ಕೊಲೆಯಾದ ವ್ಯಕ್ತಿ. ಇಲ್ಲಿನ ಭರತ್‍ನಗರದ ಮಾರ್ಕೆಟ್‍ನಲ್ಲಿ ಹಾಡಹಗಲೇ ಕೊಲೆ ನಡೆದಿದ್ದು, ಘಟನೆಯ ದೃಶ್ಯ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕುಮಾರ್ ಅವರು ಬೈಕ್‍ನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರ ಜೊತೆ ಮಾತನಾಡುತ್ತಿದ್ದಾಗ ಏಕಾಏಕಿ ಗುಂಡೇಟು ಬಿದ್ದಿದೆ. ಕೂಡಲೇ ಕುಮಾರ್ ಕೆಳಗೆ ಬಿದ್ದಿದ್ದಾರೆ. ಕುಮಾರ್ ಜೊತೆಗಿದ್ದ ಮತ್ತೋರ್ವ ವ್ಯಕ್ತಿ ಸ್ಥಳದಿಂದ ಓಡಿಹೋಗಿದ್ದಾರೆ. ನಂತರ ಇಬ್ಬರು ದುಷ್ಕರ್ಮಿಗಳು ಬಂದು ಕುಮಾರ್ ಅವರ ಮೇಲೆ ಮತ್ತೆ ಗುಂಡಿನ ದಾಳಿ ನಡೆದಿದ್ದಾರೆ. ಆರೋಪಿಗಳು ಕುಮಾರ್ ಅವರ ಮೇಲೆ ಸುಮಾರು 5 ಸುತ್ತು ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.

ಘಟನೆಯ ಬಳಿಕ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಕುಮಾರ್ ಅವರು ಹಿಂದೂ ಸಂಘರ್ಷ ಸೇನೆಯ ಮುಖಂಡರು ಮಾತ್ರವಲ್ಲದೆ ಬಡವರಿಗೆ ಆಹಾರ ನೀಡೋ ಕೆಲಸ ಮಾಡುವ ಜೈ ಶಂಕರ್ ವೆಲ್ಫೇರ್ ಸಸೈಟಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

https://www.youtube.com/watch?v=OVyek18dW_s

Comments

Leave a Reply

Your email address will not be published. Required fields are marked *